ನವದೆಹಲಿ: ಲಾಕ್‌ಡೌನ್ (Lockdown) ಅನ್ನು ಇನ್ನೂ 15 ದಿನ ವಿಸ್ತರಿಸಲಾಗಿದೆ. ಆದರೆ ಇದರ ಮಧ್ಯೆ, ಗೃಹ ವ್ಯವಹಾರಗಳ ಸಚಿವಾಲಯದಿಂದ ನಿಮಗಾಗಿ ಪರಿಹಾರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರ ನಿಮಗಾಗಿ ಆನ್‌ಲೈನ್ ಶಾಪಿಂಗ್ (Online Shopping) ಗೆ ಅವಕಾಶ ಮಾಡಿಕೊಟ್ಟಿದೆ. ಈಗ ನೀವು ಮನೆಯಲ್ಲಿಯೇ ಕುಳಿತು ಫ್ರೀಜ್‌ನಿಂದ ಹಿಡಿದು ಎಸಿ ಮತ್ತು ಬೇಸಿಗೆ ಬಟ್ಟೆಗಳವರೆಗೆ ಎಲ್ಲವನ್ನೂ  ಖರೀದಿಸಬಹುದು. ಇದರೊಂದಿಗೆ ಶಾಪಿಂಗ್ ಗಾಗಿ ಹೊರ ಹೋದರೆ ಸೋಂಕು ತಗುಲುವ ಭಯವೂ ದೂರವಾಗುತ್ತದೆ.


COMMERCIAL BREAK
SCROLL TO CONTINUE READING

ಈ ಪ್ರದೇಶಗಳಲ್ಲಿ ಸೇವೆಯನ್ನು ಪ್ರಾರಂಭಿಸಲಾಗಿದೆ:
ಕರೋನಾ ವೈರಸ್ ಕೋವಿಡ್-19 (Covid-19) ಸೋಂಕಿನ (ಆರೆಂಜ್ ವಲಯ) ಮತ್ತು ಸೋಂಕಿನಿಂದ ಮುಕ್ತ ಪ್ರದೇಶಗಳಲ್ಲಿ (ಹಸಿರು ವಲಯ) ಪ್ರದೇಶಗಳಲ್ಲಿ ವಿವಿಧ ವಾಣಿಜ್ಯ ಚಟುವಟಿಕೆಗಳು ಮತ್ತು ಜನರ ಚಲನೆಗೆ ಸರ್ಕಾರ ವಿನಾಯಿತಿ ನೀಡಿದೆ. ಹೊಸ ನಿಯಮಗಳ ಪ್ರಕಾರ ಕೆಂಪು ವಲಯದಲ್ಲಿರುವ ಇ-ಕಾಮರ್ಸ್ ಕಂಪನಿಗಳು ಇನ್ನೂ ಹೆಚ್ಚಿನ ಸೋಂಕು ಇರುವ ಪ್ರದೇಶಕ್ಕೆ ಅಗತ್ಯ ವಸ್ತುಗಳನ್ನು ಮಾತ್ರ ಪೂರೈಸಬಲ್ಲವು. ಆದಾಗ್ಯೂ ಹಸಿರು ಮತ್ತು ಕಿತ್ತಳೆ ಪ್ರದೇಶಗಳಲ್ಲಿ ಅಗತ್ಯ ಮತ್ತು ಅನಿವಾರ್ಯ ವಸ್ತುಗಳನ್ನು ಪೂರೈಸಬಹುದು.


ಅಮೆಜಾನ್ ಇಂಡಿಯಾ ವಕ್ತಾರರು ಆರೆಂಜ್ ಮತ್ತು ಹಸಿರು ಪ್ರದೇಶಗಳಲ್ಲಿ ಇ-ಕಾಮರ್ಸ್ ಅನ್ನು ಅನುಮತಿಸುವ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಲಕ್ಷಾಂತರ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಮತ್ತು ವ್ಯಾಪಾರಿಗಳು ಈಗ ವ್ಯವಹಾರವನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ. ಕೆಂಪು ಪ್ರದೇಶಗಳಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಕಂಪನಿಯು ಅನುಸರಿಸಲಿದೆ ಎಂದು ತಿಳಿಸಿದ್ದಾರೆ.


ಪೇಟಿಎಂ ಮಾಲ್‌ನ (PayTM Mall) ಹಿರಿಯ ಉಪಾಧ್ಯಕ್ಷ ಶ್ರೀನಿವಾಸ್ ಮೋಥೆ "ಹಸಿರು ಮತ್ತು ಕಿತ್ತಳೆ  ಪ್ರದೇಶಗಳಲ್ಲಿ ಅಗತ್ಯವಿಲ್ಲದ ವಸ್ತುಗಳ ಇ-ಕಾಮರ್ಸ್ ಸರಬರಾಜಿಗೆ ವಿನಾಯಿತಿ ನೀಡುವ ಮೂಲಕ ಸರ್ಕಾರ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದು ಹೇಳಿದರು.


ಹವಾನಿಯಂತ್ರಣಗಳು, ರೆಫ್ರಿಜರೇಟರ್‌ಗಳು ಮತ್ತು ಬೇಸಿಗೆಯ ಬಟ್ಟೆಗಳಂತಹ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರು ಲಾಕ್‌ಡೌನ್ ಮಾರ್ಗಸೂಚಿಗಳಲ್ಲಿ ಸ್ವಲ್ಪ ಪರಿಹಾರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು. ಜನರು ಮನೆಯಿಂದ ಕೆಲಸ ಮತ್ತು ಅಧ್ಯಯನವನ್ನು ಮುಂದುವರಿಸಲು ಲ್ಯಾಪ್‌ಟಾಪ್, ಮೊಬೈಲ್ ಫೋನ್, ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಲೇಖನ ಸಾಮಗ್ರಿಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ಈ ಹಂತದಿಂದ ಜನರಿಗೆ ದೊಡ್ಡ ಪರಿಹಾರ ಸಿಗಲಿದೆ ಎಂದರು.