ಚೆನ್ನೈ : ತಮಿಳುನಾಡು ಸರ್ಕಾರವು ಸರ್ಕಾರಿ ಶಾಲೆಗಳಲ್ಲಿನ ಹೆಣ್ಣುಮಕ್ಕಳಿಗೆ ಅವರ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಮತ್ತು ಸಹಾಯ ಮಾಡಲು ಮಾಸಿಕ ಠೇವಣಿ ನೀಡಲು ನಿರ್ಧರಿಸಿದೆ ಎಂದು ರಾಜ್ಯ ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರು ಘೋಷಣೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 25,000 ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಪ್ರಸ್ತಾಪಕ್ಕೆ ಪಂಜಾಬ್ ಸರ್ಕಾರ ಗ್ರೀನ್ ಸಿಗ್ನಲ್


ಸರ್ಕಾರಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿನಿಯರ ಬ್ಯಾಂಕ್ ಖಾತೆಗೆ 1000 ರೂ.ಜಮಾ ಮಾಡಲಾಗುತ್ತದೆ.ರಾಜ್ಯ ಸರ್ಕಾರದ ಪ್ರಕಾರ ಅಂದಾಜು 6 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆಗೆ ಒಟ್ಟು 698 ಕೋಟಿ ರೂ.ಗಳನ್ನು ನೀಡಲಾಗಿದೆ.


ಉನ್ನತ ಶಿಕ್ಷಣದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಡಿಮೆ ದಾಖಲಾತಿ ಅನುಪಾತದ ಸಮಸ್ಯೆ ಇರುವ ಹಿನ್ನಲೆಯಲ್ಲಿ ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ತಮಿಳುನಾಡು (Tamil Nadu) ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರು ಈ ಹಿಂದೆ 'ಮೂವಲೂರ್ ರಾಮಾಮೃತಂ ಅಮ್ಮಯ್ಯರ್ ಸ್ಮಾರಕ ವಿವಾಹ ನೆರವು ಯೋಜನೆ' ಎಂದು ಕರೆಯಲಾಗುತ್ತಿದ್ದು, ಈಗ ಅದನ್ನು 'ಮೂವಲೂರ್ ರಾಮಾಮೃತಂ ಅಮ್ಮಯ್ಯರ್ ಉನ್ನತ ಶಿಕ್ಷಣ ಭರವಸೆ ಯೋಜನೆ' ಎಂದು ಕರೆಯಲಾಗುವುದು ಎಂದು ಘೋಷಿಸಿದರು.


ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ಆರಂಭಿಸಿದ ಈ ಮಹಾನಗರ ಪಾಲಿಕೆ..!


ಸರ್ಕಾರಿ ಶಾಲೆಗಳಲ್ಲಿ 6 ರಿಂದ 12 ನೇ ತರಗತಿಯ ಎಲ್ಲಾ ವಿದ್ಯಾರ್ಥಿನಿಯರು ತಮ್ಮ ಪದವಿಪೂರ್ವ ಪದವಿ, ಡಿಪ್ಲೋಮಾ ಮತ್ತು ಐಟಿಐ ಕೋರ್ಸ್‌ಗಳನ್ನು ಅಡೆತಡೆಯಿಲ್ಲದೆ ಪೂರ್ಣಗೊಳಿಸುವವರೆಗೆ ಅವರ ಬ್ಯಾಂಕ್ ಖಾತೆಗಳಿಗೆ 1,000 ರೂ. ಜಮಾ ಮಾಡಲಾಗುತ್ತದೆ. "ಈಗಾಗಲೇ ಲಭ್ಯವಿರುವ ಇತರ ವಿದ್ಯಾರ್ಥಿವೇತನಗಳ ಜೊತೆಗೆ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗುತ್ತಾರೆ" ಎಂದು ಸಚಿವರು ಹೇಳಿದರು.


ಇವಿಆರ್ ಮಣಿಯಮ್ಮಯ್ಯರ್ ಸ್ಮಾರಕ ವಿಧವೆಯರ ಪುತ್ರಿ ವಿವಾಹ ನೆರವು ಯೋಜನೆ, ಡಾ. ಮುತ್ತುಲಕ್ಷ್ಮಿ ರೆಡ್ಡಿ ಸ್ಮಾರಕ ಅಂತರ್ಜಾತಿ ವಿವಾಹ ನೆರವು ಯೋಜನೆ, ಅನ್ನೈ ತೆರೇಸಾ ಅನಾಥ ಹೆಣ್ಣುಮಕ್ಕಳ ವಿವಾಹ ನೆರವು ಯೋಜನೆ ಮತ್ತು ಯಾವುದೇ ಬದಲಾವಣೆ ಇಲ್ಲದೆ ಅವು ಮುಂದುವರೆಯುತ್ತವೆ ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.