PG Doctors: ಸರ್ಕಾರಿ ಆಸ್ಪತ್ರೆಗಳಲ್ಲಿ 10 ವರ್ಷ ಸೇವೆ ಮಾಡಿ, ಇಲ್ಲದಿದ್ದರೆ 1 ಕೋಟಿ ದಂಡ ಪಾವತಿಸಿ
PG Doctors: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಭಾರಿ ನಿರ್ಣಯವೊಂದನ್ನು ಪ್ರಕಟಿಸಿದೆ. ಈ ನಿರ್ಣಯದ ಪ್ರಕಾರ ರಾಜ್ಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಮಾಡುತ್ತಿರುವ ವೈದ್ಯರು ಕನಿಷ್ಠ ಅಂದರೆ 10 ವರ್ಷ ಸರ್ಕಾರಿ ನೌಕರಿ ಮಾಡಬೇಕು.
ಲಖನೌ: PG Doctors: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಭಾರಿ ನಿರ್ಣಯವೊಂದನ್ನು ಪ್ರಕಟಿಸಿದೆ. ಈ ನಿರ್ಣಯದ ಪ್ರಕಾರ ರಾಜ್ಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಮಾಡುತ್ತಿರುವ ವೈದ್ಯರು ಕನಿಷ್ಠ ಅಂದರೆ 10 ವರ್ಷ ಸರ್ಕಾರಿ ನೌಕರಿ ಮಾಡಬೇಕು. ಒಂದು ವೇಳೆ ವೈದ್ಯರು ನೌಕರಿಯನ್ನು ಮಧ್ಯದಲ್ಲಿಯೇ ತೊರೆದರೆ, 1 ಕೋಟಿ ರೂ. ದಂಡ ಪಾವತಿಸಬೇಕು. ಈ ಕುರಿತು ಮಾಹಿತಿ ನೀಡಿರುವ ಸರ್ಕಾರದ ವಕ್ತಾರರು, NEET ಪರೀಕ್ಷೆ ಯಲ್ಲಿ ಈ ವೈದ್ಯರಿಗೆ ಸಡಿಲಿಕೆ ಕೂಡ ನೀಡಲಾಗುವುದು ಎಂದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ವಿಶೇಷ ತಜ್ಞ ವೈದ್ಯರ ಕೊರತೆಯನ್ನು ನೀಗಿಸುವುದು ಇದರ ಹಿಂದಿನ ಉದ್ದೇಶ ಎಂದು ಅವರು ಹೇಳಿದ್ದಾರೆ. ರಾಜ್ಯ ಆರೋಗ್ಯ ಸಚಿವಾಲಯದ ಮುಖ್ಯ ಸಚಿವರು ಡಿಸೆಂಬರ್ 9 ರಂದು ಈ ಆದೇಶ ಜಾರಿ ಮಾಡಿದ್ದು, ಈಗಾಗಲೇ ಎಲ್ಲಾ ಆಸ್ಪತ್ರೆಗಳಿಗೂ ಕೂಡ ಆದೇಶದ ಪ್ರತಿ ತಲುಪಿದೆ ಎನ್ನಲಾಗಿದೆ.
ಇದನ್ನು ಓದಿ- ವಿರೋಧ ಪಕ್ಷದವರಿಗೆ ಭಾರತೀಯ ಸಂಸ್ಕೃತಿಯ ಜ್ಞಾನವಿಲ್ಲ: ಯೋಗಿ ಆದಿತ್ಯನಾಥ್
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಸುಮಾರು 11 ಸಾವಿರ ವೈದ್ಯರು ಈಗಾಗಲೇ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಸೇವೆ ಸಲ್ಲಿಸುವ MBBS ವೈದ್ಯರಿಗೆ NEET ಅರ್ಹತಾ ಪರೀಕ್ಷೆಯಲ್ಲಿ 10 ಹೆಚ್ಚೂವರಿ ಅಂಕಗಳನ್ನು ಕೂಡ ನೀಡಲಾಗುತ್ತದೆ. ಎರಡು ಮತ್ತು ಮೂರು ವರ್ಷ ಸೇವೆ ಸಲ್ಲಿಸಿದ ವೈದ್ಯರಿಗೆ ಕ್ರಮೇಣವಾಗಿ 20 ಹಾಗೂ 30 ಅಂಕಗಳನ್ನು ನೀಡಲಾಗುತ್ತದೆ. ಈ ವೈದ್ಯರು ಪಿಜಿ ವ್ಯಾಸಂಗದ ಜೊತೆಗೆ ಡಿಪ್ಲೋಮಾಗೂ ಕೂಡ ಪ್ರವೇಶ ಪಡೆಯಬಹುದು. ಪ್ರತಿ ವರ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಸಾವಿರಾರು ವೈದ್ಯರು ಪಿಜಿಗೆ ಪ್ರವೇಶ ಪಡೆಯುತ್ತಾರೆ.
ಇದನ್ನು ಓದಿ- ಮೋದಿ ಜಿ ಸೈನ್ಯ ಎಂದ ಸಿಎಂ ಯೋಗಿ ಹೇಳಿಕೆಗೆ ವರದಿ ಕೇಳಿದ ಚುನಾವಣಾ ಆಯೋಗ
1 ಕೋಟಿ ರೂ. ದಂಡ
ಪಿಜಿ ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ವೈದ್ಯರು ಕನಿಷ್ಠ ಅಂದರೆ 10 ವರ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಎಂಬುದನ್ನು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಒಂದು ವೇಳೆ ಮಧ್ಯದಲ್ಲಿಯೇ ಅವರು ನೌಕರಿ ತ್ಯಜಿಸಲು ಬಯಸಿದರೆ 1 ಕೋಟಿ ರೂ ದಂಡವನ್ನು ಪ್ರದೇಶ ಸರ್ಕಾರಕ್ಕೆ ಪಾವತಿಸಬೇಕು. ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ತಜ್ಞರ ಕೊರತೆ ನೀಗಿಸಲು ವೈದ್ಯರಿಗೆ NEET ಪರೀಕ್ಷೆಯಲ್ಲಿ ಸಡಿಲಿಕೆಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದಿದ್ದಾರೆ. ಒಂದು ವೇಳೆ ವೈದ್ಯರು ತಮ್ಮ ಪಿಜಿ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದರೆ, ಅಂತಹ ವೈದ್ಯರನ್ನು ಮೂರು ವರ್ಷಗಳ ಅವಧಿಗೆ ಡಿಬಾರ್ ಮಾಡುವ ಉಲ್ಲೇಖವನ್ನು ಕೂಡ ಈ ಆದೇಶದಲ್ಲಿ ಹೇಳಲಾಗಿದೆ. ಅಂದರೆ ಮೂರು ವರ್ಷಗಳಲ್ಲಿ ಅವರಿಗೆ ಮತ್ತೆ ಪಿಜಿ ಸೇರಲು ಅವಕಾಶ ಇರುವುದಿಲ್ಲ.