ಮೋದಿ ಜಿ ಸೈನ್ಯ ಎಂದ ಸಿಎಂ ಯೋಗಿ ಹೇಳಿಕೆಗೆ ವರದಿ ಕೇಳಿದ ಚುನಾವಣಾ ಆಯೋಗ

ಮೋದಿ ಜಿ ಕಿ ಸೇನಾ ಎಂದು ಕರೆದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ ವಿಚಾರವಾಗಿ ಈಗ ಘಾಜಿಯಾಬಾದ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ನಿಂದ ಚುನಾವಣಾ ಆಯೋಗ ವರದಿ ಕೇಳಿದೆ.ಸಿಎಂ ಯೋಗಿ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ವರದಿಯಾದ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಸಂಪೂರ್ಣವಾದ ವರದಿ ನೀಡುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.

Last Updated : Apr 1, 2019, 08:17 PM IST
ಮೋದಿ ಜಿ ಸೈನ್ಯ ಎಂದ ಸಿಎಂ ಯೋಗಿ ಹೇಳಿಕೆಗೆ ವರದಿ ಕೇಳಿದ ಚುನಾವಣಾ ಆಯೋಗ  title=
Photo courtesy: Twitter

ನವದೆಹಲಿ: ಮೋದಿ ಜಿ ಕಿ ಸೇನಾ ಎಂದು ಕರೆದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ ವಿಚಾರವಾಗಿ ಈಗ ಘಾಜಿಯಾಬಾದ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ನಿಂದ ಚುನಾವಣಾ ಆಯೋಗ ವರದಿ ಕೇಳಿದೆ.ಸಿಎಂ ಯೋಗಿ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ವರದಿಯಾದ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಸಂಪೂರ್ಣವಾದ ವರದಿ ನೀಡುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.

ಯೋಗಿ ಘಾಜಿಯಾಬಾದ್ ನಲ್ಲಿ ಮಾತನಾಡುತ್ತಾ "ಕಾಂಗ್ರೆಸ್ ಜನರು ಉಗ್ರರಿಗೆ ಬಿರಿಯಾನಿಯನ್ನು ಹಂಚುತ್ತಾರೆ ಆದರೆ ಮೋದಿ ಜಿ ಸೈನ್ಯವು ಅವರಿಗೆ ಬುಲೆಟ್ ಮತ್ತು ಬಾಂಬ್ ಗಳನ್ನಷ್ಟೇ ನೀಡುತ್ತಾರೆ.ಇದೇ ಅವರಿಗೂ ಮತ್ತು ಮೋದಿಗೂ ಇರುವ ವ್ಯತ್ಯಾಸ ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಕಿಡಿಕಾರುತ್ತಾ " ನಮ್ಮ ಸೈನ್ಯದ ಬಗ್ಗೆ ನಮಗೆ ಹೆಮ್ಮೆ ಇದೆ.ಅವರು ಎಲ್ಲರಿಗೂ ಸೇರಿದವರು.ಅವರು ನಮ್ಮ ದೇಶದ ಅಮೂಲ್ಯ ಸಂಪತ್ತಿನ ಹಾಗೆ ಹೊರತು ಬಿಜೆಪಿಯ ಕ್ಯಾಸೆಟ್ ಅಲ್ಲ .ಆದ್ದರಿಂದ ಈ ದೇಶದ ಜನರು ಈ ಹೇಳಿಕೆಯನ್ನು ತಿರಸ್ಕರಿಸಬೇಕು ಎಂದು ಹೇಳಿದರು.'

ಇನ್ನೊಂದೆಡೆಗೆ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿ " ಇದು ನಮ್ಮ  ಸೈನ್ಯಕ್ಕೆ ಮಾಡಿರುವ ಅವಮಾನ ಅವರು  ಭಾರತದ ಸೈನಿಕರೇ ಹೊರತು ಖಾಸಗಿ ಪ್ರಚಾರ ಮಂತ್ರಿಗಳಲ್ಲ ಆದ್ದರಿಂದ ಸಿಎಂ ಯೋಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

Trending News