ಅಹಮದಾಬಾದ್: ಕೋವಿಡ್ -19 ರ ಕಾರಣದಿಂದಾಗಿ ಮಾರ್ಚ್ ಕೊನೆಯ ವಾರದಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಜೊತೆಗೆ ದೇಶಾದ್ಯಂತ ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಎಲ್ಲರೂ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ಹೀಗಾಗಿಯೇ ಈ ವರ್ಷ ಶಾಲಾ ಶುಲ್ಕ (School Fees)ವನ್ನು ಹೆಚ್ಸಿಸದಂತೆ ಸರ್ಕಾರಗಳು ಶಿಕ್ಷಣ ಸಂಸ್ಥೆಗಳಿಗೆ ತಿಳಿಸಿವೆ. ಆದಾಗ್ಯೂ ಈ ಬಿಕ್ಕಟ್ಟಿನ ಅವಧಿಯಲ್ಲಿಯೂ ಹಲವು ಶಾಲಾ-ಕಾಲೇಜುಗಳಲ್ಲಿ ವಾರ್ಷಿಕ ಶುಲ್ಕ ಭರಿಸುವಂತೆ ಪೋಷಕರಿಗೆ ಒತ್ತಡ ಹೇರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳು ತೆರೆಯುವ ಮುನ್ನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಬೋಧನಾ ಶುಲ್ಕವನ್ನು ವಿಧಿಸಬಾರದು ಎಂದು ಗುಜರಾತ್ ಸರ್ಕಾರ ರಾಜ್ಯದ ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದೆ. 


COMMERCIAL BREAK
SCROLL TO CONTINUE READING

2020-21ರ ಶೈಕ್ಷಣಿಕ ಅಧಿವೇಶನಕ್ಕೆ ಶುಲ್ಕವನ್ನು ಹೆಚ್ಚಿಸದಂತೆ ಸರ್ಕಾರ ಶಾಲೆಗಳಿಗೆ ನಿರ್ದೇಶನ ನೀಡಿತು. ಜುಲೈ 16 ರಂದು ರಾಜ್ಯ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಬುಧವಾರ ಸಾರ್ವಜನಿಕವಾಯಿತು. ಶುಲ್ಕವನ್ನು ಠೇವಣಿ ಮಾಡದ ಕಾರಣ ಈ ಅವಧಿಯಲ್ಲಿ ಯಾವುದೇ ಶಾಲೆಯು 1 ರಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ದಾಖಲಾತಿಯಿಂದ ಕೈಬಿಡುವಂತಿಲ್ಲ, ಹಾಗೆ ಮಾಡುವುದು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 16 ರ ಉಲ್ಲಂಘನೆಯಾಗಿದೆ  ಎಂದು ಅದು ಹೇಳಿದೆ.


ಖಾಸಗಿ ಶಾಲಾ ಶುಲ್ಕ ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?


ಇದನ್ನು ಹೊರತುಪಡಿಸಿ ಗುಜರಾತ್ ಹೈಕೋರ್ಟ್ (Gujrat High Court) ಪ್ರಕಾರ ಜೂನ್ 30 ರವರೆಗೆ ಶುಲ್ಕವನ್ನು ಪಾವತಿಸದ ಯಾವುದೇ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವಂತಿಲ್ಲ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.


ಲಾಕ್‌ಡೌನ್‌ (Lockdown) ಅವಧಿಯಲ್ಲಿ ಅನೇಕ ಶಾಲೆಗಳು ತಮ್ಮ ಬೋಧನೆ ಅಥವಾ ಬೋಧಕೇತರ ಸಿಬ್ಬಂದಿಗೆ ಯಾವುದೇ ವೇತನವನ್ನು ನೀಡಿಲ್ಲ ಅಥವಾ ಅವರ ವೇತನದ 40-50 ಪ್ರತಿಶತದಷ್ಟು ಮಾತ್ರ ಪಾವತಿಸಿಲ್ಲ ಎಂದು ಇಲಾಖೆ ತಿಳಿಸಿದೆ. ಶಿಕ್ಷಣ ಸಂಸ್ಥೆಗಳು ಅದರಿಂದ ಲಾಭ ಪಡೆಯದೆ ಸಮಾಜಕ್ಕೆ ಶಿಕ್ಷಣವನ್ನು ನೀಡಲು ಮಾಡಿದ ದತ್ತಿ ಸಂಸ್ಥೆಗಳು ಎಂದು ಅದು ಹೇಳಿದೆ.


Alert: ಶಾಲೆಗಳಲ್ಲಿ ಮುಂಗಡ ಶುಲ್ಕ ಕೇಳಿದರೆ ದೂರು ನೀಡಿ


ಇಲಾಖೆಯ ಪ್ರಕಾರ ಗುಜರಾತ್ ಸ್ವ-ಹಣಕಾಸು ಶಾಲೆಗಳ (ಶುಲ್ಕ ನಿಯಂತ್ರಣ) ಕಾಯ್ದೆ 2017 ರ ಅಡಿಯಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಈ ಶಾಲೆಗಳು ತಮ್ಮ ಸಿಬ್ಬಂದಿ ವೇತನಕ್ಕಾಗಿ ಮಾಡಿದ ವೆಚ್ಚವನ್ನು ರಾಜ್ಯದ ಶುಲ್ಕ ನಿಯಂತ್ರಕ ಸಮಿತಿ ಪರಿಗಣಿಸುತ್ತದೆ.


ಪೋಷಕರು ಪಾವತಿಸುವ ಶುಲ್ಕದ ಮುಂಗಡ ಪಾವತಿಯನ್ನು ಮುಂದಿನ ಶುಲ್ಕದಲ್ಲಿ ಶಾಲೆಗಳು ಸರಿಹೊಂದಿಸಬೇಕಾಗುತ್ತದೆ ಎಂದು ಅದು ಹೇಳಿದೆ.