Tejas Fighter Jet: ಪ್ರಸ್ತುತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಬೆಂಗಳೂರಿನಲ್ಲಿ ಎರಡು ಎಲ್‌ಸಿಎ ಜೋಡಣಾ ಘಟಕವನ್ನು ಹೊಂದಿದೆ. ಈ ಜೋಡಣಾ ಘಟಕಗಳು ಯಾವುದೇ ಅಡೆತಡೆಗಳಿಲ್ಲದೆ ಎಚ್ಎಎಲ್‌ಗೆ ಪ್ರತಿ ವರ್ಷ 16 ತೇಜಸ್ ಯುದ್ಧ ವಿಮಾನಗಳನ್ನು ಉತ್ಪಾದಿಸಲು ನೆರವಾಗುತ್ತವೆ. ಎಚ್ಎಎಲ್ ಅಧ್ಯಕ್ಷ ಹಾಗೂ ನಿರ್ದೇಶಕರಾದ ಸಿ ಬಿ ಅನಂತಕೃಷ್ಣನ್ ಅವರ ಪ್ರಕಾರ, ಈ ನೂತನ ಘಟಕ ಆರಂಭವಾದ ಬಳಿಕ ಎಚ್ಎಎಲ್‌ಗೆ ವರ್ಷಕ್ಕೆ 16 ತೇಜಸ್ ಮಾರ್ಕ್ 1ಎ ವಿಮಾನಗಳ ಉತ್ಪಾದನೆಯನ್ನು 24 ವಿಮಾನಗಳಿಗೆ ಹೆಚ್ಚಿಸಲು ಸಾಧ್ಯವಾಗುತ್ತದೆ. ಭಾರತೀಯ ವಾಯುಪಡೆ ಈಗಾಗಲೇ 40 ತೇಜಸ್ ಮಾರ್ಕ್ 1 ಹಾಗೂ 83 ತೇಜಸ್ ಮಾರ್ಕ್ 1ಎ ಯುದ್ಧ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದೆ. ಈಗ ಎಚ್ಎಎಲ್ ತ್ವರಿತವಾಗಿ ಅವುಗಳ ನಿರ್ಮಾಣ ಕೈಗೊಂಡು, ತೇಜಸ್ ಉತ್ಪಾದನಾ ಘಟಕವನ್ನು ತೇಜಸ್ ಮಾರ್ಕ್ 2 ವಿಮಾನದ ಆರು ಸ್ಕ್ವಾಡ್ರನ್‌ಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕಿದೆ. ಎಚ್ಎಎಲ್ ಹಾಗೂ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ (ಎಡಿಎ) ಹಿರಿಯ ಅಧಿಕಾರಿಗಳ ಪ್ರಕಾರ, ತೇಜಸ್ ಮಾರ್ಕ್ 2ರ ಉತ್ಪಾದನೆ 2027-28ರ ಮೊದಲು ಆರಂಭವಾಗುವ ಸಾಧ್ಯತೆಗಳಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಕೊರೊನಾ ಆರ್ಭಟ ಮತ್ತೆ ಶುರು.. ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ


ತೇಜಸ್ ಮಾರ್ಕ್ 2 ವಿಮಾನದ ನಿರ್ಮಾಣಕ್ಕಾಗಿ ಪ್ರಸ್ತುತ ಬಳಕೆಯಲ್ಲಿರುವ ಜನರಲ್ ಇಲೆಕ್ಟ್ರಿಕ್ ಎಫ್-404 ಇಂಜಿನ್ ಬದಲಿಗೆ ಇನ್ನಷ್ಟು ಶಕ್ತಿಶಾಲಿಯಾದ ಜಿಇ ಎಫ್-414 ಅಳವಡಿಸಬೇಕು ಮತ್ತು ಏವಿಯಾನಿಕ್ಸ್ ಹಾಗೂ ಆಯುಧಗಳನ್ನು ಅಭಿವೃದ್ಧಿ ಪಡಿಸಬೇಕು. ತೇಜಸ್ ಮಾರ್ಕ್ 2ರ ಮೂಲ ಮಾದರಿ ಅಭಿವೃದ್ಧಿಗೆ 2025ರ ತನಕ ಕಾಲಾವಧಿ ಬೇಕಾಗುವ ಸಾಧ್ಯತೆಗಳಿವೆ. ಆ ಬಳಿಕ ಪರೀಕ್ಷೆ ಮತ್ತು ಉತ್ಪಾದನಾ ಸಿದ್ಧತೆಗಳಿಗೆ ಎರಡರಿಂದ ಮೂರು ವರ್ಷಗಳ ಕಾಲಾವಧಿ ತಗಲಲಿದೆ.


ಪ್ರಸ್ತುತ, ಎಚ್ಎಎಲ್ 2028ರ ತನಕ ತನ್ನ ಉತ್ಪಾದನಾ ಘಟಕದಲ್ಲಿ ಭಾರತೀಯ ವಾಯುಪಡೆಗೆ ಅಗತ್ಯವಿರುವ 83 ತೇಜಸ್ ಮಾರ್ಕ್-1ಎ ನಿರ್ಮಾಣ ಕಾರ್ಯ ನಡೆಸಲಿದೆ. ಮಾರ್ಕ್ 1ಎ ಪ್ರಸ್ತುತ ಮಾದರಿಗಿಂತ ಹೆಚ್ಚಿನ ವೇಗ ಮತ್ತು ಕೌಶಲ್ಯ ಹೊಂದಿರಲಿದೆ‌. ಪ್ರಸ್ತುತ ಬಳಕೆಯಲ್ಲಿರುವ ಮಾರ್ಕ್ 1ರ ವೇಗ ಹಾಗೂ ಚುರುಕುತನವನ್ನು ಹೆಚ್ಚಿಸಲು ಮಾರ್ಕ್ 1ಎ ವಿಮಾನದ ಪ್ರಸ್ತಾಪ ಮಾಡಲಾಗಿದೆ. ಈ ಯುದ್ಧ ವಿಮಾನವನ್ನು ನಿರ್ಮಿಸಲು, ಮಾರ್ಕ್ 1ರ ತೂಕದಿಂದ 800ಕೆಜಿಯಷ್ಟು ಕಡಿಮೆ ಮಾಡಬೇಕಿದೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಸುರಕ್ಷತೆಗಾಗಿ ವಿನ್ಯಾಸಗೊಳಿಸಿರುವ ಲ್ಯಾಂಡಿಂಗ್ ಗೇರ್ ತೂಕವನ್ನು ಕಡಿಮೆಗೊಳಿಸಬೇಕಿದೆ. ಎಚ್ಎಎಲ್ ಮಾರ್ಕ್ 1ನಲ್ಲಿ ವಿಮಾನದ ಸಮತೋಲನಕ್ಕಾಗಿ ಹರಡಿರುವ 300 ಕೆಜಿ ತೂಕವನ್ನು ಕಡಿತಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.


ಇದನ್ನೂ ಓದಿ : ಐದು 'ಅಕ್ರಮ' ಫಿಲ್ಮ್ ಸ್ಟುಡಿಯೋ ಕಟ್ಟಡಗಳು ನೆಲಸಮ


ಸುಖೋಯಿ-30 ಎಂಕೆಐ ಕೂಲಂಕುಷ ಪರೀಕ್ಷೆ


ಎಚ್ಎಎಲ್‌ನ ನಾಶಿಕ್ ಘಟಕದಲ್ಲಿ ದುರಸ್ತಿ ಮತ್ತು ಪರೀಕ್ಷೆಗಳಿಗೆ ಒಳಪಟ್ಟ ನೂರನೇ ಸುಖೋಯಿ-30 ಎಂಕೆಐ ವಿಮಾನವನ್ನು ಭಾರತದ ರಕ್ಷಣಾ ಕಾರ್ಯದರ್ಶಿಗಳು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದರು. ಅವರು ಈ ಸಂದರ್ಭದಲ್ಲಿ ದುರಸ್ತಿ ಮತ್ತು ಪರೀಕ್ಷಾ ಘಟಕವನ್ನು ಆರಂಭಿಸಿದ್ದಕ್ಕಾಗಿ ಮತ್ತು ನೂತನ ಎಲ್‌ಸಿಎ ನಿರ್ಮಾಣ ಘಟಕವನ್ನು ಆರಂಭಿಸಿದ್ದಕ್ಕೆ ಎಚ್ಎಎಲ್ ಅನ್ನು ಶ್ಲಾಘಿಸಿದರು. ಇದು ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ನೀತಿಗಳಿಗೆ ಪೂರಕವಾಗಿದ್ದು, ಅವುಗಳನ್ನು ಎಚ್ಎಎಲ್ ಸಮರ್ಪಕವಾಗಿ ಅಳವಡಿಸಿಕೊಳ್ಳುತ್ತಿದೆ ಎಂದರು.


ಜಾಗತಿಕ ರಾಜಕಾರಣದ ಸಂದಿಗ್ಧತೆಯಿಂದಾಗಿ ಪೂರೈಕೆ ಸರಪಳಿಯಲ್ಲಿ ಸಮಸ್ಯೆಗಳು ಉಂಟಾದರೂ, ಎಚ್ಎಎಲ್‌ನ ನಾಶಿಕ್ ಘಟಕ ಯಶಸ್ವಿಯಾಗಿ ತನ್ನ ಅತ್ಯಧಿಕ ಸಾಮರ್ಥ್ಯವಾದ 20 ಸುಖೋಯಿ-30 ಎಂಕೆಐ ವಿಮಾನಗಳನ್ನು ವಾರ್ಷಿಕವಾಗಿ ದುರಸ್ತಿ ಮತ್ತು ಪರೀಕ್ಷೆಗೊಳಪಡಿಸಿದೆ.


2014ರಲ್ಲಿ ನಾಶಿಕ್ ವಿಭಾಗ ತನ್ನ 272 ಸುಖೋಯಿ-30 ಎಂಕೆಐ ಯುದ್ಧ ವಿಮಾನಗಳಿಗಾಗಿ ಆರ್‌ಒಎಚ್ ಘಟಕವನ್ನು ಆರಂಭಿಸಿತು. ಇದು ಜಾಗತಿಕವಾಗಿ ಇಂತಹ ಮೊದಲ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಭಾರತೀಯ ವಾಯುಸೇನೆ (ಐಎಎಫ್), ನಿಯಂತ್ರಕ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಮಿಗ್ ಸರಣಿ ಮತ್ತು ಸುಖೋಯಿ-30 ಎಂಕೆಐ ವಿಮಾನಗಳ ಆರ್‌ಒಎಚ್ ತಂತ್ರಜ್ಞಾನದಲ್ಲಿ ಪ್ರಾವೀಣ್ಯತೆ ಸಾಧಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.