Illegal film studio building: ಐದು 'ಅಕ್ರಮ' ಫಿಲ್ಮ್ ಸ್ಟುಡಿಯೋ ಕಟ್ಟಡಗಳು ನೆಲಸಮ

Illegal film studio building razed in Mumbai: ಐದು ಅಕ್ರಮ ಫಿಲ್ಮ್ ಸ್ಟುಡಿಯೋಗಳ ವಿರುದ್ಧ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತೆರವು ಕಾರ್ಯಾಚರಣೆ ನಡೆಸಿತು. ಐದು ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. 

Written by - Chetana Devarmani | Last Updated : Apr 8, 2023, 07:33 AM IST
  • ಐದು ಅಕ್ರಮ ಫಿಲ್ಮ್ ಸ್ಟುಡಿಯೋ ಕಟ್ಟಡಗಳು
  • 'ಅಕ್ರಮ' ಫಿಲ್ಮ್ ಸ್ಟುಡಿಯೋ ಕಟ್ಟಡಗಳು ನೆಲಸಮ
  • ಮುನ್ಸಿಪಲ್ ಕಾರ್ಪೊರೇಷನ್‌ನಿಂದ ತೆರವು ಕಾರ್ಯಾಚರಣೆ
Illegal film studio building: ಐದು 'ಅಕ್ರಮ' ಫಿಲ್ಮ್ ಸ್ಟುಡಿಯೋ ಕಟ್ಟಡಗಳು ನೆಲಸಮ title=
Illegal film studio building razed

ಮುಂಬೈ: ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ), ಗುರುವಾರ ಮುಂಬೈನ ಪಶ್ಚಿಮ ಉಪನಗರದಲ್ಲಿರುವ ಮಧ್, ಎರಂಗಲ್ ಮತ್ತು ಭಾಟಿ ಪ್ರದೇಶಗಳಲ್ಲಿ ಐದು ಅಕ್ರಮ ಫಿಲ್ಮ್ ಸ್ಟುಡಿಯೋಗಳ ವಿರುದ್ಧ ತೆರವು ಕಾರ್ಯಾಚರಣೆಯನ್ನು ನಡೆಸಿತು. ಈ ಸ್ಟುಡಿಯೋಗಳು ಕರಾವಳಿ ನಿಯಂತ್ರಣ ವಲಯದಲ್ಲಿ (CRZ) ಬರುತ್ತವೆ ಮತ್ತು ಎರಡು ದಿನಗಳಲ್ಲಿ ನೆಲಸಮ ಮಾಡಬೇಕು ಎಂದು ನಾಗರಿಕ ಮಂಡಳಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದ ಆದೇಶದ ನಂತರ ಸ್ಟುಡಿಯೋಗಳ ವಿರುದ್ಧ ಈ ಕ್ರಮಕ್ಕೆ ಆದೇಶಿಸಿದ ನಂತರ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಈ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 11 ಫಿಲ್ಮ್ ಸ್ಟುಡಿಯೋಗಳ ಪೈಕಿ ನಾಲ್ಕು ಸ್ಟುಡಿಯೋಗಳು ನೋಟಿಸ್ ಪಡೆದ ನಂತರ ಅವುಗಳ ಮಾಲೀಕ ರು ಅವುಗಳನ್ನು ತೆರವುಗೊಳಿಸಿದರು. ಆದರೆ ಎರಡು ಸ್ಟುಡಿಯೋಗಳು ಅಗತ್ಯ ಅನುಮತಿಗಳನ್ನು ಪಡೆದಿವೆ. ಐದು ಸ್ಟುಡಿಯೋಗಳು ಸ್ಟೇ ಆದೇಶಗಳನ್ನು ಪಡೆದುಕೊಂಡಿವೆ. 10 ಎಂಜಿನಿಯರ್‌ಗಳು ಮತ್ತು 40 ಪೌರಕಾರ್ಮಿಕರ ತಂಡವು ಪೊಲೀಸ್ ಉಪಸ್ಥಿತಿಯ ನಡುವೆ ಜೆಸಿಬಿ ಯಂತ್ರಗಳು, ಎರಡು ಡಂಪರ್‌ಗಳು, ಎರಡು ಗ್ಯಾಸ್ ಕಟ್ಟರ್ ಮತ್ತು ಇತರ ಸಲಕರಣೆಗಳ ಸಹಾಯದಿಂದ ತೆರವು ಕಾರ್ಯಾಚರಣೆ ನಡೆಸಿತು ಎಂದು ANI ವರದಿ ಮಾಡಿದೆ.

ಇದನ್ನೂ ಓದಿ : Karnataka Assembly election 2023: 27 ಕೋಟಿ ನಗದು, 10 ಕೋಟಿ ಮೌಲ್ಯದ ಚಿನ್ನ ವಶ!

ನ್ಯಾಯಾಲಯದ ಆದೇಶದ ನಂತರ ಮುಂಬೈನ ಮಧ್ ಪ್ರದೇಶದಲ್ಲಿ "ಕಾನೂನುಬಾಹಿರವಾಗಿ ನಿರ್ಮಿಸಲಾದ" ಫಿಲ್ಮ್ ಸ್ಟುಡಿಯೋಗಳ ವಿರುದ್ಧ BMC ಕ್ರಮಗೊಂಡಿದೆ. BMC ಕಮಿಷನರ್ ಇಕ್ಬಾಲ್ ಚಹಾಲ್ ಅವರಿಗೆ ಈ ಅಕ್ರಮ ಹಗರಣ ಗೊತ್ತಿತ್ತು ಆದರೆ ಕ್ರಮ ಕೈಗೊಂಡಿಲ್ಲ. 

ಸಿನಿಮಾ ಸೆಟ್‌ಗೆ ತಾತ್ಕಾಲಿಕ ಶೆಡ್‌ ಅಳವಡಿಸಿ ಇಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿತ್ತು, ನಂತರ ಅದನ್ನು ಸಿಮೆಂಟ್‌ ಮತ್ತು ಕಾಂಕ್ರೀಟ್‌ನಿಂದ ಬಂಗಲೆ ಮತ್ತು ಸ್ಟುಡಿಯೊ ಆಗಿ ಪರಿವರ್ತಿಸಲಾಯಿತು ಎಂದು ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಆರೋಪಿಸಿದರು.

ಇದನ್ನೂ ಓದಿ : ಹಣದುಬ್ಬರದ ಮಧ್ಯೆ ಸಾರ್ವಜನಿಕರಿಗೆ ಬಿಗ್ ರಿಲೀಫ್: CNG ಬೆಲೆಯಲ್ಲಿ 8 ರೂ. ಇಳಿಕೆ, PNG ದರ ಹೀಗಿದೆ

BMC ಕಮಿಷನರ್ ಇಕ್ಬಾಲ್ ಚಹಾಲ್ ಈ ಅಕ್ರಮ ಹಗರಣದ ಬಗ್ಗೆ ತಿಳಿದಿದ್ದರೂ ಕ್ರಮ ಕೈಗೊಂಡಿಲ್ಲ. ಅಕ್ರಮ ನಿರ್ಮಾಣಗಳಿಗೆ ಹೇಗೆ ಅನುಮತಿ ನೀಡಲಾಯಿತು ಎಂದು BMC ಅನ್ನು ಪ್ರಶ್ನಿಸಿ ನಾವು ನ್ಯಾಯಾಲಯವನ್ನು ಸಂಪರ್ಕಿಸಿದ್ದೇವೆ. ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ಸಿಎಂ ಮತ್ತು ಡಿಸಿಎಂಗೆ ಮನವಿ ಮಾಡಿದ್ದೇವೆ ಎಂದು ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ  ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News