Haridwar Kumbh Mela 2021: `ಗಂಗೆಯ ಆಶೀರ್ವಾದದಿಂದ ಕೊರೊನಾ ಹರಡಲ್ಲ, ಕುಂಭಮೇಳದ ಹೋಲಿಕೆ ಮರ್ಕಜ್ ಜೊತೆಗೆ ಬೇಡ`
Haridwar Kumbh Mela 2021: ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ದೇವಿ ಗಂಗೆಯ ಆಶಿರ್ವಾದ ಒಂದು ಅವಿರತ ಧಾರೆ, ದೇವಿ ಗಂಗೆಯ ಆಶಿರ್ವಾದ ಪಡೆದುಹೋದರೆ ಕೊರೊನಾ ಹರಡುವುದಿಲ್ಲ. ಇದಕ್ಕಾಗಿ ನಾವು ಹರಿದ್ವಾರದಲ್ಲಿ 16ಕ್ಕೂ ಹೆಚ್ಚು ಘಾಟ್ ಗಳನ್ನು ನಿರ್ಮಿಸಿದ್ದೇವೆ.
ಹರಿದ್ವಾರ: Haridwar Kumbh Mela 2021 - ಹರಿದ್ವಾರದಲ್ಲಿ ಮಹಾಕುಂಭವನ್ನು ಆಯೋಜಿಸಲಾಗುತ್ತಿದೆ. ಆದರೆ ಕೊವಿಡ್-19 (Coronavirus) ಕಾರಣ ಹರಿದ್ವಾರದಲ್ಲಿ ಕುಂಭಮೇಳದ (Haridwar Kumbh Mela 2021) ಸಡಗರ ಕಾಣಸಿಗುತ್ತಿಲ್ಲ. ಏಪ್ರಿಲ್ 12ರ ಪವಿತ್ರ ಸ್ನಾನದ ದಿನವೂ ಕೂಡ ಹರಿದ್ವಾರದಲ್ಲಿ ಭಕ್ತಾದಿಗಳ ಸಂಖ್ಯೆ ಅಷ್ಟೇನೂ ಹೇಳಿಕೊಳ್ಳುವಷ್ಟು ಇರಲಿಲ್ಲ. ಪೊಲೀಸ್ ಆಡಳಿತ ನೀಡಿರುವ ಹೇಳಿಕೆಯ ಪ್ರಕಾರ ನಿನ್ನೆ ರಾತ್ರಿಯವರೆಗೆ ಸುಮಾರು 35 ಲಕ್ಷ ಭಕ್ತಾದಿಗಳು ದೇವಿ ಗಂಗೆಯ ಭಕಿಯಲ್ಲಿ ನದಿಯಲ್ಲಿ ಮಿಂದೇಳಿದ್ದಾರೆ. ಆದರೆ, 2010ರ ಮಹಾಕುಂಭದ ವೇಳೆ ಭಕ್ತಾದಿಗಳ ಸಂಖ್ಯೆ ಇದಕ್ಕಿಂತಲೂ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿತ್ತು. ಹೀಗಾಗಿ ಕೊವಿಡ್-19 ಈ ಬಾರಿ ಭಕ್ತಾದಿಗಳ ಕಾಲನ್ನು ಹಿಡಿದಿಟ್ಟುಕೊಂಡಿದೆ ಎಂದು ಸಾಬೀತಾಗುತ್ತದೆ. ಇನ್ನೊಂದೆಡೆ ಸರ್ಕಾರ ವಿಧಿಸಿರುವ ನಿರ್ಬಂಧನೆಯ ಕಾರಣ ಕೂಡ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಹರಿದ್ವಾರ ತಲುಪಲು ವಿಫಲರಾಗಿದ್ದಾರೆ.
ಏತನ್ಮಧ್ಯೆ ರಾಜ್ಯದ ಮುಖ್ಯಮಂತ್ರಿಗಳಾಗಿರುವ ತೀರಥ್ ಸಿಂಗ್ ರಾವತ್ (Tirath Singh Rawat) ಮತ್ತೊಮ್ಮೆ ಬೆಚ್ಚಿಬೀಳಿಸುವ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಕುಂಭ ಮೇಳದ ವೇಳೆ ದೇವಿ ಗಂಗೆಯ (Ganga) ಆಶೀರ್ವಾದದಿಂದ ಕೊರೊನಾ ಹರಡುವುದಿಲ್ಲ. ಹೀಗಾಗಿ ಕುಂಭವನ್ನು ಮರ್ಕಜ್ ಗೆ ಹೋಲಿಸುವುದು ತಪ್ಪು. ಮರ್ಕಜ್ ನಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಜನರಿದ್ದ ಕಾರಣ ಕೊರೊನಾ (Covid-19) ಹರಡಿತ್ತು. ಆದರೆ, ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದ ಕ್ಷೇತ್ರಫಲ ನೀಲಕಂಠ ಹಾಗೂ ದೇವಪ್ರಯಾಗದವರೆಗೆ ಇದೆ.
ಈ ಬಾರಿಯ ಕುಂಭ ಮೇಳದ (Kumbha Mela 2021) ಕಾರಣ ಹರಿದ್ವಾರದಲ್ಲಿ ಸುಮಾರು 16 ಕ್ಕೂ ಹೆಚ್ಚು ಘಾಟ್ ಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಹರಿದ್ವಾರದ ಕುಂಭಮೇಳವನ್ನು ಮರ್ಕಜ್ ಗೆ ಹೋಲಿಸಬಾರದು ಎಂದಿದ್ದಾರೆ. ಇನ್ನೊಂದೆಡೆ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಬಯಸುವವರು ಕೊವಿಡ್ ಗೈಡ್ ಲೈನ್ಸ್ ತಪ್ಪದೆ ಪಾಲಿಸುವಂತೆ ಮನವಿ ಕೂಡ ಮಾಡಿದ್ದಾರೆ.
ಇದನ್ನೂ ಓದಿ-Kumbh Mela 2021: ಕುಂಭಮೇಳಕ್ಕೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ
ಪವಿತ್ರ ಸ್ನಾನದ ವೇಳೆ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿದ ಜನರು
ಶಾಹಿ ಸ್ನಾನ ಅಂದರೆ ಪವಿತ್ರ ಸ್ನಾನದ ಸಂದರ್ಭದಲ್ಲಿ ಹಲವು ಘಾಟ್ ಗಳಲ್ಲಿ ಕೊವಿಡ್ ನಿಯಮಾವಳಿಗಳ ಪಾಲನೆಯಾಗುತ್ತಿರುವುದು ಕಂಡು ಬಂದಿಲ್ಲ. ಒಂದೆಡೆ ಪೊಲೀಸರು ಸಾಧು ಸಂತರ ವ್ಯವಸ್ಥೆಯಲ್ಲಿ ತೊಡಗಿದರೆ, ಭಕ್ತಾದಿಗಳು ಯಾವುದೇ ರೀತಿಯ ಅಡೆತಡೆ ಇಲ್ಲದೆ ಘಾಟ್ ಗಳ ಮೇಲೆ ಸ್ನಾನ ಮಾಡಿದ್ದಾರೆ. ಏಪ್ರಿಲ್ 12 ರಿಂದ ಹರಿದ್ವಾರದಲ್ಲಿ ಕೊರೊನಾ ವೈರಸ್ ನ ಸುಮಾರು 400 ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ ಕುಂಭ ಕ್ಷೇತ್ರದ ಸುಮಾರು 100ಕ್ಕೊ ಅಧಿಕ ಪ್ರಕರಣಗಳಿವೆ.
ಇದನ್ನೂ ಓದಿ- Maharashtra Lockdown: ಮುಂದಿನ ಕೆಲವು ಗಂಟೆಗಳಲ್ಲಿ 'ಮಹಾರಾಷ್ಟ್ರ ಲಾಕ್‌ಡೌನ್' ಕುರಿತು ಬಿಗ್ ನ್ಯೂಸ್..!
ಇನ್ನೊಂದೆಡೆ ಅಖಾಡಾ ಪರಿಷದ್ ಅಧ್ಯಕ್ಷ ನರೇಂದ್ರ ಗಿರಿ ಅವರ ಕೊವಿಡ್ ವರದಿ ಕೂಡ ಸಕಾರಾತ್ಮಕ ಬಂದಿದೆ. ಹೀಗಾಗಿ ಅವರ ಗಂಭೀರ ಆರೋಗ್ಯವನ್ನು ಪರಿಗಣಿಸಿ ಅವರನ್ನು ಹೃಷಿಕೇಶ AIIMS ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಐದು ದಿನಗಳಲ್ಲಿ ನರೇಂದ್ರ ಗಿರಿ ಸೇರಿದಂತೆ ಒಟ್ಟು 15 ಸಂತರ ವರದಿ ಸಕಾರಾತ್ಮಕ ಹೊರಬಂದಿವೆ. ಇವರಲ್ಲಿ ಒಟ್ಟು 6 ಸಂತರು ಪವಿತ್ರ ಸ್ನಾನದ ವೇಳೆ ಪಾಸಿಟಿವ್ ಕಂಡುಬಂದಿದ್ದರು. ಹೀಗಾಗಿ ಈ ಅಂಕಿ-ಸಂಖ್ಯೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಐದು ದಿನಗಳ ಕೊವಿಡ್ ಅಂಕಿ-ಸಂಖ್ಯೆಗಳ ಕುರಿತು ಹೇಳುವುದಾದರೆ, ಕೇವಲ ಹರಿದ್ವಾರ್ ಒಂದರಲ್ಲಿಯೇ ಸುಮಾರು 1500 ಅಧಿಕ ಜನರು ಈ ಸೋಂಕಿಗೆ ಗುರಿಯಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ- CBSE Board Exams: ಬೋರ್ಡ್ ಪರೀಕ್ಷೆ ರದ್ದುಗೊಳಿಸುವಂತೆ ಕೇಂದ್ರಕ್ಕೆ ಕೇಜ್ರಿವಾಲ್ ಮನವಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.