ಮುಂಬೈ : ಮುಂದಿನ ಕೆಲವು ಗಂಟೆಗಳಲ್ಲಿ ಮಹಾರಾಷ್ಟ್ರ ಲಾಕ್‌ಡೌನ್ ಕುರಿತು ಬಿಗ್ ನ್ಯೂಸ್ ಒಂದು ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಉದವ್ ಠಾಕ್ರಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವು 'ಬ್ರೇಕ್ ದಿ ಚೈನ್'(Break the Chain) ನಿರ್ಬಂಧಗಳನ್ನು ರದ್ದುಪಡಿಸುತ್ತಿದೆ ಎಂದು ಮೂಲಗಳ ಮೂಲಕ ತಿಳಿದುಬಂದಿದೆ. ರಾಜ್ಯ ಸರ್ಕಾರವು ಇತರ ಹಿರಿಯ ರಾಜಕೀಯ ಮುಖಂಡರು ಮತ್ತು ಕೋವಿಡ್-19 ಟಾಸ್ಕ್ ಪೋರ್ಸ್ ಸಿಬ್ಬಂದಿಗಳ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ-SBI Recruitment 2021: ಎಸ್‌ಬಿಐನಲ್ಲಿ ಬಂಪರ್ ಉದ್ಯೋಗಾವಕಾಶ
ಏಪ್ರಿಲ್ 10 ರಂದು ಸಿಎಂ ಉದ್ಧವ್ ಠಾಕ್ರೆ(Uddhav Thackeray) ಸರ್ವಪಕ್ಷಗಳ ಸಭೆ ಕರೆದಿದ್ದರು. ಸಭೆಯಲ್ಲಿ 15 ದಿನಗಳವರೆಗೆ ಸಂಪೂರ್ಣ ಲಾಕ್ ಡೌನ್ ಮಾಡುವ ಕುರಿತು ಚರ್ಚಿಸಲಾಗಿತ್ತು.
ಇದನ್ನೂ ಓದಿ- ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ ..!10,000 ರೂಗಳಷ್ಟು ಅಗ್ಗವಾಯಿತು ಚಿನ್ನ..!
ಏಪ್ರಿಲ್ 30 ರವರೆಗೆ ವೀಕ್ ಎಂಡ್ ಲಾಕ್‌ಡೌನ್ ಮತ್ತು ನೈಟ್ ಕರ್ಫ್ಯೂ(Night Curfew) ಸಹ ಒಳಗೊಂಡಿರುವ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದೆ.
ಕರೋನವೈರಸ್(Coronavirus) ನ ಎರಡನೇ ಅಲೆಯ ಕಾರಣದಿಂದ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷಯನ್ನ ರಾಜ್ಯ ಮಂಡಳಿ ಪರೀಕ್ಷೆಗಳನ್ನು ಮುಂದೂಡಿದೆ. 12 ನೇ ತರಗತಿಯ ಪರೀಕ್ಷೆಗಳು ಈಗ ತಾತ್ಕಾಲಿಕವಾಗಿ ಮೇ ಅಂತ್ಯದ ವೇಳೆಗೆ ನಡೆಯಲಿದ್ದು, 10 ನೇ ತರಗತಿ ಪರೀಕ್ಷೆಗಳನ್ನು ಜೂನ್‌ನಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- CBSE Board Exams: ಬೋರ್ಡ್ ಪರೀಕ್ಷೆ ರದ್ದುಗೊಳಿಸುವಂತೆ ಕೇಂದ್ರಕ್ಕೆ ಕೇಜ್ರಿವಾಲ್ ಮನವಿ
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಈ ಪರೀಕ್ಷೆಗಳಿಗೆ ಹೊಸ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ವರ್ಷಾ ಗಾಯಕವಾಡ(Varsha Gaikwad) ಟ್ವಿಟರ್ ಮೂಲಕ ತಿಳಿಸಿದ್ದಾರೆ.
📢 Imp Announcement: Given the current #COVID-19 situation in Maharashtra, we’ve postponed state board exams for class 10th & 12th. The present circumstances are not conducive for holding exams. Your health is our priority. #PariskhaPeCharcha #HSC #SSC #exams (1/5) pic.twitter.com/cjeRZAT7ux
— Varsha Gaikwad (@VarshaEGaikwad) April 12, 2021
ಇದನ್ನೂ ಓದಿ- BSNL ಹೊಸ 249 ರೂಪಾಯಿ ಯೋಜನೆಯಲ್ಲಿ ಸಿಗಲಿದೆ Double Data, Free Calling ಸೌಲಭ್ಯ
ಕಳೆದ ಕೆಲವು ವಾರಗಳಿಂದ ದೇಶದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣ(Corona Cases) ಹೊಂದಿರುವ ರಾಜ್ಯವಾಗಿ ಮಹಾರಾಷ್ಟ್ರ ಹೊರ ಹೊಮ್ಮಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 51,751 ಹೊಸ ಪ್ರಕರಣಗಳನ್ನು ವರದಿಯಾಗಿವೆ. ಪ್ರಸ್ತುತ ಒಟ್ಟು 5.64 ಲಕ್ಷ ಕೊರೋನಾ ಸೋಂಕಿತರಿದ್ದಾರೆ. ಮೃತರ ಸಂಖ್ಯೆ 58,245 ಕ್ಕೆ ಬಂದು ತಲುಪಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.