ನವದೆಹಲಿ : Changes From April 1, 2021: ಹೊಸ ಹಣಕಾಸು ವರ್ಷ (New financial year) ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ.  ಈ ಹಿನ್ನೆಲೆಯಲ್ಲಿ ಏಪ್ರಿಲ್ ಒಂದರೊಳಗೆ, ಕೆಲವು ಪ್ರಮುಖ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಆದಾಯ ತೆರಿಗೆಯಲ್ಲಿ (Income tax) ವಿನಾಯಿತಿ ಪಡೆಯಬೇಕಾದರೆ ಮಾಡಬೇಕಾದ ಹೂಡಿಕೆ, ಆಧಾರ್ (Aadhaar) ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡುವಂತಹ ಕೆಲಸಗಳನ್ನು ಏಪ್ರಿಲ್ (April) ಒಂದರ ಒಳಗೆ ಮಾಡಿಕೊಳ್ಳಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಆದಾಯ ತೆರಿಗೆ ರಿಯಾಯಿತಿಗಾಗಿ ಹೂಡಿಕೆ :
ತೆರಿಗೆ ವಿನಾಯಿತಿಯ ಲಾಭ ಪಡೆಯಲು ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡುವುದಾದರೆ, ಅದನ್ನು ಮಾರ್ಚ್ 31 ರೊಳಗೆ ಮಾಡಬೇಕಾಗುತ್ತದೆ.  80 ಸಿ ಮತ್ತು 80 ಡಿ ಯಂತಹ ಆದಾಯ ತೆರಿಗೆ (Income tax) ಕಾಯ್ದೆಯ ಅನೇಕ ವಿಭಾಗಗಳಲ್ಲಿ  ಮಾಡಿದ ಹೂಡಿಕೆಗಳ ಮೇಲಿನ ತೆರಿಗೆ ರಿಯಾಯಿತಿಯ ಲಾಭವನ್ನು ಪಡೆಯ ಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗಿನ ಹೂಡಿಕೆಗಳಿಗೆ (Investment) ತೆರಿಗೆ ವಿನಾಯಿತಿ ಸಿಗುತ್ತದೆ.


ಇದನ್ನೂ ಓದಿ : SIP ಬಗೆಗಿನ ತಪ್ಪು ಕಲ್ಪನೆಗಳನ್ನು ಬಿಟ್ಟು ಹೂಡಿಕೆ ಮಾಡಿ


ಪ್ಯಾನ್ ಕಾರ್ಡ್ ಗೆ ಆಧಾರ್ ಅನ್ನು ಲಿಂಕ್ ಮಾಡುವ ಕಾರ್ಯ :
ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ (Aadhaar) ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ.  ಮಾರ್ಚ್ 31 ರೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದಿದ್ದಲ್ಲಿ ಅದು ನಿಷ್ಕ್ರಿಯಗೊಳ್ಳಲಿದೆ. ಹಾಗಾಗಿ ಪ್ಯಾನ್ ಕಾರ್ಡ್ ನಿಷ್ಕಿಯಗೊಳ್ಳುವುದನ್ನು ತಡೆಯಲು ಮಾರ್ಚ್ 31 ರೊಳಗೆ ಆಧಾರ್ ಜೊತೆ ಅದನ್ನು ಲಿಂಕ್ ಮಾಡಿ.


ಅಗ್ಗದ ಗೃಹ ಸಾಲದ ಲಾಭ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಎಚ್‌ಡಿಎಫ್‌ಸಿ, ಕೊಟಕ್ ಮಹೀಂದ್ರಾ ಮತ್ತು ಐಸಿಐಸಿಐ ಬ್ಯಾಂಕ್ ಗೃಹ ಸಾಲ (Home loan) ಬಡ್ಡಿದರಗಳನ್ನು ಕಡಿಮೆ ಮಾಡಿವೆ. ಕಡಿಮೆ ಬಡ್ಡಿದರದಲ್ಲಿ (Interest rate) ಗೃಹ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ, 31 ಮಾರ್ಚ್ 2021 ರೊಳಗೆ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಡಿ ಎಸ್‌ಬಿಐ, HDFC ಮತ್ತು ಐಸಿಐಸಿಐ ಬ್ಯಾಂಕುಗಳು 6.70% ಬಡ್ಡಿಗೆ ಸಾಲ ನೀಡುತ್ತಿವೆ. ಕೊಟಕ್ ಮಹೀಂದ್ರಾ ಬ್ಯಾಂಕ್ 6.65% ಬಡ್ಡಿಗೆ ಗೃಹ ಸಾಲವನ್ನು ನೀಡುತ್ತಿದೆ.


ಇದನ್ನೂ ಓದಿ : Price hike : April ನಂತರ ಏರಿಕೆಯಾಗಲಿದೆ LED ಟಿವಿಯ ಬೆಲೆ..!


ಪಿಎಂ ಕಿಸಾನ್ ನೋಂದಣಿ :
ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ (PM Kisan samman) ಯೋಜನೆಯಡಿ ಈವರೆಗೆ 7 ಕಂತುಗಳನ್ನು ಬಿಡುಗಡೆಗೊಳಿಸಲಾಗಿದೆ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ತಮ್ಮನ್ನು ನೋಂದಾಯಿಸಲು ಸಾಧ್ಯವಾಗದವರು, ಅವರು ಮಾರ್ಚ್ 31 ರ ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗಾದಲ್ಲಿ ಹೋಳಿ (Holi) ನಂತರ 2000 ರೂ. ಸಿಗಲಿದೆ. 


ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅವಕಾಶ :
ನೀವು ಕೃಷಿಕರಾಗಿದ್ದು, ಇಲ್ಲಿಯವರೆಗೆ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮಾಡದಿದ್ದರೆ, ನಿರಾಶೆಗೊಳ್ಳಬೇಡಿ. ಮಾರ್ಚ್ 31 ರವರೆಗೆ ಅಭಿಯಾನ ಮುಂದುವರೆಯಲಿದೆ. ಇನ್ನೂ KCC ಪಡೆಯದ ರೈತರು ತಮ್ಮ ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು. ಕೆಸಿಸಿ ಮಾಡಿಸುವ ಪ್ರಕ್ರಿಯೆಯನ್ನು ಈಗ ಸರಳಗೊಳಿಸಲಾಗಿದೆ. KCCಗಾಗಿ ರೈತರು ಫಾರ್ಮ್ ಒಂದನ್ನು ಭರ್ತಿ ಮಾಡಬೇಕು. ಇದಾದ 15 ದಿನಗಳಲ್ಲಿ ಅವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಿಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.