ನವದೆಹಲಿ: ಮ್ಯೂಚ್ವಲ್ ಫಂಡ್, SIP ಹೂಡಿಕೆ ಬಗ್ಗೆ ನಮ್ಮಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಮ್ಯೂಚ್ಯುವೆಲ್ ಫಂಡ್, SIP ನಲ್ಲಿ ಹೂಡಿಕೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಇಲ್ಲಿ ಹೂಡಿಕೆ ಮಾಡಿದರೆ ರಿಸ್ಕ್ ಫ್ಯಾಕ್ಟರ್ ಅಧಿಕ ಎನ್ನುವ ಭಾವನೆಗಳೇ ಹೆಚ್ಚು. ಇದು ಯಾಕೆ ಹೀಗೆ ಅಂದರೆ ಮ್ಯೂಚ್ಯುವೆಲ್ ಫಂಡ್ ಮತ್ತು SIP ಬಗ್ಗೆ ನಮಗಿರುವ ಅರ್ಧಂಬರ್ಧ ಮಾಹಿತಿಯಿಂದಾಗಿ. SIP ಬಗ್ಗೆಯಿರುವ ಈ ಏಳು ತಪ್ಪು ಕಲ್ಪನೆಗಳಿಗಂದಾಗಿಯೇ ಜನರು ಇದರಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಾರೆ..
SIP ಬಗ್ಗೆ ಜನರ ಮನಸ್ಸಿನಲ್ಲಿರುವ ತಪ್ಪು ಕಲ್ಪನೆಗಳು ಇವು :
ತಪ್ಪು ಕಲ್ಪನೆ 1 : ಎಸ್‌ಐಪಿ ಕೇವಲ ಸಣ್ಣ ಹೂಡಿಕೆದಾರರಿಗೆ ಮಾತ್ರ..?
ಇದು ಸಂಪೂರ್ಣ ತಪ್ಪು ಮಾಹಿತಿ. ನೀವು 500 ಅಥವಾ 100 ರೂಪಾಯಿಗಳ ಸಣ್ಣ ಮೊತ್ತದಿಂದ SIP ಪ್ರಾರಂಭಿಸಬಹುದು. ಇದನ್ನು ಬಳಿಕ ಹೆಚ್ಚಿಸಲೂ ಬಹುದು. ಎಸ್‌ಐಪಿ ಮೂಲಕ ನೀವು 1 ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ (Mutual Funds) ಹೂಡಿಕೆ ಮಾಡಬಹುದು.
ಇದನ್ನೂ ಓದಿ : Price hike : April ನಂತರ ಏರಿಕೆಯಾಗಲಿದೆ LED ಟಿವಿಯ ಬೆಲೆ..!
ತಪ್ಪು ಕಲ್ಪನೆ 2: ಎಸ್‌ಐಪಿ ಒಂದು 'ಹೂಡಿಕೆ ಪ್ರಾಡಕ್ಟ್.?
SIP ಅಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಇದೊಂದು ಪ್ರಾಡಕ್ಟ್ ಅಲ್ಲವೇ ಅಲ್ಲ. ಇದರ ಮೂಲಕ ನೀವು ಮ್ಯೂಚ್ವಲ್ ಫಂಡ್ ನಲ್ಲಿ ನಿಯಮಿತವಾಗಿ ಹೂಡಿಕೆ (investment) ಮಾಡಬಹುದಾಗಿದೆ. ಅಂದರೆ ನೀವು ಸಿಪ್ ಮೂಲಕ ಮ್ಯೂಚ್ವಲ್ ಫಂಡ್ ನಲ್ಲಿ (Mutual Funds) ಹೂಡಿಕೆ ಮಾಡಬಹುದು. ರಿಸ್ಕ್ ಫ್ಯಾಕ್ಟರ್ ಅವಲೋಕಿಸಿ ಇಕ್ವಿಟಿ ಅಥವಾ ಮ್ಯೂಚ್ವಲ್ ಫಂಡ್ ಆಯ್ಕೆ ಮಾಡಬಹುದು.
ತಪ್ಪು ಕಲ್ಪನೆ 3 :ಮಾರುಕಟ್ಟೆ ಏರಿಕೆ ಸಮಯದಲ್ಲಿ ಸಿಪ್ ಹೂಡಿಕೆ ಮಾಡಬಾರದು..?
ಇದು ಸಂಪೂರ್ಣ ಸುಳ್ಳು. ಮಾರುಕಟ್ಟೆ ಕುಸಿದಾಗ ಹೂಡಿಕೆ ಮಾಡಬೇಕು ಅನ್ನೋದು ಪ್ರತಿಯೊಬ್ಬ ಹೂಡಿಕೆದಾರನ ಯೋಚನೆ. ಆದರೆ, ಹಾಗೆ ಮಾಡಬೇಕು ಅಂತೇನೂ ಇಲ್ಲ. ನೀವು ದೀರ್ಘಾವಧಿ (Long term) ಹೂಡಿಕೆ ಮಾಡಲು ಯೋಚನೆ ಮಾಡುವಿರಾದರೆ, ಮಾರುಕಟ್ಟೆಯ (market) ಏರಿಳಿತದ ಬಗ್ಗೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ಮಾರುಕಟ್ಟೆ ಕುಸಿದಾಗ ನಿಮಗೆ ಹೆಚ್ಚಿಗೆ ಯೂನಿಟ್ ಸಿಗುತ್ತದೆ. ಆದರೆ ಮಾರುಕಟ್ಟೆ ಏರಿಕೆ ಕಂಡಾಗ ಕಡಿಮೆ ಯೂನಿಟ್ ಸಿಗುತ್ತದೆ. ಆದರೆ, ದೀರ್ಘಾವಧಿ ಹೂಡಿಕೆ ವೇಳೆ ಇವೆಲ್ಲಾ ಲೆಕ್ಕಕ್ಕೆ ಬರೋದಿಲ್ಲ .
ಇದನ್ನೂ ಓದಿ : ಅಮೆಜಾನ್ ಫ್ಲಿಪ್ ಕಾರ್ಟ್ ಗೆ ಟಕ್ಕರ್ ನೀಡಲು ರೆಡಿಯಾಗಿದೆ ದೇಸಿ ‘Bharat e Market’
ತಪ್ಪು ಕಲ್ಪನೆ 4 : SIP ಮೊತ್ತವನ್ನು ಬದಲಾಯಿಸಲು ಸಾಧ್ಯವಿಲ್ಲ..?
ಈ ಭ್ರಮೆಯಿಂದ ಹೊರಬನ್ನಿ. SIP ಮೊತ್ತವನ್ನು ನಿಮಗೆ ಬೇಕಾದಾಗ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ನೀವು ಎಸ್‌ಐಪಿ ಪ್ರಮಾಣವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಬಯಸಿದರೆ ಆ ಸಂದರ್ಭದಲ್ಲಿ ನೀವು ಅದನ್ನು ಹೆಚ್ಚೂ ಮಾಡಬಹುದು ಕಡಿಮೆಯೂ ಮಾಡಬಹುದು. ಅಲ್ಲದೆ ಹೂಡಿಕೆಯ ಅವಧಿಯನ್ನು ಸಹಾ ಬದಲಾಯಿಸಬಹುದು.
ನೆನಪಿರಲಿ, ಕೆಲವು ಫಂಡ್ ಗಳಲ್ಲಿ, ಕನಿಷ್ಠ SIP ಮೊತ್ತ ಮತ್ತು ಸಮಯದ ಚೌಕಟ್ಟನ್ನು ನಿಗದಿಪಡಿಸಲಾಗಿದೆ. ಅದನ್ನು ಬದಲಾಯಿಸಲು ಕೆಲ ದಾಖಲೆಗಳು ಮತ್ತು ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ. ಆದರೆ ಯಾವುದೇ ದಂಡ ಅಥವಾ ಶುಲ್ಕ ಇರುವುದಿಲ್ಲ.
ತಪ್ಪು ಕಲ್ಪನೆ 5: ಮಾರುಕಟ್ಟೆ ಕುಸಿದಾಗ ಎಸ್‌ಐಪಿ ನಿಲ್ಲಿಸಬೇಕು.
ಇದು ಸಂಪೂರ್ಣ ತಪ್ಪು. ಷೇರು ಮಾರುಕಟ್ಟೆ ಕುಸಿದಾಗ SIP ಮೂಲಕ ನಿಮಗೆ ಹೆಚ್ಚು ಹೆಚ್ಚು ಯೂನಿಟ್ ಗಳು ಸಿಗುತ್ತವೆ. ಷೇರು ಪೇಟೆ ಕುಸಿದಾಗ (Share market) ಎಸ್ಐಪಿ ನಿಲ್ಲಿಸುವುದು ಸರಿಯಾದ ಸಲಹೆ ಅಲ್ಲ. ಆದರೆ, ಅಂಥಹ ಹೊತ್ತಿನಲ್ಲಿ ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ.
ಇದನ್ನೂ ಓದಿ : PM-SYM ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಸಿಗಲಿದೆ 3,000 ರೂ., ಹೀಗೆ ನೋಂದಾಯಿಸಿ
ತಪ್ಪು ಕಲ್ಪನೆ 6 : ಎಸ್‌ಐಪಿ ವರ್ಷಗಳವರೆಗೆ ರನ್ ಮಾಡಿ :
ಜನರು ಒಂದೇ SIP ಮೊತ್ತವನ್ನು ವರ್ಷಗಳವರೆಗೆ ಇಟ್ಟುಕೊಳ್ಳುತ್ತಾರೆ. ಆದರೆ ನೀವು ದೊಡ್ಡ ಹಣವನ್ನು ಠೇವಣಿ ಮಾಡಲು ಬಯಸಿದರೆ ಕಾಲಕಾಲಕ್ಕೆ ನೀವು ಎಸ್‌ಐಪಿ ಪ್ರಮಾಣವನ್ನು ಹೆಚ್ಚಿಸುತ್ತಲೇ ಇರಬೇಕು. ನಿಮ್ಮ ಸಂಬಳವು (Salary) ಪ್ರತಿವರ್ಷ ಹೆಚ್ಚಾದಂತೆ, ನಿಮ್ಮ ಎಸ್‌ಐಪಿ ಮೊತ್ತವೂ ಅದೇ ಪ್ರಮಾಣದಲ್ಲಿ ಹೆಚ್ಚಾಗಬೇಕು.
ತಪ್ಪು ಕಲ್ಪನೆ 7: ಎಸ್‌ಐಪಿ ಖಾತರಿಯ ಆದಾಯವನ್ನು ನೀಡುತ್ತದೆ :
ಸತ್ಯ ಏನೆಂದರೆ ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮಗೆ ಯಾವುದೇ ಆದಾಯದ (Income) ಭರವಸೆ ಸಿಗುವುದಿಲ್ಲ. ಮ್ಯೂಚುಯಲ್ ಫಂಡ್‌ಗಳು ಮಾರುಕಟ್ಟೆ ಏರಿಳಿತದ ಮೇಲೆ ಅವಲಂಭಿತವಾಗಿದೆ. ಮಾರುಕಟ್ಟೆ ಏರಿಳಿಕೆಯಂತೆ ನಿಮ್ಮ ಮ್ಯೂಚ್ವಲ್ ಫಂಡ್ ಆದಾಯವೂ ಏರಿಳಿಕೆಯಾಗುತ್ತದೆ. ಆದರೆ, ಎಸ್ಐಪಿ ಮೇಲೆ ದೀರ್ಘಾವಧಿ ಹೂಡಿಕೆ ಮಾಡಿದರೆ ಆ ಹೂಡಿಕೆ ಮೇಲೆ ಉತ್ತಮ ರಿಟರ್ನ್ (Return)ಸಿಗುತ್ತದೆ. ಬೇರೆ ಹೂಡಿಕೆಗಳಿಗೆ ಹೋಲಿಸಿದರೆ ಇದರಲ್ಲಿ ಬರುವ ರಿಟರ್ನ್ ಅಧಿಕವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.