Health Ministry PC: ಮನೆಗಳಲ್ಲಿಯೂ Face Mask ಧರಿಸುವ ಕಾಲ ಬಂದಿದೆ, ನೀತಿ ಆಯೋಗದ ಸದಸ್ಯ ವಿ.ಕೆ ಪಾಲ್ ಎಚ್ಚರಿಕೆ!
Health Ministry PC: ಕೊರೋನಾಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿರುವ ಕೇಂದ್ರ ಅರೋಗ್ಯ ಸಚಿವಾಲಯ , ಕಳೆದ ವರ್ಷದ ಹೋಲಿಕೆಯಲ್ಲಿ ಈ ವರ್ಷ ವೈರಸ್ ತುಂಬಾ ವೇಗವಾಗಿ ಹರಡುತ್ತಿದೆ ಎಂದಿದೆ. ಇದರಿಂದ ಜನರಲ್ಲಿ ಭೀತಿಯ ವಾತಾವರಣವಿದ್ದು, ಸಂಪನೂಲಗಳ ದುರುಪಯೋಗ ಆರಂಭಗೊಂಡಿದೆ ಎಂದು ಅದು ಹೇಳಿದೆ.
ನವದೆಹಲಿ: Health Ministry PC - ಭಾರತದಲ್ಲಿ ಕರೋನಾ ವೈರಸ್ (Covid-19) ಸ್ಥಿತಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದೆ (Union Health Ministry Press Conference On Covid-19 Situation). ಈ ಸಮಯದಲ್ಲಿ, ಜಂಟಿ ಕಾರ್ಯದರ್ಶಿಗಳು ಈ ಬಾರಿ ಕರೋನ ಸೋಂಕು ಹಿಂದಿನ ವರ್ಷಕ್ಕಿಂತ ವೇಗವಾಗಿ ಹರಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ವೈರಸ್ ಮಾನವರಲ್ಲಿ ಮಾತ್ರ ಹರಡುತ್ತದೆ, ಅದನ್ನು ತಡೆಯಲು, ಕೋವಿಡ್ -19 ಸೂಕ್ತ ನಡವಳಿಕೆಯನ್ನು ಕಾರ್ಯಗತಗೊಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಈ ರಾಜ್ಯಗಳಲ್ಲಿ 1-1 ಲಕ್ಷಕ್ಕಿಂತ ಹೆಚ್ಚು ಸಕ್ರೀಯ ಪ್ರಕರಣಗಳು
ಪ್ರಸ್ತುತ ದೇಶದಲ್ಲಿ ಶೇ.82 ರಷ್ಟು ಕರೋನಾ ರೋಗಿಗಳನ್ನು ಗುಣಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಸುಮಾರು 16.25% ಪ್ರಕರಣಗಳು ಅಂದರೆ 28,13,658 ಪ್ರಕರಣಗಳು ಇನ್ನೂ ಸಕ್ರಿಯ ಪ್ರಕರಣಗಳಾಗಿವೆ. ಇವುಗಳ ಮೇಲೆ ನಿಗಾ ಇಡಲಾಗುತ್ತಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ಛತ್ತಿಸ್ಗಡ್, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದರೆ. ಈ ರಾಜ್ಯಗಳಲ್ಲಿ ಪ್ರಸ್ತುತ 1-1 ಲಕ್ಷ ಕರೋನಾ ಸಕ್ರಿಯ ಪ್ರಕರಣಗಳಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಣ್ಣ ಪುಟ್ಟ ಲಕ್ಷಣಗಳು ಕಂಡುಬಂದರೂ ಕೂಡ ಕೊರೊನಾ ಟೆಸ್ಟ್ ಕೈಗೊಳ್ಳಿ
ಪ್ರಸ್ತುತ ನಾವು ಎಲ್ಲಾ ರಾಜ್ಯಗಳ ಸರ್ಕಾರಗಳ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ ಹಾಗೂ ಸಾಧ್ಯವಾದ ನೆರವು ಒದಗಿಸುವ ಪ್ರಯತ್ನನಡೆಸುತ್ತಿದ್ದೇವೆ ಎಂದು ಲವ್ ಅಗರವಾಲ್ ಹೇಳಿದ್ದಾರೆ. ಯಾವುದೇ ಓರ್ವ ವ್ಯಕ್ತಿಯಲ್ಲಿ ಕೊರೊನಾದ ಸಣ್ಣ ಪುಟ್ಟ ಲಕ್ಷಣಗಳಿದ್ದರೂ ಕೂಡ ತಡಮಾಡದೆ ಅವರು ಕೊರೊನಾ ಟೆಸ್ಟ್ ಮಾಡಿಸಬೇಕು ಎಂದು ಜನರಲ್ಲಿ ಅವರು ಮನವಿ ಮಾಡಿದ್ದಾರೆ. ನಿಮ್ಮ ಅಕ್ಕ-ಪಕ್ಕ ಭಯದ ವಾತಾವರಣ ನಿರ್ಮಾಣಗೊಳ್ಳದಿರಲಿ ಎಂಬುದರ ಎಚ್ಚರಿಕೆವಹಿಸಿ. ಕೊರೊನಾದಿಂದ ಪಾರಾಗಲು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಇತ್ಯಾದಿ ಪರಿಪಾಲನೆ ಅತ್ಯಾವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.
ಜನರಲ್ಲಿ ಅನಾವಶ್ಯಕ ಭಯ: ರಣದೀಪ್ ಗುಲೇರಿಯಾ
ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ AIIMS ನಿರ್ದೇಶಕ ರಣದೀಪ್ ಗುಲೇರಿಯಾ, " 'ಕರೋನಾ (Coronavirus) ವಿರುದ್ಧದ ಈ ಯುದ್ಧದಲ್ಲಿ ಇಡೀ ಭಾರತ ಒಗ್ಗೂಡಿ ಹೋರಾಟ ನಡೆಸಬೇಕಿದೆ. ಪ್ರಸ್ತುತ ಜನರಲ್ಲಿ ಭಾರಿ ಭೀತಿಯ ವಾತಾವರಣವಿದೆ. ಇದರಿಂದ ಸಾಕಷ್ಟು ಹಾನಿಯಾಗುತ್ತಿದೆ. ಕರೋನಾ ಪಾಸಿಟಿವ್ ವರದಿ ಬಂದವರೆಲ್ಲರೂ ಕೂಡ ನೇರವಾಗಿ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ ಮತ್ತು ಔಷಧಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಷ್ಟೇ ಅಲ್ಲ ಆಮ್ಲಜನಕವನ್ನು ಸಹ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- ರಾಜ್ಯ ಸರ್ಕಾರದಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ 'ಉಚಿತ ಕೊರೋನಾ ಲಸಿಕೆ'..!
ಕೊರೊನಾ ಚಿಕಿತ್ಸೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿಲ್ಲ ರೆಮ್ದೆಸಿವಿರ್
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ಆಸ್ಪತ್ರೆಗಳ ಸಂಪನ್ಮೂಲಗಳನ್ನು ಸರಿಯಾಗಿ ಬಳಕೆ ಮಾಡಬೇಕಿದೆ. ಅನಾವಶ್ಯಕವಾಗಿ ರೆಮ್ದೆಸಿವಿರ್ (Remedesivir) ಹಿಂದೆ ಧಾವಿಸಬೇಡಿ ಎಂದು ನಾನು ಪುನರುಚ್ಚರಿಸಲು ಇಷ್ಟಪಡುತ್ತೇನೆ. ಈ ಔಷಧಿ ಹೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಗೂ ಕೂಡ ಇದರಲ್ಲಿ ಯಾವುದೇ ಪರಿಣಾಮ ಕಂಡುಬಂದಿಲ್ಲ. ಅದರ ಹೊರತಾಗಿಯೂ ಕೂಡ ಈ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ- ರಾಜ್ಯದಲ್ಲಿ 14 ದಿನ ಕಂಪ್ಲೀಟ್ ಲಾಕ್ ಡೌನ್..!
ಮನೆಯಲ್ಲಿಯೇ ಮಾಸ್ಕ್ ಧರಿಸುವ ಕಾಲ ಬಂದೊದಗಿದೆ
ಈ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ನೀತಿ ಆಯೋಗದ (Niti Aayog) ಸದಸ್ಯ (ಆರೋಗ್ಯ ವಿಭಾಗ) ಡಾ. ವಿ. ಕೆ ಪಾಲ್, 'ಇನ್ನೂ ನೀವು ಮನೆಯಲ್ಲಿಯೂ ಕೂಡ ಮಾಸ್ಕ್ ಧರಿಸಬೇಕಾದ ಕಾಲ ಬಂದಿದೆ' ಎಂದಿದ್ದಾರೆ. ಯಾವುದೇ ಒಂದು ವ್ಯಕ್ತಿಯಲ್ಲಿ ಕೊರೊನಾ ರೋಗದ ಸಾಮಾನ್ಯ ಲಕ್ಷಣಗಳಿದ್ದು, ವರದಿ ಅದನ್ನು ಪುಷ್ಥೀಕರಿಸದಿದ್ದರೂ ಕೂಡ ಕೆಲ ಸಮಯದ ವರೆಗೆ ಕ್ವಾರಂಟೀನ್ ಗೆ ಒಳಗಾಗುವ ಅವಸ್ಯತ್ಕತೆ ಇದೆ. ಇನ್ನೊಂದೆಡೆ ಮನೆಯಲ್ಲಿ ಯಾರಾದರು ಸಕ್ರೀಯವಾಗಿದ್ದರೆ, ನೀವೂ ಕೂಡ ಸೋಂಕಿಗೆ ಗುರಿಯಾಗಿರುವಿರಿ ಎಂದು ಭಾವಿಸಿ. ಹೀಗಾಗಿ ಮನೆಯಲ್ಲಿಯೂ ಕೂಡ ಫೇಸ್ ಮಾಸ್ಕ್ ಧರಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಡಾ. ಪಾಲ್ ಹೇಳಿದ್ದಾರೆ.
ಇದನ್ನೂ ಓದಿ- Oxygen Stock : 'ಆಕ್ಸಿಜನ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಭಾರತದಲ್ಲಿ ಸಾಕಷ್ಟು ಸ್ಟಾಕ್ ಇದೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.