Karnataka Govt: ರಾಜ್ಯ ಸರ್ಕಾರದಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ 'ಉಚಿತ ಕೊರೋನಾ ಲಸಿಕೆ'..!

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ಉಚಿತವಾಗಿ ಕೊರೋನಾ ಲಸಿಕೆ 

Last Updated : Apr 26, 2021, 04:34 PM IST
  • ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ಉಚಿತವಾಗಿ ಕೊರೋನಾ ಲಸಿಕೆ
  • ಅರ್ಹ ನಾಗರಿಕರು ಏಪ್ರಿಲ್ 28 ರಿಂದ ನೋಂದಾಯಿಸಿಕೊಳ್ಳಬೇಕೆಂದು ಸಿಎಂ ಒತ್ತಾಯ
  • ಸಧ್ಯ ರಾಜ್ಯದಲ್ಲಿ 13,39,210 ಕೊರೋನಾ ಪ್ರಕರಣಗಳಿವೆ.
Karnataka Govt: ರಾಜ್ಯ ಸರ್ಕಾರದಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ 'ಉಚಿತ ಕೊರೋನಾ ಲಸಿಕೆ'..! title=

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ಉಚಿತವಾಗಿ ಕೊರೋನಾ  ಲಸಿಕೆ ನೀಡುವುದಾಗಿ ರಾಜ್ಯ ಸರ್ಕಾರ ಇಂದು ಪ್ರಕಟಿಸಿದೆ. 

ಒಡಿಶಾ, ಹರಿಯಾಣ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಈಗಾಗಲೇ ಉಚಿತ ಲಸಿಕೆ(Free Vaccin) ನೀಡುವುದಾಗಿ ಘೋಷಣೆ ಮಾಡಿವೆ. ಕಳೆದ ವಾರ ಕೇಂದ್ರ ಸರ್ಕಾರವು ಈ ವಯಸ್ಸಿನ ಎಲ್ಲ ಜನರಿಗೆ ವ್ಯಾಕ್ಸಿನೇಷನ್ ಅನ್ನು ಮೇ 1 ರಿಂದ ನೀಡುವುದಾಗಿ ಹೇಳಿದೆ.

ಇದನ್ನೂ ಓದಿ : BS Yediyurappa: ರಾಜ್ಯದಲ್ಲಿ 14 ದಿನ ಕಂಪ್ಲೀಟ್ ಲಾಕ್ ಡೌನ್..!

ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa), ರಾಜ್ಯದ ಎಲ್ಲಾ ಸರ್ಕಾರಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ 18-44 ವರ್ಷದೊಳಗಿನ ಜನರು ಕೋವಿಡ್ 19 ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಟ್ವಿಟರ್‌ ನಲ್ಲಿ ಬರೆದು ಕೊಂಡಿದ್ದಾರೆ.

ಇದನ್ನೂ ಓದಿ : Suresh Kumar: ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ! 

45 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ(Citizens) ಕೇಂದ್ರ ಸರ್ಕಾರದ ವ್ಯಾಕ್ಸಿನೇಷನ್ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : Monsoon Season: ರಾಜ್ಯದಲ್ಲಿ ಮಾನ್ಸೂನ್ ಆರಂಭ: ರೈತರಲ್ಲಿ ಮುಖದಲ್ಲಿ ಭರವಸೆ!

ಅರ್ಹ ನಾಗರಿಕರು ಏಪ್ರಿಲ್ 28 ರಿಂದ ನೋಂದಾಯಿಸಿ(Register)ಕೊಳ್ಳಬೇಕೆಂದು ಸಿಎಂ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Complete Lockdown: ರಾಜ್ಯದಲ್ಲಿ 'ಸಂಪೂರ್ಣ ಲಾಕ್ ಡೌನ್' : ಸರ್ಕಾರದ ಉನ್ನತ ಅಧಿಕಾರಿಗಳಿಂದ ಮಾಹಿತಿ!

ರಾಜ್ಯದಲ್ಲಿ ಭಾನುವಾರ (24 ಗಂಟೆ) ಒಂದೇ ದಿನ 34,000 ಕ್ಕೂ ಹೆಚ್ಚು ಕರೋನವೈರಸ್ ಪ್ರಕರಣ(Covid-19 Cases)ಗಳು  ವರದಿಯಾಗಿವೆ, ಈ ರೋಗ ಕಾಣಿಸಿಕೊಂಡಾಗಿನಿಂದ ಇದು ಏಕದಿನದಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದ ದಿನವಾಗಿದೆ.

ಇದನ್ನೂ ಓದಿ : ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 17 ಸಾವಿರ ಕೊರೊನಾ ಪ್ರಕರಣ ದಾಖಲು

ರಾಜ್ಯ ಆರೋಗ್ಯ ಬುಲೆಟಿನ್ ಪ್ರಕಾರ, ಸಧ್ಯ ರಾಜ್ಯದಲ್ಲಿ 13,39,210 ಕೊರೋನಾ ಪ್ರಕರಣಗಳಿವೆ. ಈ ಪೈಕಿ ಬೆಂಗಳೂರಿನಲ್ಲಿ ಮಾತ್ರ ಕಳೆದ 24 ಗಂಟೆಗಳಲ್ಲಿ 20,733 ಪ್ರಕರಣಗಳು ವರದಿಯಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News