BS Yediyurappa: ರಾಜ್ಯದಲ್ಲಿ 14 ದಿನ ಕಂಪ್ಲೀಟ್ ಲಾಕ್ ಡೌನ್..! 

ಬೆಳಗ್ಗೆ 6 ರಿಂದ 10 ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

Last Updated : Apr 26, 2021, 02:46 PM IST
  • ನಾಳೆಯಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ
  • ಸಿಎಂ ಬಿಎಸ್ ಯಡಿಯೂರಪ್ಪ ಲಾಕ್ ಡೌನ್ ಘೋಷಣೆ
  • ಬೆಳಗ್ಗೆ 6 ರಿಂದ 10 ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
BS Yediyurappa: ರಾಜ್ಯದಲ್ಲಿ 14 ದಿನ ಕಂಪ್ಲೀಟ್ ಲಾಕ್ ಡೌನ್..!  title=

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜೋರಾಗಿರುವುದರಿಂದ ಅದನ್ನ ತಡೆಯುವ ನಿಟ್ಟಿನಲ್ಲಿ ನಾಳೆಯಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

ಇಂದು ನಗರದ್ಲಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ(BS Yediyurappa), ಕೊರೋನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ಹೇಳಿದರು.

ಇದನ್ನೂ ಓದಿ : Suresh Kumar: ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ! 

ಈ ಕಾರಣದಿಂದ ರಾಜ್ಯಾದ್ಯಂತ 14 ದಿನಗಳ ಲಾಕ್ ಡೌನ್ ಘೋಷಣೆ(Covid Curfew) ಮಾಡಲಾಗಿದ್ದು, ಈ ಸಮಯದಲ್ಲಿ  ಅಗತ್ಯ ಸೇವೆಗಳನ್ನು ಹೊರತುಪಡಿಸಿ ರಾಜ್ಯ ಸಂಪೂರ್ಣ ಬಂದ್ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ : Monsoon Season: ರಾಜ್ಯದಲ್ಲಿ ಮಾನ್ಸೂನ್ ಆರಂಭ: ರೈತರಲ್ಲಿ ಮುಖದಲ್ಲಿ ಭರವಸೆ!

ಈ ಕುರಿತು ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗ್ಗೆ 6 ರಿಂದ 10 ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಆ ಬಳಿಕ ಎಲ್ಲ ಅಂಗಡಿ(Shops) ಮುಂಗಟ್ಟುಗಳನ್ನು ಮುಚ್ಚಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : Complete Lockdown: ರಾಜ್ಯದಲ್ಲಿ 'ಸಂಪೂರ್ಣ ಲಾಕ್ ಡೌನ್' : ಸರ್ಕಾರದ ಉನ್ನತ ಅಧಿಕಾರಿಗಳಿಂದ ಮಾಹಿತಿ!

ಇದೇ ವೇಳೆ ಮೆಡಿಕಲ್, ಗಾರ್ಮೆಂಟ್ ಮತ್ತು ಕೃಷಿ ಚಟುವಟಿಕೆಗಳಿಗೆ ಯಾವುದೇ ಕಟ್ಟುಪಾಡುಗಳಿರುವುದಿಲ್ಲ. ಹೊಸ ಮಾರ್ಗಸೂಚಿಗಳನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ಸರ್ಕಾರ ಬಿಡುಗಡೆ ಮಾಡಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News