State-Wise Weather Report : ಮುಂದಿನ ಕೆಲವು ದಿನಗಳ ಕಾಲ ದೇಶದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸುಚನೆ ನೀಡಿದೆ. ಹರಿಯಾಣ, ಚಂಡೀಗಢ, ದೆಹಲಿ ಹಾಗೂ ಪಶ್ಚಿಮ ರಾಜಸ್ಥಾನ ರಾಜ್ಯಗಳ ವಾತಾವರಣ ಒಣ ಹವೆಯಿಂದ ಕೂಡಿರುವದರಿಂದ ಆ ರಾಜ್ಯಗಳನ್ನು ಹೊರತುಪಡಿಸಿ, ವಿವಿಧ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


COMMERCIAL BREAK
SCROLL TO CONTINUE READING

ದೇಶಾದ್ಯಂತ ಮುಂದಿನ ಕೆಲವು ದಿನಗಳ ಕಾಲ ತಾಪಮಾನದಲ್ಲಿ ಯಾವುದೇ ಗರಿಷ್ಠ ಬದಲಾವಣೆ ಇರದ ಹಿನ್ನೆಲೆ -ಸೆಪ್ಟೆಂಬರ್‌ 3ರಂದು ಪಶ್ಚಿಮ ಬಂಗಾಳ ಗಂಗಾತೀರ, ಒಡಿಶಾ, ಆಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಮಧ್ಯ ಮಹಾರಾಷ್ಟ್ರ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ, ರಾಯಲಸೀಮಾ, ತೆಲಂಗಾಣ, ಕೇರಳ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.


ಇದನ್ನು ಓದಿ- Rain Alert: ರಾಜ್ಯದ ಈ ಭಾಗದಲ್ಲಿ 2 ದಿನಗಳ ಕಾಲ ಭಾರೀ ವರ್ಷಧಾರೆ: ಬಿರುಗಾಳಿ ಸಹಿತ ಪ್ರವಾಹದ ಎಚ್ಚರಿಕೆ


ಅಲ್ಲದೆ, ಸೆಪ್ಟೆಂಬರ್‌ 4ರಂದು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ, ಒಡಿಸಾ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾಣಂ, ತೆಲಂಗಾಣ, ಕೇರಳ ಪ್ರದೇಶಗಳು ಭಾರೀ ಮಟ್ಟದಲ್ಲಿ ಮಳೆಯಾಗಲಿದ್ದು, ಛತ್ತೀಸ್‌ಗಢ, ಮರಾಠವಾಡ, ರಾಯಲಸೀಮಾ ಮತ್ತು ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಅತಿ ಮಳೆಯಾಗುವ ನಿರೀಕ್ಷೆಯಿದೆ. ಸೆಪ್ಟೆಂಬರ್‌ 5ರಂದು ಒಡಿಸಾ, ತೆಲಂಗಾಣ, ಕೇರಳ ಈ ಸ್ಥಳಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಅಲ್ಲದೆ, ವಿದರ್ಭ, ಛತ್ತಿಸ್‌ಗಢ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ಮರಾಠಾವಾಡ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ ಅಲ್ಲಿ ಅತೀ ಮಳೆಯಾಗಲಿದೆ,.


ಇನ್ನು ಸೆಪ್ಟಂಬರ್‌ 6 ರಂದು ಕೇರಳ, ವಿದರ್ಭ, ಛತ್ತಿಸ್‌ಗಢ, ಒಡಿಸಾ ಮತ್ತು ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ ಪ್ರದೇಶಗಳಲ್ಲಿ ಭಾರೀ ಮಟ್ಟದಲ್ಲಿ ಮಳೆಯಾಗುವ ಮೂನ್ಸುಚನೆಯಿದೆ. ಭಾರತೀಯ ಹವಾಮಾನ ಇಲಾಖೆ ಪ್ರತ್ಯೇಕ ಸ್ಥಳಗಳನ್ನು ಸೂಚಿಸಿ, ಯಾವ ಸ್ಥಳಗಳಲ್ಲಿ ಎಷ್ಟು ಮಟ್ಟದಲ್ಲಿ ಮಳೆಯಾಗಲಿದೆ ಎಂದು ವಿವರವಾದ ಮಾಹಿತಿಯೊಂದಿಗೆ ಮೂನ್ಸುಚನೆ ನೀಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ