26/11 Mumbai attack: 26/11 ಈ ದಿನವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಭಾರತದ ಇತಿಹಾಸದಲ್ಲಿ ಕರಾಳ ದಿನವೆಂದು ಗುರುತಿಸಲ್ಷಟ್ಟ ಈ ದಿನ ಮುಂಬೈಕರ್ ನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ. ಭಯೋತ್ಪಾದಕ ದಾಳಿಗಳ ಸರಣಿಯು ನಾಲ್ಕು ದಿನಗಳ ಕಾಲ ಮುಂದುವರೆದಿತ್ತು. 12 ಸಂಘಟಿತ ಗುಂಡಿನ ದಾಳಿಗಳು ಮತ್ತು ಬಾಂಬ್ ಸ್ಫೋಟಗಳು ನಡೆದ ದಿನಕ್ಕೆ ಇಂದು 14 ವರ್ಷ ಪೂರ್ಣಗೊಂಡಿದೆ. ಛತ್ರಪತಿ ಶಿವಾಜಿ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್, ತಾಜ್ ಪ್ಯಾಲೇಸ್ ಮತ್ತು ಟವರ್ ಸೇರಿದಂತೆ ನಗರದ ಅನೇಕ ಭಾಗಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದವರೆಷ್ಟೋ, ನೋವುಂಡವರೆಷ್ಟೋ…


COMMERCIAL BREAK
SCROLL TO CONTINUE READING

ಇದನ್ನೂ ಓದಿ: Shraddha Murder Case: ಶ್ರದ್ಧಾ ಹತ್ಯೆಯ ನಂತರ ಅಫ್ತಾಬ್ ಮನೆಗೆ ಬಂದಿದ್ದ ಹುಡುಗಿ ಯಾರು? ತನಿಖೆಯಲ್ಲಿ ಬಹಿರಂಗ


ನವೆಂಬರ್ 29, 2008 ರಂದು ಅಂದರೆ ದಾಳಿಯ ಕೊನೆಯ ದಿನದಂದು,ತಾಜ್ ಹೋಟೆಲ್‌ನಿಂದ ಭಯೋತ್ಪಾದಕರನ್ನು ಹೊರಹಾಕಲು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಆಪರೇಷನ್ ಟೊರ್ನಾಡೋವನ್ನು ನಡೆಸಿತು. ದಾಳಿಯಲ್ಲಿ ವಿದೇಶಿಗರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 166 ಜನರು ಕೊಲ್ಲಲ್ಪಟ್ಟರು. ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿರುವ ಒಂಬತ್ತು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದರಲ್ಲಿ ಸೆರೆ ಸಿಕ್ಕಿದ್ದ ಭಯೋತ್ಪಾದಕ ಅಜ್ಮಲ್ ಕಸಬ್ ನ್ನನು ಬಂಧಿಸಲಾಯಿತು. ಆ ಬಳಿಕ ಆತನಿಗೆ ಮರಣದಂಡನೆ ವಿಧಿಸಿ, ನವೆಂಬರ್ 21, 2012 ರಂದು ಗಲ್ಲಿಗೇರಿಸಲಾಯಿತು.


ದಾಳಿಯ ಆ ದಿನಗಳು:


ನವೆಂಬರ್ 26, 2008: ಒಟ್ಟು 10 ಎಲ್‌ಇಟಿ ಸಂಘಟನೆಯ ಭಯೋತ್ಪಾದಕರು ಕರಾಚಿಯಿಂದ ಸ್ಪೀಡ್‌ಬೋಟ್‌ ಮೂಲಕ ಮುಂಬೈಗೆ ಆಗಮಿಸಿದರು. ಅಲ್ಲಿಂದ ಇಬ್ಬಿಬ್ಬರಾಗಿ ವಿಂಗಡಣೆಗೊಂಡು ಒಂದೊಂದು ಸ್ಥಳಕ್ಕೆ ತೆರಳಿ ಅಲ್ಲಿ ಗುಂಡಿನ ದಾಳಿ ನಡೆಸುತ್ತಾರೆ. ಛತ್ರಪತಿ ಶಿವಾಜಿ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್, ತಾಜ್ ಪ್ಯಾಲೇಸ್ ಮತ್ತು ಟವರ್ ಸೇರಿದಂತೆ ಆಸ್ಪತ್ರೆಗಳ ಮೇಲೆ ಕೂಡ ದಾಳಿ ನಡೆಸಿದ ಉಗ್ರಗಾಮಿಗಳು ಅಶೋಕ್ ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಕೊಲ್ಲುತ್ತಾರೆ. ಕಾಮ್ಟೆ, ವಿಜಯ್ ಸಲಸ್ಕರ್ ಮತ್ತು ನಂತರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಅವರೂ ಸಹ ಈ ದಾಳಿಯಲ್ಲಿ ಹುತಾತ್ಮರಾಗುತ್ತಾರೆ. ಆದರೆ ಅಂದು ನಡೆದ ಗುಂಡಿನ ಚಕಮಕಿಯಲ್ಲಿ ಕಸಬ್ ಸೆರೆಯಾಗುತ್ತಾನೆ.


ಆ ದಿನ ತಾಜ್ ಹೋಟೆಲ್‌ನಿಂದ ಹೊರ ಬರುತ್ತಿದ್ದ ಹೊಗೆಯ ದೃಶ್ಯಗಳನ್ನು ಕಂಡ ಮುಂಬೈ ಮತ್ತು ದೇಶ ಜನರ ಜೀವಕ್ಕೆ ಅಪಾಯ ಆಗದಿರಲಿ ಎನ್ನುತ್ತಾ ಪ್ರಾರ್ಥನೆ ಮಾಡುತ್ತಿತ್ತು.


ನಾಲ್ಕು ಭಯೋತ್ಪಾದಕರಲ್ಲಿ ಇಬ್ಬರು ಅಬ್ದುಲ್ ರೆಹಮಾನ್ ಬಡಾ ಮತ್ತು ಅಬು ಅಲಿ ಪೊಲೀಸ್ ಪೋಸ್ಟ್ ಮುಂದೆ ಕಚ್ಚಾ ಆರ್‌ಡಿಎಕ್ಸ್ ಬಾಂಬ್ ಅನ್ನು ಸಿಡಿಸಿ ಮುಖ್ಯ ದ್ವಾರವನ್ನು ತಲುಪುತ್ತಾರೆ. ಅವರ ಬಳಿ AK 47 ಗಳು, ಮದ್ದುಗುಂಡುಗಳು ಮತ್ತು ಗ್ರೆನೇಡ್‌ಗಳಿದ್ದು, ಲಾಬಿ ಪ್ರದೇಶಕ್ಕೆ ಹೋಗುವಾಗ ಸಿಕ್ಕ ಸಿಕ್ಕ ಕಡೆ ಗುಂಡು ಹಾರಿಸುತ್ತಾ ಜನರನ್ನು ಹೀನಾಯವಾಗಿ ಕೊಲ್ಲುತ್ತಾರೆ.


ಇತರ ಇಬ್ಬರು ಭಯೋತ್ಪಾದಕರು ಶೋಯೆಬ್ ಮತ್ತು ಉಮರ್ ಮತ್ತೊಂದು ಬಾಗಿಲಿನ ಮೂಲಕ ಹೋಟೆಲ್‌ಗೆ ಪ್ರವೇಶಿಸಿ ಪೂಲ್‌ಸೈಡ್ ಪ್ರದೇಶದಲ್ಲಿ ಅತಿಥಿಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸುತ್ತಾರೆ. ಭದ್ರತಾ ಸಿಬ್ಬಂದಿ ರವೀಂದ್ರ ಕುಮಾರ್ ಮತ್ತು ಅವರ ನಾಯಿ ಲ್ಯಾಬ್ರಡಾರ್ ರಿಟ್ರೈವರ್ ಸೇರಿದಂತೆ ನಾಲ್ವರು ವಿದೇಶಿಯರನ್ನು ಗುಂಡಿಕ್ಕಿ ಕೊಲ್ಲಲಾಯಿತು.


ಮಧ್ಯರಾತ್ರಿಯ ಹೊತ್ತಿಗೆ ಅತಿಥಿಗಳು ಸಣ್ಣ ಕೋಣೆಗಳಲ್ಲಿ ಕೂಡಿಹಾಕಲ್ಪಟ್ಟರು. ಈ ಸಂದರ್ಭದಲ್ಲಿ ಮುಂಬೈ ಪೊಲೀಸರು ಹೋಟೆಲ್ ಅನ್ನು ಸುತ್ತುವರೆದಿದ್ದರು. ಸುಮಾರು 1 ಗಂಟೆಗೆ ಹೋಟೆಲ್‌ನ ಕೇಂದ್ರ ಗುಮ್ಮಟದಲ್ಲಿ ಭಯಾನಕ್ ಬಾಂಬ್ ಸ್ಫೋಟ ಸಂಭವಿಸಿತು.


ನವೆಂಬರ್ 27, 2008: ಸೇನೆಯ ಸೈನಿಕರು ಮತ್ತು ಸಾಗರ ಕಮಾಂಡೋಗಳು ತಾಜ್, ಟ್ರೈಡೆಂಟ್ ಮತ್ತು ನಾರಿಮನ್ ಹೌಸ್ ಅನ್ನು ಸುತ್ತುವರೆಯಿತು. ಭಯೋತ್ಪಾದಕರು ಹೋಟೆಲ್‌ನ ನಾಲ್ಕನೇ ಮಹಡಿಯಲ್ಲಿನ ಕೋಣೆಗೆ ಬೆಂಕಿ ಹಚ್ಚಿದಾಗ ಮತ್ತೆ ಗುಂಡಿನ ಚಕಮಕಿ ನಡೆಯಿತು.


ನವೆಂಬರ್ 28, 2008: ಟ್ರೈಡೆಂಟ್ ಮತ್ತು ನಾರಿಮನ್ ಹೌಸ್‌ನಲ್ಲಿ ಕಮಾಂಡೋಗಳು ತಮ್ಮ ಕಾರ್ಯಾಚರಣೆಯನ್ನು ಮುಗಿಸಿದರು.


ಇದನ್ನೂ ಓದಿ: ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ₹ 175 ಕೋಟಿ ತೆರಿಗೆ ವಿನಾಯಿತಿ....! ಕಾರಣ ಇಲ್ಲಿದೆ


ನವೆಂಬರ್ 29, 2008: ತಾಜ್‌ನಲ್ಲಿ ಉಳಿದ ಭಯೋತ್ಪಾದಕರನ್ನು ಹೊಡೆದುರುಳಿಸಲು ಎನ್‌ಎಸ್‌ಜಿ ಯನ್ನು ಕರೆಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಉಗ್ರರನ್ನು ಎನ್ ಎಸ್ ಜಿ ಸದೆಬಡಿಯಿತು. ಆದರೆ ಕಮಾಂಡೋ ಸುನಿಲ್ ಯಾದವ್ ಅವರನ್ನು ರಕ್ಷಿಸುವ ಸಂದರ್ಭದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಗಂಭೀರವಾಗಿ ಗಾಯಗೊಂಡು ಹುತಾತ್ಮರಾದರು. ಸುದೀರ್ಘ ಗುಂಡಿನ ಚಕಮಕಿಯಲ್ಲಿ ಸಾರ್ಜೆಂಟ್ ಗಜೇಂದ್ರ ಸಿಂಗ್ ಬಿಶ್ತ್ ಅವರು ನಾರಿಮನ್ ಹೌಸ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.