Excise Policy Scam : ಲಿಕ್ಕರ್ ಪಾಲಿಸಿ ಹಗರಣದ 10,000 ಪುಟಗಳ ಚಾರ್ಜ್ ಶೀಟ್ : ಆದ್ರೆ, ಸಿಸೋಡಿಯಾ ಹೆಸರಿಲ್ಲ!

ವಿಜಯ್ ನಾಯರ್, ಅಭಿಷೇಕ್ ಬೋಯಿನಪಲ್ಲಿ, ಸಮೀರ್ ಮಹೇಂದ್ರು, ಅರುಣ್ ರಾಮಚಂದ್ರ ಪಿಳ್ಳೈ, ಮುತಾ ಗೌತಮ್, ಅಬಕಾರಿ ಇಲಾಖೆ ಉಪ ಆಯುಕ್ತ ಕುಲದೀಪ್ ಸಿಂಗ್ ಮತ್ತು ಅಬಕಾರಿ ಇಲಾಖೆ ಸಹಾಯಕ ಆಯುಕ್ತ ನರೇಂದ್ರ ಸಿಂಗ್ ಅವರನ್ನು ಚಾರ್ಜ್ ಶೀಟ್‌ನಲ್ಲಿ ಸಿಬಿಐ ಆರೋಪಿಗಳೆಂದು ಹೆಸರಿಸಿದೆ. ಈ ಪ್ರಕರಣದಲ್ಲಿ ಸಿಬಿಐ 10,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

Written by - Channabasava A Kashinakunti | Last Updated : Nov 25, 2022, 04:50 PM IST
  • ಮದ್ಯ ನೀತಿ ಹಗರಣ ಪ್ರಕರಣ
  • ಸಿಬಿಐ ಇಂದು ಚಾರ್ಜ್ ಶೀಟ್ ಸಲ್ಲಿಸಿದೆ
  • ಮನೀಶ್ ಸಿಸೋಡಿಯಾ ಹೆಸರನ್ನು ಕೈ ಬಿಡಲಾಗಿದೆ.
Excise Policy Scam : ಲಿಕ್ಕರ್ ಪಾಲಿಸಿ ಹಗರಣದ 10,000 ಪುಟಗಳ ಚಾರ್ಜ್ ಶೀಟ್ : ಆದ್ರೆ, ಸಿಸೋಡಿಯಾ ಹೆಸರಿಲ್ಲ! title=

Chargesheet in Excise Policy Scam : ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಸಿಬಿಐ ಇಂದು ಚಾರ್ಜ್ ಶೀಟ್ ಸಲ್ಲಿಸಿದೆ. ಈ ಆರೋಪಪಟ್ಟಿಯಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೆಸರನ್ನು ಕೈ ಬಿಡಲಾಗಿದೆ. 

ಸಿಬಿಐ ಪ್ರಕಾರ, ಚಾರ್ಜ್ ಶೀಟ್‌ನಲ್ಲಿ ಇಬ್ಬರು ಬಂಧಿತ ಉದ್ಯಮಿಗಳು, ಸುದ್ದಿ ವಾಹಿನಿಯ ಮುಖ್ಯಸ್ಥರು, ಹೈದರಾಬಾದ್ ಮೂಲದ ಮದ್ಯ ವ್ಯಾಪಾರಿ, ದೆಹಲಿ ಮೂಲದ ಮದ್ಯ ವಿತರಕರು ಮತ್ತು ಅಬಕಾರಿ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿದ್ದಾರೆ.

ಇದನ್ನೂ ಓದಿ : PM Narendra Modi : ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಮತ್ತೆ ಅಗ್ರಸ್ಥಾನ

ವಿಜಯ್ ನಾಯರ್, ಅಭಿಷೇಕ್ ಬೋಯಿನಪಲ್ಲಿ, ಸಮೀರ್ ಮಹೇಂದ್ರು, ಅರುಣ್ ರಾಮಚಂದ್ರ ಪಿಳ್ಳೈ, ಮುತಾ ಗೌತಮ್, ಅಬಕಾರಿ ಇಲಾಖೆ ಉಪ ಆಯುಕ್ತ ಕುಲದೀಪ್ ಸಿಂಗ್ ಮತ್ತು ಅಬಕಾರಿ ಇಲಾಖೆ ಸಹಾಯಕ ಆಯುಕ್ತ ನರೇಂದ್ರ ಸಿಂಗ್ ಅವರನ್ನು ಚಾರ್ಜ್ ಶೀಟ್‌ನಲ್ಲಿ ಸಿಬಿಐ ಆರೋಪಿಗಳೆಂದು ಹೆಸರಿಸಿದೆ. ಈ ಪ್ರಕರಣದಲ್ಲಿ ಸಿಬಿಐ 10,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಿಬಿಐ ಈ ಚಾರ್ಜ್ ಶೀಟ್ ಸಲ್ಲಿಸಿದೆ. ಇದೇ ನ್ಯಾಯಾಲಯದಲ್ಲಿ ಈಗಾಗಲೇ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಟ್ಟು 7 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಈ ಪೈಕಿ 3 ಮಂದಿ ಸರ್ಕಾರಿ ಅಧಿಕಾರಿಗಳಿದ್ದಾರೆ ಎಂದು ಸಿಬಿಐ ಮಾಹಿತಿ ನೀಡಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಚಾರ್ಜ್ ಶೀಟ್‌ನಲ್ಲಿ ಸಿಸೋಡಿಯಾ ಹೆಸರಿಲ್ಲದಿರುವ ಕುರಿತು ಮಾತನಾಡಿದ ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್, ಇದು ದೆಹಲಿ ಜನತೆಯ ಗೆಲುವು ಎಂದು ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸತ್ಯಮೇವ ಜಯತೇ! ಸಿಬಿಐ ಚಾರ್ಜ್ ಶೀಟ್ ನಲ್ಲಿ ಸಿಸೋಡಿಯಾ ಹೆಸರು ಇಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ಆರೋಪಿ ನಂಬರ್ 1 ಎಂದು ಹೆಸರಿಸಲಾದ ವ್ಯಕ್ತಿಯನ್ನು ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾಗಿಲ್ಲ. ಬಡ ಮಕ್ಕಳನ್ನು ಡಾಕ್ಟರ್-ಎಂಜಿನಿಯರ್ ಮಾಡಿದ ವ್ಯಕ್ತಿಯನ್ನು ಬಿಜೆಪಿಯವರು 6 ತಿಂಗಳ ಕಾಲ ನಿಂದಿಸಿದ್ದಾರೆ. ಇದು ದೆಹಲಿ ಜನತೆಯ ಗೆಲುವು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಗೆ ಮತ್ತೆ ವಾಪಸ್ ಆಗ್ತಾರಾ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ?

ಸಿಬಿಐಗೆ ಒಂದೇ ಒಂದು ಸಾಕ್ಷ್ಯ ಸಿಕ್ಕಿಲ್ಲ. ಇಡೀ ಪ್ರಕರಣ ನಕಲಿ ಎಂಬುದು ಸಾಬೀತಾಗಿದೆ. ಗುಜರಾತ್ ಮತ್ತು ಎಂಸಿಡಿ ಚುನಾವಣೆಗಳಲ್ಲಿ ಎಎಪಿ ಮಾನಹಾನಿ ಮಾಡಲು ಬಿಜೆಪಿ ದಿನವಿಡೀ ಸುಳ್ಳು ಸುದ್ದಿಗೋಷ್ಠಿಗಳನ್ನು ನಡೆಸುತ್ತಿತ್ತು. ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ನವೆಂಬರ್ 17, 2021 ರಂದು ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತು, ಆದರೆ ಭ್ರಷ್ಟಾಚಾರದ ಆರೋಪಗಳ ನಡುವೆ ಸೆಪ್ಟೆಂಬರ್ 2022 ರ ಕೊನೆಯಲ್ಲಿ ಅದನ್ನು ರದ್ದುಗೊಳಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News