Shraddha Murder Case: ಶ್ರದ್ಧಾ ಹತ್ಯೆಯ ನಂತರ ಅಫ್ತಾಬ್ ಮನೆಗೆ ಬಂದಿದ್ದ ಹುಡುಗಿ ಯಾರು? ತನಿಖೆಯಲ್ಲಿ ಬಹಿರಂಗ

Delhi Police on Shraddha Murder Case: ಈ ಮಧ್ಯೆ ಅಫ್ತಾಬ್‌ನ ನಾರ್ಕೋ ಪರೀಕ್ಷೆಯನ್ನು ಸೋಮವಾರ ಮಾಡುವ ಸಾಧ್ಯತೆಯಿದೆ. ಇದು ಸುಮಾರು 3 ಗಂಟೆಗಳ ಕಾಲ ನಡೆಯಲಿದೆ ಎಂಬ ಸುದ್ದಿಯೂ ಇದೆ. ಈಗಾಗಲೇ ನಡೆದ ಪಾಲಿಗ್ರಫಿ ಪರೀಕ್ಷೆಯಲ್ಲಿ ಅಫ್ತಾಬ್ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Written by - Bhavishya Shetty | Last Updated : Nov 26, 2022, 07:31 AM IST
    • ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪಾಲಿಗ್ರಫಿ ಪರೀಕ್ಷೆ ಪೂರ್ಣ
    • ಅಫ್ತಾಬ್ ನನ್ನು ಶನಿವಾರವೂ ವಿಚಾರಣೆಗೆ ಕರೆಯುವ ಸಾಧ್ಯತೆ
    • ಹತ್ಯೆಯ ಬಳಿಕ ಅಫ್ತಾಬ್ ತನ್ನ ಮನೆಗೆ ಕರೆಸಿಕೊಂಡಿದ್ದ ಯುವತಿಯ ಬಗ್ಗೆ ಮಾಹಿತಿ ಬಹಿರಂಗ
Shraddha Murder Case: ಶ್ರದ್ಧಾ ಹತ್ಯೆಯ ನಂತರ ಅಫ್ತಾಬ್ ಮನೆಗೆ ಬಂದಿದ್ದ ಹುಡುಗಿ ಯಾರು? ತನಿಖೆಯಲ್ಲಿ ಬಹಿರಂಗ title=
shraddha murder

Delhi Police on Shraddha Murder Case: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ಪಾಲಿಗ್ರಫಿ ಪರೀಕ್ಷೆ ಪೂರ್ಣಗೊಂಡಿದೆ. ಈಗ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡ ಇದನ್ನು ಪರಿಶೀಲಿಸಲಿದೆ. ಅಗತ್ಯವಿದ್ದರೆ, ಅಫ್ತಾಬ್ ನನ್ನು ಶನಿವಾರವೂ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಹುಡುಗನನ್ನು ಕೊಂದು ರಕ್ತ ಕುಡಿದಿದ್ದಕ್ಕಾಗಿ ಉತ್ತರ ಪ್ರದೇಶದ ಮಹಿಳೆಗೆ ಜೀವಾವಧಿ ಶಿಕ್ಷೆ

ಈ ಮಧ್ಯೆ ಅಫ್ತಾಬ್‌ನ ನಾರ್ಕೋ ಪರೀಕ್ಷೆಯನ್ನು ಸೋಮವಾರ ಮಾಡುವ ಸಾಧ್ಯತೆಯಿದೆ. ಇದು ಸುಮಾರು 3 ಗಂಟೆಗಳ ಕಾಲ ನಡೆಯಲಿದೆ ಎಂಬ ಸುದ್ದಿಯೂ ಇದೆ. ಈಗಾಗಲೇ ನಡೆದ ಪಾಲಿಗ್ರಫಿ ಪರೀಕ್ಷೆಯಲ್ಲಿ ಅಫ್ತಾಬ್ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಈ ಸಂದರ್ಭದಲ್ಲಿ ಶ್ರದ್ಧಾ ವಾಕರ್ ಹತ್ಯೆಯ ನಂತರ ಅವನು ರೂಮ್ ಗೆ ಬಂದಿದ್ದ ಆ ಹುಡುಗಿ ಯಾರೂ ಎಂಬುದನ್ನೂ ಸಹ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಶ್ರದ್ಧಾಳನ್ನು ಕೊಂದ ನಂತರ ಆರೋಪಿ ಅಫ್ತಾಬ್ ಯಾರನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಎಂಬುದರ ಬಗ್ಗೆ ಪೊಲೀಸರು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಹುಡುಗಿ ವೃತ್ತಿಯಲ್ಲಿ ವೈದ್ಯೆ ಎಂದು ಖಚಿತವಾಗಿ ಹೇಳಲಾಗುತ್ತಿದೆ. ಯುವತಿಯೊಂದಿಗೆ ಅಫ್ತಾಬ್‌ನ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನೆಗೆ ಬಂದ ಹುಡುಗಿ ವೃತ್ತಿಯಲ್ಲಿ ವೈದ್ಯೆ!

ಆರೋಪಿ ಅಫ್ತಾಬ್ ಡೇಟಿಂಗ್ ಆಪ್ ಬಂಬಲ್ ಅನ್ನು ಬಳಸುತ್ತಿದ್ದ. ಡೇಟಿಂಗ್ ಆ್ಯಪ್ ಸಂಪರ್ಕಕ್ಕೆ ಬಂದ ಹುಡುಗಿಯನ್ನು ಮನೆಗೆ ಕರೆಸಿಕೊಂಡಿದ್ದ. ಸದ್ಯ ಪೊಲೀಸರು ಯುವತಿಯನ್ನು ಗುರುತಿಸಿದ್ದಾರೆ. ಆಕೆ ವೈದ್ಯೆ. ಶ್ರದ್ಧಾಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಬಳಿಕ ಅಫ್ತಾಬ್ ಅದನ್ನು ಫ್ರಿಡ್ಜ್‌ನಲ್ಲಿ ಇರಿಸಿದ್ದಾನೆ. ಬಳಿಕ ಈ ಹುಡುಗಿಗೆ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಗುರುವಾರ ನಡೆದ ಪಾಲಿಗ್ರಾಫಿ ಪರೀಕ್ಷೆಯಲ್ಲಿ ಅಫ್ತಾಬ್‌ನನ್ನು 8 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಆದರೆ, ಅಫ್ತಾಬ್ ಜ್ವರದಿಂದ ಬಳಲುತ್ತಿದ್ದರಿಂದ ಕಾರಣ ಹೇಳಿಕೆ ದಾಖಲಿಸಿಕೊಳ್ಳಲು ಅಧಿಕಾರಿಗಳಿಗೆ ಕೊಂಚ ತೊಂದರೆ ಎದುರಾಗಿತ್ತು.

ಇದನ್ನೂ ಓದಿ: Excise Policy Scam : ಲಿಕ್ಕರ್ ಪಾಲಿಸಿ ಹಗರಣದ 10,000 ಪುಟಗಳ ಚಾರ್ಜ್ ಶೀಟ್ : ಆದ್ರೆ, ಸಿಸೋಡಿಯಾ ಹೆಸರಿಲ್ಲ!

ಆರು ತಿಂಗಳ ಹಿಂದೆ ತನ್ನ ಗೆಳತಿಯನ್ನು ಕೊಂದ ಅಫ್ತಾಬ್ ಗೆ ಪಾಲಿಗ್ರಫಿ ಪರೀಕ್ಷೆಯಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಶ್ರದ್ಧಾಳನ್ನು ಕೊಲೆ ಮಾಡಿದ ಕಾರಣವೇನು? ಕೊಲೆಗೆ ಮೊದಲೇ ಯೋಜನೆ ರೂಪಿಸಿದ್ದಾನಾ ಅಥವಾ ಕೋಪದಿಂದ ಮಾಡಿದ್ದಾನಾ? ಎಂಬೆಲ್ಲಾ ಪ್ರಶ್ನೆಗಳನ್ನು ಅಫ್ತಾಬ್ ಗೆ ಕೇಳಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News