ನವದೆಹಲಿ: ಇಡೀ ದೇಶದಲ್ಲಿ ಕರೋನಾವೈರಸ್ ಹಾವಳಿ ಹೆಚ್ಚಾಗಿದೆ. ಏತನ್ಮಧ್ಯೆ ದೆಹಲಿ ಸರ್ಕಾರ ಪಡಿತರವನ್ನು ಹೋಂ ಡೆಲಿವರಿ ನೀಡಲು ಮನೆ-ಮನೆಗೆ ಪಡಿತರ (Ration) ಎಂಬ ಯೋಜನೆಗೆ ಅನುಮೋದನೆ ನೀಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರು. 


COMMERCIAL BREAK
SCROLL TO CONTINUE READING

ಈ ಯೋಜನೆಯ ಅನುಷ್ಠಾನದೊಂದಿಗೆ ಜನರು ಇನ್ನು ಮುಂದೆ ಪಡಿತರ ಅಂಗಡಿಗೆ ಬರಬೇಕಾಗಿಲ್ಲ. ಸರ್ಕಾರ ಬಡ ಜನರ ಅವರ ಮನೆ ಬಾಗಿಲಿಗೇ ಪಡಿತರವನ್ನು ತಲುಪಿಸುವ ಕೆಲಸ ಮಾಡಲಿದೆ. ಗಮನಾರ್ಹವಾಗಿ ದೆಹಲಿಯಲ್ಲಿ ಪ್ರತಿ ತಿಂಗಳು ಸುಮಾರು 72 ಲಕ್ಷ ಜನರಿಗೆ ಪಡಿತರ ಲಾಭ ಸಿಗುತ್ತದೆ.


ಯೋಜನೆ ಅನುಷ್ಠಾನಗೊಳಿಸಿದ ನಂತರ ಜನರ ಮನೆಗೆ ಪಡಿತರ ಕಳುಹಿಸಲಾಗುವುದು, ಅವರು ಪಡಿತರ ಅಂಗಡಿಗೆ ಬರಬೇಕಾಗಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಿದ ಕೇಜ್ರಿವಾಲ್ ಬಡವರಿಗೆ ಗೌರವದಿಂದ ಅವರ ಮನೆ ಬಾಗಿಲಿಗೆ ಪಡಿತರ ತಲುಪಿಸಬೇಕು ಎಂಬುದು ಬಹಳ ವರ್ಷಗಳ ಕನಸು. ಇದೀಗ ಆ ಕನಸು ಈಡೇರುತ್ತಿದೆ. ದೆಹಲಿ ಸರ್ಕಾರದ 'ಮುಖಮಂತ್ರಿ ಘರ್-ಘರ್ ರೇಷನ್' ಯೋಜನೆ ಪ್ರಾರಂಭವಾಗುವ ದಿನ, ಅದೇ ದಿನ ಕೇಂದ್ರ ಸರ್ಕಾರದ ಒನ್ ನೇಷನ್, ಒನ್ ರೇಷನ್ ಕಾರ್ಡ್ (One Nation One Ration Card) ಯೋಜನೆ ದೆಹಲಿಯಲ್ಲಿ ಜಾರಿಗೆ ಬರಲಿದೆ ಎಂದು ಕೇಜ್ರಿವಾಲ್ ತಿಳಿಸಿದರು.
 
ದೆಹಲಿಯವರಿಗೆ ಪಡಿತರ ಅಂಗಡಿಗೆ ಹೋಗಬೇಕೆ ಅಥವಾ ಮನೆ ಪಡಿತರ ತೆಗೆದುಕೊಳ್ಳಬೇಕೆ ಎಂಬ ಆಯ್ಕೆಯನ್ನು ನೀಡಲಾಗುವುದು. ಹೋಮ್ ಡೆಲಿವರಿ ಅಡಿಯಲ್ಲಿ ಗೋಧಿ ಬದಲಿಗೆ ಗೋಧಿ ಹಿಟ್ಟನ್ನು ನೀಡಲಾಗುವುದು. ಈ ಯೋಜನೆ 6-7 ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.