Jharkhand Crime: ಹೃದಯ ವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಸಾಹಿಬ್‌ಗಂಜ್‌ನಿಂದ ಬೆಳಕಿಗೆ ಬಂದಿದೆ. ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣದಂತಹ ಮತ್ತೊಂದು ಘಟನೆ ಸಾಹಿಬ್‌ಗಂಜ್‌ನಲ್ಲಿ ನಡೆದಿದೆ. ದಿಲ್ದಾರ್ ಅನ್ಸಾರಿ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಕೊಂದಿದ್ದಾನೆ.


COMMERCIAL BREAK
SCROLL TO CONTINUE READING

ದಿಲ್ದಾರ್ ಅನ್ಸಾರಿ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿ ನಂತರ ಮೃತದೇಹವನ್ನು 12 ತುಂಡುಗಳಾಗಿ ಕತ್ತರಿಸಿ ಎಸೆದಿದ್ದಾನೆ. ಆರೋಪಿ ಪತಿ ದಿಲ್ದಾರ್ ಅನ್ಸಾರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಿಲ್ದಾರ್ ಅನ್ಸಾರಿಗೆ ಈಕೆ ಎರಡನೇ ಪತ್ನಿಯಾಗಿದ್ದಾಳೆ.


ಇದನ್ನೂ ಓದಿ: ನಾಯಿಯ ಮೇಲೆ ಅತ್ಯಾಚಾರ ಎಸಗಿದ ಕಾಮಾಂಧ : ವಿಡಿಯೋ ವೈರಲ್‌..!


10-15 ದಿನಗಳ ಹಿಂದೆ ನಡೆದಿದ್ದ ಮದುವೆ:


ಪೊಲೀಸರ ಪ್ರಕಾರ ಮೃತ ಮಹಿಳೆಯ ಹೆಸರು ರಬಿತಾ ಪಹಾಡಿನ್. ಈಕೆ ಬುಡಕಟ್ಟು ಸಮುದಾಯದಿಂದ ಬಂದವಳು. ದಿಲ್ದಾರ್ ಅನ್ಸಾರಿ  10-15 ದಿನಗಳ ಹಿಂದೆ ರಬಿತಾಳನ್ನು ವಿವಾಹವಾಗಿದ್ದ. ಹಲವು ವರ್ಷಗಳಿಂದ ಆರೋಪಿ ದಿಲ್ದಾರ್ ಅನ್ಸಾರಿ ಹಾಗೂ ರಬಿತಾ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಶುಕ್ರವಾರ ರಾತ್ರಿ ಆರೋಪಿ ಈ ಭೀಕರ ಕೊಲೆ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.


ಶನಿವಾರ ಸಂಜೆ ಬೋರಿಯೊ ಸಂತಾಲಿ ಪ್ರದೇಶದ ಅಂಗನವಾಡಿ ಕೇಂದ್ರದ ನಿರ್ಮಾಣ ಹಂತದ ಕಟ್ಟಡದ ಹಿಂಭಾಗದಲ್ಲಿ ಮನುಷ್ಯ ದೇಹದ ಕಾಲಿನ ತುಂಡು ಪತ್ತೆಯಾಗಿದೆ. ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು ತನಿಖೆ ಆರಂಭಿಸಿದ್ದಾರೆ. ಈ ಬಳಿಕ ಅನೇಕ ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿ ತನಿಖೆ ಮುಂದುವರೆಸಿದ್ದರು. ನಂತರ ಆರೋಪಿ ಮೊಹಮ್ಮದ್ ಅವರ ತಾಯಿಯ ಚಿಕ್ಕಪ್ಪ, ಮೊಯಿನುಲ್ ಅನ್ಸಾರಿ ಅವರ ಮನೆಯಿಂದ ಕೊಲೆಗೆ ಬಳಸಿದ ಎರಡು ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಮೊಯಿನುಲ್ ಅನ್ಸಾರಿ ಸ್ಥಳದಿಂದ ತಲೆಮರೆಸಿಕೊಂಡಿದ್ದಾನೆ.


ಇದನ್ನೂ ಓದಿ: Viral Video: ಪತ್ನಿಯ ಎದುರೆ ಆಕೆಯ ಸಹೋದರಿಗೆ 5 'ಪಪ್ಪಿ' ಕೊಡು ಎಂದ ಪತಿ, ನಾಚಿ ನೀರಾಗಿದ್ದು ಯಾರು ಗೊತ್ತಾ?


ಬುಡಕಟ್ಟು ಸಮುದಾಯಕ್ಕೆ ಸೇರಿದ 22 ವರ್ಷದ ಮಹಿಳೆಯ ದೇಹದ 12 ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಾಹಿಬ್‌ಗಂಜ್‌ನ ಎಸ್‌ಪಿ ತಿಳಿಸಿದ್ದಾರೆ. ದೇಹದ ಕೆಲವು ಭಾಗಗಳು ಇನ್ನೂ ಪತ್ತೆಯಾಗಿಲ್ಲ. ಅವುಗಳಿಗಾಗಿ ಹುಡುಕಾಟ ಮುಂದುವರಿದಿದೆ. ಮೃತ ಮಹಿಳೆಯ ಪತಿ ದಿಲ್ದಾರ್ ಅನ್ಸಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಮಹಿಳೆ ಆತನ ಎರಡನೇ ಪತ್ನಿ ಎಂದು ಹೇಳಲಾಗುತ್ತಿದೆ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.