Viral Video: ಪತ್ನಿಯ ಎದುರೆ ಆಕೆಯ ಸಹೋದರಿಗೆ 5 'ಪಪ್ಪಿ' ಕೊಡು ಎಂದ ಪತಿ, ನಾಚಿ ನೀರಾಗಿದ್ದು ಯಾರು ಗೊತ್ತಾ?

Trending Video: ವರ ಮೊದಲು ವಧುವಿನ ಸಹೋದರಿಗೆ 5 ಕಿಸ್ ಗಳ ಡಿಮಾಂಡ್ ಮಾಡುತ್ತಾನೆ. ವರ ಈ ರೀತಿ ಬೇಡಿಕೆ ಇಡುವಾಗ ವಧು ಕೂಡ ಆತನ ಪಕ್ಕದಲ್ಲಿಯೇ ಕುಳಿತಿದ್ದಾಳೆ. ಆದರೆ, ವಧುವಿನ ತಾಯಿ ನೀಡಿರುವ ರಿಯಾಕ್ಷನ್ ಗೆ ನೆರದವರೆಲ್ಲರೂ ಶಾಕ್ ಆಗಿದ್ದಾರೆ.  

Written by - Nitin Tabib | Last Updated : Dec 17, 2022, 06:23 PM IST
  • ವರ ಬಹಿರಂಗವಾಗಿಯೇ ತನ್ನ ಪತ್ನಿಯ ಸಹೋದರಿಗೆ 5 ಮುತ್ತುಗಳನ್ನು ಕೇಳುವ ವೀಡಿಯೊ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
  • ಆದ್ರೆ, ಇದರಲ್ಲಿ ಆಶ್ಚರ್ಯಕರ ಸಂಗತಿ ಏನೆಂದರೆ ವರ ತನ್ನ ಪತ್ನಿಯ ಎದುರೆ ಆಕೆಯ ಸಹೋದರಿಗೆ
  • 5 ಕಿಸ್ ಗಳ ಬೇಡಿಕೆ ಇಡುವಾಗ, ವಧು ಕೂಡ ಆತನ ಪಕ್ಕದಲ್ಲಿ ಕುಳಿತಿದ್ದಾಳೆ.
Viral Video: ಪತ್ನಿಯ ಎದುರೆ ಆಕೆಯ ಸಹೋದರಿಗೆ 5 'ಪಪ್ಪಿ' ಕೊಡು ಎಂದ ಪತಿ, ನಾಚಿ ನೀರಾಗಿದ್ದು ಯಾರು ಗೊತ್ತಾ? title=
Trending Video

Viral Video: ಪ್ರಸ್ತುತ ಭಾರತದಲ್ಲಿ ಮದುವೆಯ ಸೀಜನ್ ಮುಂದುವರೆದಿದೆ.  ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಮದುವೆಗೆ ಸಂಬಂಧಿಸಿದ ಹೊಸ ಹೊಸ ವೀಡಿಯೋಗಳು ಅಪ್‌ಲೋಡ್ ಆಗುತ್ತಿವೆ.  ವಧು-ವರರಿಗೆ ಸಂಬಂಧಿಸಿದ ವೀಡಿಯೋಗಳು ಜನರಿಗೆ ಇಷ್ಟವಾದರೂ ಕೂಡ, ವರ ಹಾಗೂ ವಧುವಿನ ಸಹೋದರಿಗೆ ಸಂಬಂಧಿಸಿದ ವಿಡಿಯೋಗಳೂ ಸಹ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಇಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡತೊಡಗಿದೆ. 

ಇದನ್ನೂ ಓದಿ -Viral Video: ನಾಯಿಗಳಿಂದ ಮಗುವಿನ ಪ್ರಾಣ ರಕ್ಷಿಸುತ್ತಿರುವ ತಾಯಿ ಕೋತಿ, ವಿಡಿಯೋ ತಯಾರಕನ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

ಸಾರ್ವಜನಿಕವಾಗಿ ವಧುವಿನ ಸಹೋದರಿಗೆ 5 ಮುತ್ತು ಕೊಡು ಎಂದ ಪತಿ
ವರ ಬಹಿರಂಗವಾಗಿಯೇ ತನ್ನ ಪತ್ನಿಯ ಸಹೋದರಿಗೆ 5 ಮುತ್ತುಗಳನ್ನು ಕೇಳುವ ವೀಡಿಯೊ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಆದ್ರೆ, ಇದರಲ್ಲಿ ಆಶ್ಚರ್ಯಕರ ಸಂಗತಿ ಏನೆಂದರೆ ವರ ತನ್ನ ಪತ್ನಿಯ ಎದುರೆ ಆಕೆಯ ಸಹೋದರಿಗೆ 5  ಕಿಸ್ ಗಳ  ಬೇಡಿಕೆ ಇಡುವಾಗ, ವಧು ಕೂಡ ಆತನ ಪಕ್ಕದಲ್ಲಿ ಕುಳಿತಿದ್ದಾಳೆ. ವರನ ಈ ಬೇಡಿಕೆ ಕೇಳಿ ವಧು ಮೊದಲು ಶಾಕ್ ಆಗುತ್ತಾಳೆ, ಆದರೆ ನಂತರ ಅವಳು ಕೂಡ ವರನೊಂದಿಗೆ ನಗಲು ಶುರು ಮಾಡುತ್ತಾಳೆ. ಇವೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ರಿಯಾಕ್ಷನ್ ವರನ ಅತ್ತೆ ನೀಡಿದ್ದಾಳೆ. ಯಾವುದಕ್ಕೂ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಲೇಬೇಕು...

ಇದನ್ನೂ ಓದಿ-Viral News: ಎರಡು ವರ್ಷದ ಮಗುವನ್ನು ಜೀವಂತ ನುಂಗಿ ಹಾಕಿದ ಹಿಪ್ಪೋ... ಆದರೂ....?

ಇನ್ನೊಂದೆಡೆ ತನ್ನ ಅಳಿಯ ವಿವಾಹ ಮಾಡಿಕೊಂಡ ಮೊದಲ ಮಗಳ ಮುಂದೆಯೇ ಎರಡನೇ ಮಗಳಿಗೆ ಕಿಸ್ ಕೊಡುವಂತೆ ಬೇಡಿಕೆ ಇಡುವುದನ್ನು ಕೇಳಿ ವಧುವಿನ ತಾಯಿ ನಾಚಿ ಕೆಂಪಾಗಿದ್ದಾಳೆ. ವರನ ಈ ವಿಚಿತ್ರ ಬೇಡಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮದುವೆಯ ಮಂಟಪದಲ್ಲಿ ನಡೆದ 'ಚಂದ್ ಪಕಾಯಿಯಾ..' ಸಮಾರಂಭದ ವೇಳೆ ವರನು ಈ ಆಶ್ಚರ್ಯಕರ ಬೇಡಿಕೆಯನ್ನು ಇಟ್ಟಿದ್ದಾನೆ ಎಂಬುದು ಇಲ್ಲಿ ಉಲ್ಲೇಖನೀಯ. ವರನ ಅತ್ತೆ 'ಚಂದ್' (ಒಂದು ರೀತಿಯ ಒಗಟು) ಹೇಳುವಂತೆ ವರನಿಗೆ ಒತ್ತಾಯಿಸಿದಾಗ, ವರ ಚಂದ್ ಹೇಳುವುದನ್ನು ನೀವು ಕೇಳಬಹುದು, 'ಚಂದ್ ಪಕಾಯಿಯಾ.. ಚಂದ್ ಪಕಾಯಿಯಾ... ಚಂದ್ ಕೆ ಉಪರ್ ತಾಲಿ.. ಅಗಲಾ ಚಂದ್ ತಭಿ ಸುನಾವುಂಗಾ, ಜಬ್ ಪಾಂಚ್ ಪಪ್ಪಿ ದೆಗಿ ಸಾಲಿ' ಎಂದು ಚಂದ್ ಹೇಳುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ವರ ತನ್ನ ಚಂದ್ ಹೇಳಿ ಮುಗಿಸಿದ ಬಳಿಕ ಅಲ್ಲಿ ನೆರೆದ  ಜನರೆಲ್ಲರೂ ಮೊದಲು ಅವಾಕ್ಕಾಗುತ್ತಾರೆ ಮತ್ತು ನಂತರ ನಗೆಗಡಲಲ್ಲಿ ತೇಲುತ್ತಾರೆ. jayan_shu2021 ಹೆಸರಿನ Instagram ಖಾತೆಯ ಮೂಲಕ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News