ಹೈದರಾಬಾದ್ : ನಗರದ ಐಸಿಎಫ್‌ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ (ಐಎಫ್‌ಎಚ್‌ಇ)ನ ವಿದ್ಯಾರ್ಥಿಯೊಬ್ಬನಿಗೆ ಇನ್ಸ್ಟಿಟ್ಯೂಟ್‌ನ ಇತರ ವಿದ್ಯಾರ್ಥಿಗಳೇ ಥಳಿಸಿರುವ ಘಟನೆ ನಡೆದಿದೆ. 'ಅಲ್ಲಾಹು ಅಕ್ಬರ್', 'ಜೈ ಮಾತಾ ದಿ' ಎಂಬ ಘೋಷಣೆಗಳನ್ನು ಕೂಗುವಂತೆ ವಿದ್ಯಾರ್ಥಿಗೆ ಬಲವಂತಪಡಿಸಿರುವ ಆಘಾತಕಾರಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ನವೆಂಬರ್ 1 ರಂದು, ICFAI ಬಿಸಿನೆಸ್ ಸ್ಕೂಲ್‌ನ ಕೆಲವು ವಿದ್ಯಾರ್ಥಿಗಳು ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳಿಗಾಗಿ ಕ್ಯಾಂಪಸ್ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ಯುವಕನಿಗೆ 'ಜೈ ಮಾತಾ ದಿ' ಮತ್ತು 'ಅಲ್ಲಾ ಹು ಅಕ್ಬರ್' ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದಾರೆ. ರ‍್ಯಾಗಿಂಗ್ ನಿಷೇಧ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಶಂಕರಪಲ್ಲಿ ಎಎನ್‌ಐಗೆ ತಿಳಿಸಿದ್ದಾರೆ.


ಇದನ್ನೂ ಓದಿ: ವಿಶ್ವಕಪ್ ಫೈನಲ್ ಪಂದ್ಯಕ್ಕೆ ವರುಣನ ಭೀತಿ: ಮಳೆ ಬಂದರೆ ಪ್ರಶಸ್ತಿ ಗೆಲ್ಲೋರ್ಯಾರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.