T20 World Cup Final Melbourne weather update: ಇಂದು T20 ವಿಶ್ವಕಪ್ 2022 ರ ಫೈನಲ್ ಪಂದ್ಯ ಮೆಲ್ಬರ್ನ್ ಲ್ಲಿ ನಡೆಯಲಿದ್ದು, ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮಳೆರಾಯನ ವಕ್ರದೃಷ್ಟಿ ಬೀಳುವ ಸಾಧ್ಯತೆ ಹೆಚ್ಚಿದ್ದು, ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದೆ ಎಂಬ ಕುತೂಹಲ ಮನೆ ಮಾಡಿದೆ.
ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ ಪ್ರಕಾರ, ಮೆಲ್ಬೋರ್ನ್ ಹವಾಮಾನ ಮುನ್ಸೂಚನೆಯು ಮುಂದಿನ ಎರಡು ದಿನಗಳವರೆಗೆ ಭರವಸೆ ನೀಡುವುದಿಲ್ಲ. ಅಂತಿಮ ದಿನವಾದ ನವೆಂಬರ್ 13 ರಂದು 100 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ, ಹವಾಮಾನ ವಿದ್ಯಮಾನದ ಪ್ರಕಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) 8 ರಿಂದ 20 ಮಿಮೀ ಮಳೆಯಾಗುವ ಸಾಧ್ಯತೆಯಿದ್ದು, ಫೈನಲ್ ರದ್ದಾಗುವ ಅಪಾಯವಿದೆ.
ಇದನ್ನೂ ಓದಿ: “IPL ಬಂದಾಗಿನಿಂದ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ”: ಪಾಕ್ ಮಾಜಿ ವೇಗಿಯ ಈ ಮಾತು ನಿಜವೇ?
“ಮೋಡ, ಅತಿ ಹೆಚ್ಚು (100% ಹತ್ತಿರ) ಮಳೆಯ ಸಾಧ್ಯತೆ, ಗುಡುಗು ಸಹಿತ ಮಳೆಯ ಸಾಧ್ಯತೆ, ಬಹುಶಃ ತೀವ್ರವಾಗಿರುತ್ತದೆ. ಪೂರ್ವದಿಂದ ಈಶಾನ್ಯಕ್ಕೆ ಗಂಟೆಗೆ 15 ರಿಂದ 20 ಕಿಮೀ ವೇಗದಲ್ಲಿ ಗಾಳಿ ಮತ್ತು ಉತ್ತರಕ್ಕೆ ಗಂಟೆಗೆ 25 ರಿಂದ 35 ಕಿಮೀ ಗಾಳಿ ಬೀಸುವ ಲಕ್ಷಣವಿದೆ. ಸಂಜೆ ಗಂಟೆಗೆ 15 ರಿಂದ 20 ಕಿಮೀ ವೇಗಕ್ಕೆ ಗಾಳಿ ಕಡಿಮೆಯಾಗುತ್ತದೆ” ಎಂದು ಹವಾಮಾನ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ.
ಫೈನಲ್‌ಗೆ ನವೆಂಬರ್ 14 ರಂದು ಮೀಸಲು ದಿನವನ್ನು ನಿಗದಿಪಡಿಸಲಾಗಿದ್ದರೂ, ಸೋಮವಾರದ ಮುನ್ಸೂಚನೆಯು ಉತ್ತೇಜನಕಾರಿಯಾಗಿಲ್ಲ. ನವೆಂಬರ್ 14 ರಂದು ಶೇಕಡ 95 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತೋರಿಸುತ್ತದೆ.
ಮಳೆ ಬಂದರೆ T20 ವಿಶ್ವಕಪ್ 2022 ವಿಜೇತರು ಯಾರು?:
ಒಂದು ವೇಳೆ ಮೀಸಲು ದಿನವೂ ವಾಶ್ ಔಟ್ ಆಗಿದ್ದರೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಎರಡೂ ತಂಡಗಳು ಟ್ರೋಫಿಯನ್ನು ಹಂಚಿಕೊಳ್ಳಲಿವೆ, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿಲ್ಲ.
ಇದನ್ನೂ ಓದಿ: ಭಾರತದ ಈ ಬ್ಯಾಟ್ಸ್ಮನ್ ನ್ನು 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಎಂದ ಬಟ್ಲರ್..!
ತಂಡಗಳು
ಪಾಕಿಸ್ತಾನ ತಂಡ: ಬಾಬರ್ ಅಜಮ್ (ಕ್ಯಾ), ಶಾದಾಬ್ ಖಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಶ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಮಫ್ರಿ ಅಫ್ರಿ ಅಫ್ರಿ ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ಕ್ಯಾ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕುರಾನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಅಲೆಕ್ಸ್ ಹೇಲ್ಸ್, ಟೈಮಲ್ ಮಿಲ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.