ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (UPSC) ಪ್ರತಿವರ್ಷ ನಡೆಸುವ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ (UPSC Civil Services Exam)ಯಲ್ಲಿ ಉತ್ತೀರ್ಣರಾಗುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ ಕೆಲವರು ಮಾತ್ರ ಅದರಲ್ಲಿ ಯಶಸ್ವಿಯಾಗುತ್ತಾರೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಲಕ್ಷಾಂತರ ಜನರ ಪೈಕಿ ಕೇವಲ ಶೇ.0.2ರಷ್ಟು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಾರೆ. 22ನೇ ವಯಸ್ಸಿನಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಐಎಎಸ್ ಅಧಿಕಾರಿ ಸ್ವಾತಿ ಮೀನಾ ಅವರ ಸಾಧನೆ(Swati Meena Success Story) ಬಗ್ಗೆ ಪ್ರತಿಯೊಬ್ಬ ಸ್ಪರ್ಧಾಕಾಂಕ್ಷಿ ತಿಳಿದುಕೊಳ್ಳಲೇಬೇಕು.  


COMMERCIAL BREAK
SCROLL TO CONTINUE READING

ಮಗಳು ವೈದ್ಯೆಯಾಗಬೇಕೆಂದು ತಾಯಿ ಬಯಸಿದ್ದರು


ರಾಜಸ್ಥಾನದಲ್ಲಿ ಜನಿಸಿದ ಸ್ವಾತಿ ಮೀನಾ(Swati Meena) ಅಜ್ಮೇರ್‌ದಲ್ಲಿ ತಮ್ಮ ಅಧ್ಯಯನ ನಡೆಸಿದರು. ಸ್ವಾತಿಯವರ ತಾಯಿ ಯಾವಾಗಲೂ ಮಗಳು ಡಾಕ್ಟರ್ ಆಗಬೇಕೆಂದು ಬಯಸುತ್ತಿದ್ದರು. ಸ್ವಾತಿ ಅವರು ವೈದ್ಯೆಯಾಗಲು ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. 8ನೇ ತರಗತಿಯಲ್ಲಿ ಓದುತ್ತಿದ್ದ ವೇಳೆ ಅವರ ತಾಯಿಯ ಸೋದರಸಂಬಂಧಿಯೊಬ್ಬರು ಐಎಎಸ್ ಅಧಿಕಾರಿಯಾಗಿದ್ದರು. ಅಲ್ಲಿಂದ ಸ್ವಾತಿಯವರ ಜೀವನದಲ್ಲಿ ದೊಡ್ಡ ಬದಲಾವಣೆಯಾಯಿತು.


ಇದನ್ನೂ ಓದಿ: Senior Citizensಗೆ ಮೋದಿ ಸರ್ಕಾರದ ಉಡುಗೊರೆ! ಮತ್ತೆ Job ಮಾಡ್ಬಹುದು


ಐಎಎಸ್ ಆಗುವ ನಿರ್ಧಾರ ತೆಗೆದುಕೊಂಡ ಸ್ವಾತಿ


ಸ್ವಾತಿ ಮೀನಾರ ತಂದೆ ಅಧಿಕಾರಿಯಾಗಿದ್ದ ಅವರ ಚಿಕ್ಕಮ್ಮನನ್ನು ಭೇಟಿಯಾದಾಗ ತುಂಬಾ ಸಂತೋಷಪಟ್ಟಿದ್ದರು. ತನ್ನ ತಂದೆಯ ಸಂತೋಷವನ್ನು ನೋಡಿದ ಸ್ವಾತಿ ಕೂಡ ಯುಪಿಎಸ್‌ಸಿ ಪರೀಕ್ಷೆ(UPSC Exam) ಬಗ್ಗೆ ಯೋಚಿಸಿದರು. ಈ ಬಗ್ಗೆ ತಂದೆ-ತಾಯಿಯ ಬಳಿ ತನ್ನ ಅಭಿಪ್ರಾಯವನ್ನು ತಿಳಿಸಿದರು. ನಾಗರಿಕ ಸೇವಾ ಅಧಿಕಾರಿಯಾಗಬೇಕೆಂಬ ಮಗಳ ನಿರ್ಧಾರಕ್ಕೆ ತಂದೆ ಸಂಪೂರ್ಣ ಬೆಂಬಲ ನೀಡಿದರು.


ಪೆಟ್ರೋಲ್ ಪಂಪ್ ನಡೆಸುತ್ತಿದ್ದ ತಾಯಿ


ವರದಿಗಳ ಪ್ರಕಾರ ಸ್ವಾತಿ ಮೀನಾ ಯುಪಿಎಸ್‌ಸಿ ಪರೀಕ್ಷೆ(UPSC Exam)ಗೆ ತಯಾರಿ ನಡೆಸುತ್ತಿದ್ದಾಗ ತಂದೆ ಅವರಿಗೆ ಎಲ್ಲ ರೀತಿಯ ಸಹಾಯ ಮಾಡಿದರು. ಈ ವೇಳೆ ಅವರ ತಾಯಿ ಪೆಟ್ರೋಲ್ ಪಂಪ್ ನಡೆಸುತ್ತಿದ್ದರು. ಮಗಳ ಓದಿಗೆ ಏನೂ ಕೊರತೆಯಾಗದಂತೆ ತಂದೆ-ತಾಯಿ ನೋಡಿಕೊಂಡರು. ಕಠಿಣ ಪರಿಶ್ರಮದ ನಂತರ ಸ್ವಾತಿಯವರು 2007ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 260 ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು. ಅವರು ಆ ಬ್ಯಾಚ್‌ನ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಾದ ನಂತರ ಅವರು ಮಧ್ಯಪ್ರದೇಶದಲ್ಲಿ ಸೇವೆಗೆ ನಿಯೋಜನೆಗೊಂಡರು.


ಇದನ್ನೂ ಓದಿ: ಬಿಡುಗಡೆಯಾಯ್ತು Xiaomi 11 Lite NE 5G Smartphone, ಇದರ ವೈಶಿಷ್ಟ್ಯ ಮತ್ತು ಬೆಲೆ ತಿಳಿಯಿರಿ


ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಸ್ವಾತಿ ಮೀನಾ


ಐಎಎಸ್ ಅಧಿಕಾರಿ ಸ್ವಾತಿ ಮೀನಾ ನಿರ್ಭೀತ ಮತ್ತು ಖಡಕ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದಾರೆ. ಮಧ್ಯಪ್ರದೇಶ(Madhya Pradesh)ದ ಮಾಂಡ್ಲಾದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಗಣಿಗಾರಿಕೆ ಮಾಫಿಯಾದ ವಿರುದ್ಧ ಅವರು ಕ್ರಮ ಕೈಗೊಂಡರು. ಗಣಿಗಾರಿಕೆ ಮಾಫಿಯಾದ ಹುಟ್ಟಡಗಿಸುವಲ್ಲಿ ಸ್ವಾತಿ ಯಶಸ್ವಿಯಾದರು. ಅತ್ಯಂತ ಧೈರ್ಯದಿಂದ ಆಡಳಿತ ನಡೆಸುವ ಮೂಲಕ ಅಪಾರ ಜನಮನ್ನಣೆ ಗಳಿಸಿದರು. ತಮಗೆ ಎದುರಾದ ಎಲ್ಲ ರೀತಿಯ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಅವರ ಸಾಧನೆ ಪ್ರತಿಯೊಬ್ಬ ಸ್ಪರ್ಧಾಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.