ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಈ ಬಾರಿಯ ಸಿಎ ಪರೀಕ್ಷೆಯನ್ನು ಮೇ 9, 11 ಮತ್ತು 13 ರಂದು ಗುಂಪು 2 ಪರೀಕ್ಷೆಗಳು. ಗ್ರೂಪ್ 1 ಗಾಗಿ ಸಿಎ ಅಂತಿಮ ಕೋರ್ಸ್ ಪರೀಕ್ಷೆಗಳು ಮೇ 2, 4 ಮತ್ತು 6 ರಂದು ಮತ್ತು ಗುಂಪು 2 ಪರೀಕ್ಷೆಗಳು ಮೇ 8, 10 ಮತ್ತು 12 ರಂದು ನಡೆಯಲಿವೆ ಎಂದು ತಿಳಿಸಿತ್ತು. 


COMMERCIAL BREAK
SCROLL TO CONTINUE READING

ಆದರೆ ಇದೀಗ ಚುನಾವಣಾ ಆಯೋಗವು  18 ನೇ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ ಹಿನ್ನ್ನೆಲೆ ಲೋಕಸಭೆ ಚುನಾವಣೆಯು 19 ಏಪ್ರಿಲ್ 2024 ರಿಂದ ಪ್ರಾರಂಭವಾಗಿ ಹಲವು ದಿನಗಳ ಕಾಲ ನಡೆಯಲಿದ್ದು ಮೇ ತಿಂಗಳಿನಲ್ಲೂ ಈ ಸಂಬಂಧಿತ ಕೆಲಸಗಳು ನಡೆಯುತ್ತಲೇ ಇರುತ್ತದೆ. ಹಾಗಾಗಿ  ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) CA ಮೇ 2024 ರ ಪರೀಕ್ಷೆಯ ದಿನಾಂಕಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ. 


ಇದನ್ನು ಓದಿ : Deepika Padukone: ಬಾಣಂತನಕ್ಕಾಗಿ ತವರೂರಿಗೆ ಬರುತ್ತಿದ್ದಾರೆ ಬಾಲಿವುಡ್‌ ಬೆಡಗಿ ದೀಪಿಕಾ!


ಏಪ್ರಿಲ್ 19 ರಂದು ಪ್ರಾರಂಭವಾಗುವ 18 ನೇ ಲೋಕಸಭೆಯ ಈ ವರ್ಷದ ಸಾರ್ವತ್ರಿಕ ಚುನಾವಣಾ ದಿನಾಂಕಗಳ ಘೋಷಣೆಯ ನಂತರ ಪರೀಕ್ಷಾ ದಿನಾಂಕಗಳನ್ನು ಬದಲಿಸಲಾಗಿದೆ. ನೀವೂ ಈ ಬಾರಿ ಪರೀಕ್ಷೆ ಸಿದ್ಧತೆ ನಡೆಸುತ್ತಿದ್ದರೆ ನಾವು ನೀಡಿರುವ ಮಾಹಿತಿಯನ್ನು ಗಮನಿಸಿ ಎಂದು ತಿಳಿಸಿದೆ. 


ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರವಾದ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ICAI ತಿಳಿಸಿತ್ತು. ಇಂದು ( ಮಾರ್ಚ್ 19) icai.org ನಲ್ಲಿ ಪರೀಕ್ಷಾ ದಿನಾಂಕದ ಬಗ್ಗೆ ಹೆಚ್ಚಿನ ಮಾಹಿತಿಗಳು ನೀಡಿದ್ದು, ಈ ಹಿಂದೆ ಫಲಿತಾಂಶಗಳನ್ನು ಜೂನ್ 4 ರಂದು ಪ್ರಕಟಿಸಲಾಗುವುದು ಎಂದು ಈ ಹಿಂದೆ ಹೇಳಲಾಗಿತ್ತು. 


ಫೌಂಡೇಶನ್ ಪೇಪರ್ 1 ಮತ್ತು 2 ರ ಪರೀಕ್ಷೆಗಳನ್ನು ಸಾಮಾನ್ಯವಾಗಿ ಮೂರು ಗಂಟೆಗಳ ಕಾಲ, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಸಲಾಗುತ್ತದೆ. ಆದರೆ 3 ಮತ್ತು 4 ಪತ್ರಿಕೆಗಳನ್ನು ಎರಡು ಗಂಟೆಗಳ ಕಾಲ, ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ನಡೆಸಲಾಗುತ್ತದೆ. ಎಲ್ಲಾ ಮಧ್ಯಂತರ ಪತ್ರಿಕೆಗಳ ಸಮಯವು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಇರುತ್ತದೆ. ಅಂತಿಮ ಕೋರ್ಸ್‌ನ 1 ರಿಂದ 5 ಪೇಪರ್‌ಗಳನ್ನು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಸಲಾಗುತ್ತದೆ, ಪತ್ರಿಕೆ 6 ಅನ್ನು ನಾಲ್ಕು ಗಂಟೆಗಳ ಕಾಲ, ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ನಡೆಸಲಾಗುತ್ತದೆ.


ಇದನ್ನು ಓದಿ : ರಮ್ಯಾ ಕೃಷ್ಣನ್‌ʼಗೆ ಇಷ್ಟು ದೊಡ್ಡ ಮಗ ಇದ್ದಾನಾ! ತಂದೆ ನಿರ್ದೇಶಕ.. ತಾಯಿ ಸ್ಟಾರ್ ನಟಿ.. ಮಗ ಹೀರೋ ಆಗಿ ಎಂಟ್ರಿ?


ಮಾರ್ಚ್ 7 ರಂದು CA ಫೌಂಡೇಶನ್ ಮತ್ತು ಇಂಟರ್ಮೀಡಿಯೇಟ್ ಪರೀಕ್ಷೆಗಳ ಮಾದರಿಯಲ್ಲಿ ಗಮನಾರ್ಹ ಬದಲಾವಣೆಯನ್ನು ಘೋಷಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ  ಇಂಟರ್ ಪರೀಕ್ಷೆಗಳನ್ನು ವರ್ಷಕ್ಕೆ ಮೂರು ಬಾರಿ ನಡೆಸಲಾಗುತ್ತದೆ. ಇಲ್ಲಿಯವರೆಗೆ, ICAI ವರ್ಷಕ್ಕೆ ಎರಡು ಬಾರಿ CA ಇಂಟರ್ ಮತ್ತು ಫೌಂಡೇಶನ್ ಪರೀಕ್ಷೆಗಳನ್ನು ನಡೆಸುತ್ತಿತ್ತು ಆದರೆ ವಿದ್ಯಾರ್ಥಿಗಳಿಗೆ ಒಂದು ವರ್ಷದಲ್ಲಿ ಇನ್ನೂ ಒಂದು ಹೆಚ್ಚಿನ ಅವಕಾಶವನ್ನು ನೀಡಲಾಗುತ್ತದೆ. ಇದರಿಂದ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI)  ತಿಳಿಸಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.