Deepika Padukone: ಬಾಣಂತನಕ್ಕಾಗಿ ತವರೂರಿಗೆ ಬರುತ್ತಿದ್ದಾರೆ ಬಾಲಿವುಡ್‌ ಬೆಡಗಿ ದೀಪಿಕಾ!

Deepika Padukone Delivery: ಬಿಟೌನ್‌ ಬೆಡಗಿ ದೀಪಿಕಾ ಪಡುಕೊಣೆ ತಾವು ಬಾಣಂತನ ಮಾಡಿಸಿಕೊಳ್ಳುವುದಕ್ಕಾಗಿ ತಮ್ಮ ತವರೂರು ಬೆಂಗಳೂರಿಗೆ ಬರಲಿದ್ದಾರೆ. ಈ ನಟಿ ತನ್ನ ಮಗುವಿಗೆ ಬೆಂಗಳೂರಿನಲ್ಲಿಯೇ ಜನ್ಮ ನೀಡಲಿದ್ದಾರೆ. ಇಲ್ಲಿದೆ ಸಂಪೂರ್ಣ ವಿಷಯ.

Written by - Zee Kannada News Desk | Last Updated : Mar 17, 2024, 12:22 PM IST
  • ದೀಪಿಕಾ ಪಡುಕೊಣೆ ಗರ್ಭಿಣಿಯಾಗಿದ್ದು ಮಗು ಆಗುವವರೆಗೂ ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿಯೇ ಕಳೆಯಲು ಬಯಸುತ್ತಿದ್ದಾರೆ.
  • ನಟಿ ದೀಪಿಕಾ ಪಡುಕೋಣೆ ತವರು ಮನೆ ಬೆಂಗಳೂರಿನ ಇಂದಿರಾ ನಗರದಲ್ಲಿ ಮನೆಯಿದ್ದು, ಅಲ್ಲಿಯೇ ಹಲವು ತಿಂಗಳುಗಳ ಕಾಲ ತಮ್ಮ ಸಮಯ ಕಳೆಯಲಿದ್ದಾರೆ.
  • ದೀಪಿಕಾ ಪಡುಕೊಣೆ ಹಾಗೂ ರಣವೀರ್‌ ಸಿಂಗ್‌ ಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಪ್ರೀತಿಸಿ, 14 ನವೆಂಬರ್ 2018ರಲ್ಲಿ ವಿವಾಹವಾಗಿದ್ದರು.
Deepika Padukone: ಬಾಣಂತನಕ್ಕಾಗಿ ತವರೂರಿಗೆ ಬರುತ್ತಿದ್ದಾರೆ ಬಾಲಿವುಡ್‌ ಬೆಡಗಿ ದೀಪಿಕಾ! title=

Deepika Padukone Baby Delivery In Bangalore: ಬಾಲಿವುಡ್‌ ನಟಿ ದೀಪಿಕಾ ಪಡುಕೊಣೆ ಇತ್ತೀಚೆಗೆ ತಾವು ತಾಯಿಯಾಗುತ್ತಿರುವ ಖುಷಿಯ ಸುದ್ದಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಇದೀಗ ಈ ನಟಿ ಬಾಣಂತನ ಮಾಡಿಸಿಕೊಳ್ಳುವುದಕ್ಕಾಗಿ ತಮ್ಮ ತವರೂರು ಬೆಂಗಳೂರಿಗೆ ಬರಲಿದ್ದಾರೆ. ಈಕೆ ಬೆಂಗಳೂರಿನಲ್ಲಿಯೇ ತನ್ನ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ನಟಿ ಗರ್ಭಿಣಿಯಾಗಿದ್ದು ಮಗು ಆಗುವವರೆಗೂ ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿಯೇ ಕಳೆಯಲು ಬಯಸುತ್ತಿದ್ದಾರೆ.

ಬಾಲಿವುಡ್‌ನ ಹಲವಾರು ನಟಿಮಣಿಯರಾದ ಆಲಿಯಾ ಭಟ್, ಕರೀನಾ ಕಪೂರ್ ಮತ್ತು ಹಲವಾರು ತಾರೆಯರು ಮುಂಬೈನ ಪ್ರತಿಷ್ಠಿತ ಆಸ್ಪತ್ರೆ ಡಾ.ಕೋಕಿಲಾ ಬೆನ್​ನ ನೆರವನ್ನು ಪಡೆದುಕೊಂಡಿದ್ದರು. ಆದರೆ ದೀಪಿಕಾ ಪಡುಕೋಣೆ ಮಾತ್ರ ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದಾರೆ. ಇನ್ನೂ ಈ ನಟಿ ಯಾವ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲಿದ್ದಾರೆ, ಯಾವ ವೈದ್ಯರ ನೆರವನ್ನು ಪಡೆದುಕೊಳ್ಳಲಿದ್ದಾರೆಂಬುದನ್ನು ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ: ರಮ್ಯಾ ಕೃಷ್ಣನ್‌ʼಗೆ ಇಷ್ಟು ದೊಡ್ಡ ಮಗ ಇದ್ದಾನಾ! ತಂದೆ ನಿರ್ದೇಶಕ.. ತಾಯಿ ಸ್ಟಾರ್ ನಟಿ.. ಮಗ ಹೀರೋ ಆಗಿ ಎಂಟ್ರಿ?

ನಟಿ ದೀಪಿಕಾ ಪಡುಕೋಣೆ ತವರು ಮನೆ ಬೆಂಗಳೂರಿನ ಇಂದಿರಾ ನಗರದಲ್ಲಿ ಮನೆಯಿದ್ದು, ಅಲ್ಲಿಯೇ ಹಲವು ತಿಂಗಳುಗಳ ಕಾಲ ತಮ್ಮ ಸಮಯ ಕಳೆಯಲಿದ್ದಾರೆ. ಈ ನಟಿಯ ಫೇವರೇಟ್‌ ಹಬ್‌ಗಳಾದ ವೀಣಾ ಸ್ಟೋರ್ಸ್, ಮೇಘನಾ, ವಿದ್ಯಾರ್ಥಿ ಭವನ್, ಸಿಟಿಆರ್ ಇನ್ನಿತರ ಹೋಟೆಲ್‌ಗಳಿಗೆ ಭೇಟಿ ನೀಡಲಿದ್ದಾರೆ. ಈಕೆಗೆ ಅನ್ನ ಹಾಗೂ ರಸಂ ಕೂಡ ತುಂಬಾ ಇಷ್ಟವಾಗಿದ್ದು, ತಾವು ಬೆಂಗಳೂರಿಗೆ ಬಂದ ಮೇಲೆ ತಮ್ಮೆಲ್ಲಾ ಆಸೆ ಬಯಕೆಗಳನ್ನು ಈಡೇರಿಸಿಕೊಳ್ಳಲಿದ್ದಾರೆ.

ದೀಪಿಕಾ ಪಡುಕೊಣೆ ಹಾಗೂ ರಣವೀರ್‌ ಸಿಂಗ್‌ ಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಪ್ರೀತಿಸಿ, 14 ನವೆಂಬರ್ 2018ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಆರು ವರ್ಷಗಳ ಬಳಿಕ ಈ ಜೋಡಿ ಪೋಷಕರಾಗುತ್ತಿದ್ದು, ಈ ತಾರಾ ದಂಪತಿ ಸೋಶಿಯಲ್‌ ಮಿಡಿಯಾದಲ್ಲಿ ಸಡಗರದ ವಿಚಾರವನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಈ ನಟಿ ಗರ್ಭಿಣಿಯಾದರೂ ಅನಂತ್‌ ಅಂಬಾನಿ ಮದುವೆ ಪೂರ್ವ ಕಾರ್ಯಕ್ರಮದಲ್ಲಿ ನಿಂತ ಜಾಗದಲ್ಲೇ ತಮ್ಮ ಪತಿಯ ಜೊತೆ ಗರ್ಭಾ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
 

Trending News