ICMR New Advisory:ಎರಡನೇ ಬಾರಿ RT-PCR ಟೆಸ್ಟ್ ಮಾಡಿಸಬೇಡಿ, ಕೊರೊನಾ ಟೆಸ್ಟ್ ಕುರಿತು ICMR ಹೊಸ ಅಡ್ವೈಸರಿ
Corona Testing: ದೇಶದಲ್ಲಿ ಕರೋನಾ ವೈರಸ್ ಸೋಂಕಿನ ಎರಡನೇ ಅಲೆಯ ಅವಧಿಯಲ್ಲಿ, ಪರೀಕ್ಷಾ ಪ್ರಯೋಗಾಲಯಗಳು ಅಪಾರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ICMR ಹೇಳಿದೆ.
ನವದೆಹಲಿ: ICMR New Advisory - ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಮುಂದುವರೆದಿದೆ. ಈ ಅವಧಿಯಲ್ಲಿ ನಿತ್ಯ ಹೆಚ್ಚಿನ ಸಂಖ್ಯೆಯ ಹೊಸ ಕರೋನಾ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಕರೋನಾ ಲಸಿಕೆ ಮತ್ತು ಕರೋನಾ ಪರೀಕ್ಷೆಗೆ ದೇಶದಲ್ಲಿ ಅಭಿಯಾನ ನಡೆಯುತ್ತಿದೆ. ಏತನ್ಮಧ್ಯೆ, ಕರೋನಾ ತನಿಖೆಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಂಗಳವಾರ ಹೊಸ ಸಲಹೆಗಳನ್ನು ನೀಡಿದೆ. ಇದರಲ್ಲಿ, ಲ್ಯಾಬ್‌ನ ಒತ್ತಡವನ್ನು ಕಡಿಮೆ ಮಾಡಲು, RT-PCR ಟೆಸ್ಟ್ ಆದಷ್ಟು ಕಡಿಮೆ ಮಾಡಲು ಮತ್ತು ರಾಪಿಡ್ ಆಂಟಿಜೆನ್ ಟೆಸ್ಟ್ ಗಳನ್ನು ಹೆಚ್ಚಿಸಲು ಸಲಹೆ ನೀಡಲಾಗಿದೆ.
ದೇಶಾದ್ಯಂತ ಕರೋನಾ ವೈರಸ್ (Coronavirus) ಸೋಂಕಿನ ಎರಡನೇ ಅಲೆಯ ಕಾಲದಲ್ಲಿ, ಪರೀಕ್ಷೆ ನಡೆಸುತ್ತಿರುವ ಪ್ರಯೋಗಾಲಯಗಳು ಅಪಾರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಐಸಿಎಂಆರ್ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚುತ್ತಿರುವ ಕರೋನಾ ಪ್ರಕರಣದ ದೃಷ್ಟಿಯಿಂದ, ತನಿಖೆಯ ಗುರಿಯನ್ನು ಪೂರೈಸುವಲ್ಲಿ ತೊಂದರೆ ಉಂಟಾಗುತ್ತಿದೆ. ಏಕೆಂದರೆ ಪ್ರಯೋಗಾಲಯಗಳ ಕೆಲವು ಸಿಬ್ಬಂದಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದೆ.
ICMR ಪ್ರಮುಖ ಸಲಹೆಗಳು ಇಂತಿವೆ
1. ಒಂದು ಬಾರಿ RT-PCR ಅಥವಾ ರಾಪಿಡ್ ಆಂಟಿಜನ್ ಟೆಸ್ಟ್ (RAT) ಮೂಲಕ ಸೋಂಕು ಪತ್ತೆಯಾದವರು ಎರಡನೇ ಬಾರಿಗೆ RT-PCR ಟೆಸ್ಟ್ ನಡೆಸಬಾರದು.
2. ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಬಿಡುವಿನ ಸಮಯದಲ್ಲಿ ರೋಗಿಗಳು ಟೆಸ್ಟ್ ಮಾಡಿಸುವ ಅವಶ್ಯಕತೆ ಇಲ್ಲ.
[[{"fid":"207413","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
3. ಲ್ಯಾಬ್ ಗಳಲ್ಲಿನ ಒತ್ತಡ ಕಡಿಮೆ ಮಾಡಲು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಗಳಿಗೆ ಪ್ರಯಾಣ ಬೆಳೆಸುವ ಆರೋಗ್ಯವಂತ ಯಾತ್ರಿಗಳ ಕಡ್ಡಾಯ RT-PCR ಟೆಸ್ಟ್ ಅನ್ನು ಸಂಪೂರ್ಣ ತೆಗೆದು ಹಾಕಬೇಕು.
4. ಫ್ಲೂ ಅಥವಾ ಕೊವಿಡ್-19 ಲಕ್ಷಣಗಳಿರುವವವರು ಅನಾವಶ್ಯಕ ಯಾತ್ರ ಅಥವಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರಯಾಣ ಬೆಳೆಸುವುದನ್ನು ನಿಲ್ಲಿಸಬೇಕು. ಇದರಿಂದ ಸೋಂಕು ಹರಡುವಿಕೆ ಕಡಿಮೆಯಾಗಲಿದೆ.
5. ಕೊರೊನಾ ಲಕ್ಷಣಗಳಿಲ್ಲದ ಯಾತ್ರಿಗಳು ಯಾತ್ರೆಯ ವೇಳೆ ಕೊರೊನಾ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಮಾಡಬೇಕು.
6. ರಾಜ್ಯಗಳಿಗೆ RT-PCR ಟೆಸ್ಟ್ ಗಳನ್ನು ಮೊಬೈಲ್ ಸಿಸ್ಟಂ ಮೂಲಕ ನಡೆಸಲು ಪ್ರೋತ್ಸಾಹಿಸಬೇಕು.
ಇದನ್ನೂ ಓದಿ- N-440K ಕೊರೊನಾ ರೂಪಾಂತರಿ ತುಂಬಾ ಅಪಾಯಕಾರಿ, 10 ಪಟ್ಟು ಹೆಚ್ಚು ವೇಗವಾಗಿ ಹರಡುತ್ತಿದೆ
RAT ಕೂಡ ಲಾಭಕಾರಿಯಾಗಿದೆ
ಕೊರೊನಾ ಪತ್ತೆ ಹಚ್ಚಲು ರಾಪಿಡ್ ಆಂಟಿಜನ್ ಟೆಸ್ಟ್ (RAT) ನಡೆಸಲು ಜೂನ್ 2020ರಲ್ಲಿ ಅನುಮತಿ ನೀಡಲಾಗಿತ್ತು. ಪ್ರಸ್ತುತ ಸಮಯದಲ್ಲಿ ಇದು ಕೆಲ ಕಂಟೆನ್ಮೆಂಟ್ ಜೋನ್ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಸೀಮಿತವಾಗಿದೆ. ಕೇವಲ 15 ರಿಂದ 20 ನಿಮಿಷಗಳಲ್ಲಿ ಇದರಿಂದ ಸೋಂಕನ್ನು ಪತ್ತೆಹಚ್ಚಬಹುದು. ಇದರಿಂದ ರೋಗಿಗಳಿಗೆ ಬೇಗನೆ ಚೇತರಿಸಿಕೊಳ್ಳಲು ಕೂಡ ಅನುಕೂಲವಾಗುತ್ತದೆ.
[[{"fid":"207414","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]
ಇದನ್ನೂ ಓದಿ-Good News: ಭಾರತೀಯ ಮಾರುಕಟ್ಟೆಯಲ್ಲಿ ತನ್ನ Covid-19 Drug ಬಿಡುಗಡೆಗೊಳಿಸಿದ Bajaj Health Care
RATಗೆ ಸಂಬಂಧಿಸಿದ ಸಲಹೆಗಳು
1.RAT ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕಡ್ಡಾಯಗೊಳಿಸಬೇಕು.
2. ನಗರಗಳು, ಹೋಬಳಿಗಳು, ಗ್ರಾಮಗಳ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಪರೀಕ್ಷೆ ನಡೆಸಲು RAT ಬೂತ್ ಗಳ ನಿರ್ಮಾಣ ಮಾಡಬೇಕು.
3. ನಗರ, ಗ್ರಾಮದ ಹಲವು ಸ್ಥಳಗಳಲ್ಲಿ RAT ಬೂತ್ ಗಳನ್ನು ನಿರ್ಮಿಸಿ. ಇವುಗಳಲ್ಲಿ ಶಾಲೆ-ಕಾಲೇಜು, ಸಮುದಾಯ ಭವನ, ಖಾಲಿ ನಿವೇಶನಗಳನ್ನು ಕೂಡ ಶಾಮೀಲುಗೊಳಿಸಿ.
4. ಈ ಬೂತ್ ಗಳನ್ನು 24X7 ಕಾರ್ಯನಿರ್ವಹಿಸುವಂತೆ ಮಾಡಿ.
5. ಸ್ಥಳೀಯ ಆಡಳಿತ ತನ್ನ ಮಟ್ಟದಲ್ಲಿ ಡ್ರೈವ್ ಥ್ರೂ ಬೂತ್ ಕೂಡ ಆರಂಭಿಸಬಹುದು.
ಇದನ್ನೂ ಓದಿ-Coronavirus Third Wave: ಮಕ್ಕಳ ಪಾಲಿಗೆ ಅಪಾಯಕಾರಿ ಸಾಬೀತಾಗಲಿದೆ, ಈ ರಾಜ್ಯದಿಂದ ಆರಂಭ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.