ದೇಶಾದ್ಯಂತ ಷರತ್ತಿನೊಂದಿಗೆ Liquor shops ಕೂಡ ತೆರೆಯಲಿದೆಯೇ? ಅದರ ಸತ್ಯಾಸತ್ಯತೆ ಇಲ್ಲಿದೆ
ದೇಶಾದ್ಯಂತ ಲಾಕ್‌ಡೌನ್ (Lockdown)ಜಾರಿಗೆ ಬಂದಾಗಿನಿಂದ ಮದ್ಯದಂಗಡಿಗಳನ್ನೂ ಮುಚ್ಚಲಾಗಿದೆ.
ನವದೆಹಲಿ: ಈ ಮೊದಲು ಕೇವಲ ನಿತ್ಯ ಬಳಕೆಯ ಅಗತ್ಯ ವಸ್ತುಗಳ ಮಾರಾತಕ್ಕಷ್ಟೇ ಅನುವು ಮಾಡಿಕೊಟ್ಟಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಮ್ಮೆ ಲಾಕ್ ಡೌನ್ (Lockdown) ನಿಯಮಗಳನ್ನು ಸಡಿಲಿಸಿದ್ದು ಕೆಲ ಷರತ್ತುಗಳೊಂದಿಗೆ ಅನಿವಾರ್ಯವಲ್ಲದ ವಸ್ತುಗಳ ಮಾರಾಟಕ್ಕೂ ಅನುವು ಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ಸರ್ಕಾರ ಮದ್ಯದ ಅಂಗಡಿ (Liquor shops)ಗಳನ್ನೂ ಸಹ ತೆರೆಯಲು ಅನುಮತಿ ನೀಡಿದೆ ಎಂಬ ಸುದ್ದಿ ಮದ್ಯ ಪ್ರಿಯರನ್ನು ಸಂತಸಗೊಳ್ಳುವಂತೆ ಮಾಡಿದೆ. ಆದರೆ ನಿಜವಾಗಿಯೂ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆಯೇ? ಅಥವಾ ಇಲ್ಲವೇ? ಎಂಬುದು ಇನ್ನೂ ಕೆಲವರ ಆತಂಕಕ್ಕೂ ಕಾರಣವಾಗಿದೆ.
ಇದು ಸರ್ಕಾರದ ಹೊಸ ಆದೇಶ:
ಕಳೆದ ರಾತ್ರಿ, ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಅನಿವಾರ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಲು ಆದೇಶಿಸಿದೆ. ಆದರೆ ಅದರಲ್ಲಿ ತಾಂತ್ರಿಕ ವಿಷಯವಿದೆ. ವಾಸ್ತವವಾಗಿ ನಗರಸಭೆ ಪ್ರದೇಶದ ಹೊರಗಿನ ಅಂಗಡಿಗಳನ್ನು ಮಾತ್ರ ತೆರೆಯಬಹುದು ಎಂದು ಸರ್ಕಾರ ಸ್ಪಷ್ಟವಾಗಿ ಬರೆದಿದೆ. ಇದರರ್ಥ ಯಾವುದೇ ನಗರದ ಪುರಸಭೆಯ ವ್ಯಾಪ್ತಿಯಿಂದ ಹೊರಗಿರುವ ದೂರದ ಪ್ರದೇಶಗಳಲ್ಲಿರುವ ಅಂಗಡಿಗಳನ್ನೂ ಮಾತ್ರ ತೆರೆಯಲು ಸಾಧ್ಯವಾಗುತ್ತದೆ. ಇದನ್ನು ನೇರವಾಗಿ ನಗರಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಇಲ್ಲ ಎಂದು ಅರ್ಥ ಮಾಡಿಕೊಳ್ಳಬಹುದು.
ಮದ್ಯದಂಗಡಿ ತೆರೆಯುವುದೇ?
ಅಂಗಡಿ ಮತ್ತು ಸ್ಥಾಪನಾ ಕಾಯ್ದೆಯಡಿ ಗೃಹ ಸಚಿವಾಲಯ ಈ ವಿನಾಯಿತಿ ನೀಡಿದೆ. ಅಂದರೆ ಪಡಿತರ ಮತ್ತು ಇತರ ಸರಕುಗಳ ಅಂಗಡಿಗಳನ್ನು ಮಾತ್ರ ತೆರೆಯಬಹುದಾಗಿದೆ. ವೈನ್ ಮತ್ತು ಬಿಯರ್‌ನಂತಹ ಉತ್ಪನ್ನಗಳು ಅಬಕಾರಿ ಕಾಯ್ದೆಯಡಿ ಬರುವುದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ವಿನಾಯಿತಿ ನೀಡಿಲ್ಲ. ಹಾಗಾಗಿ ಮದ್ಯದಂಗಡಿಗಳು ತೆರೆಯುವುದಿಲ್ಲ. ಸದ್ಯದ ಪರಿಸ್ಥಿತಿಯ ಪ್ರಕಾರ ಮೇ 3ರವರೆಗೆ ಮದ್ಯದಂಗಡಿಗಳನ್ನು ಮುಚ್ಚಲ್ಪಡುತ್ತವೆ ಎಂದು ಊಹಿಸಲಾಗಿದೆ.
ಮಾರ್ಚ್ 25ರಿಂದ ಲಾಕ್‌ಡೌನ್ ಜಾರಿಗೆ ಬಂದ ನಂತರ ದೇಶಾದ್ಯಂತ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಆದಾಗ್ಯೂ ಕೆಲವರು ಮದ್ಯ (Liquor) ಸಿಗದೆ ಸಾವನ್ನಪ್ಪಿದ ಪ್ರಕರಣಗಳ ಹಿನ್ನೆಲೆಯಲ್ಲಿ ಕೇರಳ ಮತ್ತು ಪಂಜಾಬ್ ಸರ್ಕಾರಗಳು ಮದ್ಯದಂಗಡಿ ತೆರೆಯಲು ತಮ್ಮದೇ ಆದ ನಿಯಮಗಳನ್ನು ರೂಪಿಸಿದ್ದವು. ಆದರೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಅದನ್ನು ಜಾರಿಗೆ ತರಲಿಲ್ಲ.