ಎನ್‌ಡಿಎ ಗೆದ್ದರೆ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆಯೇ? ಇಲ್ಲಿದೆ ಬಿಜೆಪಿ ಉತ್ತರ
ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ನಿಚ್ಚಳವಾಗಿ ಘೋಚರಿಸುತ್ತಿವೆ, ಆದರೆ ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ಹಲವು ಅನುಮಾನಗಳು ಈಗ ವ್ಯಕ್ತವಾಗತೊಡಗಿವೆ.
ನವದೆಹಲಿ: ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ನಿಚ್ಚಳವಾಗಿ ಘೋಚರಿಸುತ್ತಿವೆ, ಆದರೆ ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ಹಲವು ಅನುಮಾನಗಳು ಈಗ ವ್ಯಕ್ತವಾಗತೊಡಗಿವೆ.
ಈ ಬಾರಿ ನಿತೀಶ್ ಕುಮಾರ್ ವಿರುದ್ಧ ಆಡಳಿತ ವಿರೋಧಿ ಅಲೆ ತೀವ್ರವಾಗಿತ್ತು, ಈ ಹಿನ್ನಲೆಯಲ್ಲಿ ಅವರ ವರ್ಚಸ್ಸು ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಈಗ ಬಿಹಾರದಲ್ಲಿನ ಚುನಾವಣಾ ಫಲಿತಾಂಶದ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಕೈಲಾಸ್ ವಿಜಯ್ ವರ್ಗಿಯಾ ಅವರು 'ಮೋದಿಯವರ ಚಿತ್ರಣವು ಈ ಬಾರಿ ನಮಗೆ ನೆರವಾಯಿತು,'ಸಂಜೆಯ ಹೊತ್ತಿಗೆ, ನಾವು ಸರ್ಕಾರ ರಚನೆ ಮತ್ತು ನಾಯಕತ್ವದ ವಿಷಯಗಳ ಬಗ್ಗೆ ನಿರ್ಧರಿಸುತ್ತೇವೆ" ಎಂದು ಅವರು ತಿಳಿಸಿದರು.
Bihar Election Results 2020: ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಯಾರಾಗ್ತಾರೆ CM?
ಬಿಹಾರದಲ್ಲಿ ಸರ್ಕಾರದ ಮುಖ್ಯಸ್ಥರಾಗಲು ಹೊಸ ಅಭ್ಯರ್ಥಿಯ ಬಗ್ಗೆ ಬಿಜೆಪಿ ಯೋಚಿಸಬಹುದು ಎಂದು ಆ ಹೇಳಿಕೆಯು ಸೂಚಿಸುತ್ತದೆ.ಇದನ್ನೇ ಅವರು ಪ್ರಸ್ತಾಪಿಸುತ್ತಿದ್ದಾರೆಯೇ? ಎಂದು ಕೇಳಿದಾಗ, ಪ್ರವೃತ್ತಿಗಳು ಫಲಿತಾಂಶಗಳಾಗಿ ಪರಿವರ್ತನೆಗೊಂಡರೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮರಳುವ ಬಗ್ಗೆ ಬಿಜೆಪಿ ತನ್ನ ಭರವಸೆಗೆ ಅಂಟಿಕೊಳ್ಳುತ್ತದೆ ಎಂದು ವಿಜಯವರ್ಗಿಯಾ ತಿಳಿಸಿದ್ದಾರೆ.
ಈ ಬಾರಿ ಕೊರೊನಾ ಹಾಗೂ ಚಿರಾಗ್ ಪಾಸ್ವಾನ್ ಅವರಿಂದಾಗಿ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಚುನಾವಣಾ ಪ್ರಚಾರದುದ್ದಕ್ಕೂ ಚಿರಾಗ್ ಪಾಸ್ವಾನ್ ಮಾಡಿದ ನಿತೀಶ್ ವಿರೋಧಿ ಅಭಿಯಾನ ಬಿಜೆಪಿಗೆ ಲಾಭದಾಯಕವಾಗಿದೆ.