ನವದೆಹಲಿ: ಉತ್ತರ ಭಾರತದಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿ-ಎನ್‌ಸಿಆರ್ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಮುಂದಿನ ಮೂರು ದಿನಗಳವರೆಗೆ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.


COMMERCIAL BREAK
SCROLL TO CONTINUE READING

ಹವಾಮಾನ ಇಲಾಖೆಯ ಪ್ರಕಾರ ದೆಹಲಿ-ಎನ್‌ಸಿಆರ್ (Delhi-NCR) ಪ್ರದೇಶದಲ್ಲಿ ಜನವರಿ 6 ರವರೆಗೆ ಮೋಡಕವಿದ ವಾತಾವರಣವಿರುತ್ತದೆ. ಎನ್‌ಸಿಆರ್ ಹೊರತುಪಡಿಸಿ ಶೀತ ತರಂಗ ಪರಿಸ್ಥಿತಿಗಳಿಂದಾಗಿ ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ಶೀತ ವಾತಾವರಣ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.


ತಾಪಮಾನವು 3-5C° ಹೆಚ್ಚಾಗುತ್ತದೆ :
ಶೀತ ತರಂಗವನ್ನು ಎದುರಿಸುತ್ತಿರುವ ಉತ್ತರ ಭಾರತದಲ್ಲಿ ತಾಪಮಾನವು ಮೂರರಿಂದ ಐದು ಡಿಗ್ರಿ ಸೆಲ್ಸಿಯಸ್ (°C) ಹೆಚ್ಚಾಗುತ್ತದೆ ಎಂದು ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಜನವರಿ 5 ರವರೆಗೆ ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರೊಂದಿಗೆ ವಿವಿಧ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಸಹ  ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.


ಇದನ್ನೂ ಓದಿ : ನೀವು ಚಳಿಗಾಲದಲ್ಲಿ ಮದ್ಯಪಾನ ಮಾಡುತ್ತೀರಾ? ನಿಮಗಿದೋ ಶಾಕಿಂಗ್ ನ್ಯೂಸ್ ...!


ಐಎಂಡಿ ಪ್ರಕಾರ ಸೋಮವಾರ ಬಯಲು ಪ್ರದೇಶಗಳಲ್ಲಿ (ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನ) ಮತ್ತು ಪಶ್ಚಿಮ ಹಿಮಾಲಯನ್ ಪ್ರದೇಶ (ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್ , ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ) ಭಾಗಗಳಲ್ಲಿ ಗರಿಷ್ಠ ಶೀತ ದಾಖಲಾಗುವ ಸಾಧ್ಯತೆ ಇದೆ. ನಂತರ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ವಾಯುವ್ಯ ಮಾರುತಗಳು ಬೀಸುವ ಮುನ್ಸೂಚನೆ ಇದೆ. ಇದರಿಂದಾಗಿ ಜನವರಿ 7 ರಿಂದ ಪಂಜಾಬ್, ಹರಿಯಾಣ ಮತ್ತು ಉತ್ತರ ರಾಜಸ್ಥಾನದ ದೂರದ ಸ್ಥಳಗಳಲ್ಲಿ ಶೀತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.  


ಈ ಸಮಯದಲ್ಲಿ ಮಳೆಗೆ ಕಾರಣ ?
ಅಫ್ಘಾನಿಸ್ತಾನ ಮತ್ತು ಸುತ್ತಮುತ್ತಲಿನ ಪಾಶ್ಚಿಮಾತ್ಯ ಅಡಚಣೆಗಳಿಂದಾಗಿ ಸೈಕ್ಲೋನಿಕ್ ಹರಿವು ರೂಪುಗೊಂಡಿದೆ. ಮುಂದಿನ 48 ಗಂಟೆಗಳಲ್ಲಿ ಇದು ಪಾಕಿಸ್ತಾನದತ್ತ ಸಾಗುವ ನಿರೀಕ್ಷೆಯಿದೆ. ಪಾಶ್ಚಿಮಾತ್ಯ ಅವಾಂತರದ ಪರಿಣಾಮವಾಗಿ ನೈರುತ್ಯ ರಾಜಸ್ಥಾನದಲ್ಲಿ ಕಡಿಮೆ ವಾಯು ಒತ್ತಡ ರೂಪುಗೊಂಡಿದೆ ಎನ್ನಲಾಗಿದೆ.


ಇದನ್ನೂ ಓದಿ : ರಾಜ್ಯದ ಜನರೇ ಎಚ್ಚರ! ಇನ್ನೂ ಒಂದು ತಿಂಗಳು ರಾಜ್ಯದಲ್ಲಿ ಮೈ ಕೊರೆಯುವ ಚಳಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.