ನವದೆಹಲಿ: ಭಾರತವು ಭಾನುವಾರ ಒಟ್ಟು 2,41,970 ಪ್ರಕರಣಗಳನ್ನು ವರದಿ ಮಾಡುವ ಮೂಲಕ ಸ್ಪೇನ್ ಅನ್ನು ಹಿಂದಿಕ್ಕಿದ ಕಾರಣ ವಿಶ್ವದಲ್ಲೇ ಐದನೇ ಅತಿಹೆಚ್ಚು ಕರೋನವೈರಸ್ ಪೀಡಿತ ರಾಷ್ಟ್ರವಾಗಿದೆ.COVID-19 ಕೇಂದ್ರ ಬಿಂದುವಾಗಿರುವ ಸ್ಪೇನ್ ವಾರಗಳ ಹಿಂದೆಯೇ 2,40,978 ಪ್ರಕರಣಗಳನ್ನು ಹೊಂದಿದೆ.


COMMERCIAL BREAK
SCROLL TO CONTINUE READING

ಶನಿವಾರ ಬೆಳಿಗ್ಗೆ, ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು, ಭಾರತವು ಕಳೆದ 24 ಗಂಟೆಗಳಲ್ಲಿ 9,887 ಹೊಸ ಕರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದೆ.ಶುಕ್ರವಾರಕ್ಕೆ ಹೋಲಿಸಿದರೆ ಚೇತರಿಕೆ ದರದಲ್ಲಿ ಸಣ್ಣ ಕುಸಿತ ಕಂಡುಬಂದಿದೆ, ಇದು 48.27 ಪ್ರತಿಶತದಿಂದ 48.20 ಕ್ಕೆ ಇಳಿದಿದೆ.ಕಳೆದ 24 ಗಂಟೆಗಳಲ್ಲಿ ವರದಿಯಾದ ಸಾವುಗಳ ಸಂಖ್ಯೆ 294 ಆಗಿದ್ದು, ಭಾರತದಲ್ಲಿ ಒಟ್ಟು ಸಾವುಗಳ ಸಂಖ್ಯೆ 6,642 ಕ್ಕೆ ತಲುಪಿದೆ.


ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಒಂದಾದ ಇಟಲಿಯನ್ನು ಶುಕ್ರವಾರ ಭಾರತವು ಹಿಂದಕ್ಕೆ ಹಾಕಿತು.ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ-ಅಂಶಗಳು ಶುಕ್ರವಾರ ಮಧ್ಯರಾತ್ರಿಯಲ್ಲಿ ಭಾರತದಲ್ಲಿನ ಕೊರೊನಾ ಪ್ರಕರಣಗಳು 2,35,769 ಮತ್ತು ಇಟಲಿಯಲ್ಲಿ 2,34,531 ವರದಿಯಾಗಿರುವುದನ್ನು ತೋರಿಸಿದೆ.


ಭಾರತದಲ್ಲಿ ಚೇತರಿಕೆ ಸಂಖ್ಯೆ ಏರಿಕೆಯಾಗಿದ್ದರೂ, ಇನ್ನೂ 1ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಈಗ ಪ್ರಕರಣಗಳು ಹಲವಾರು ದಿನಗಳಿಂದ 8,000 ಅಥವಾ ಅದಕ್ಕಿಂತ ಹೆಚ್ಚು ತೀವ್ರವಾಗಿ ಏರುತ್ತಿವೆ.