ಮುಂಬೈ: ಮಹಾಮಾರಿ ಕರೋನಾ ವೈರಸ್ (CoronaVirus) ಸೋಂಕಿಗೆ ಭಾರತದಲ್ಲಿ ಮೂರನೇ ವ್ಯಕ್ತಿ ಬಲಿಯಾಗಿದ್ದಾರೆ.  ಕೊರೊನಾ ವೈರಸ್‌ನಿಂದಾಗಿ ಮುಂಬೈನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. COVID-19 ನಿಂದ ಸೋಂಕಿಗೆ ಒಳಗಾಗುವುದರ ಹೊರತಾಗಿ ವ್ಯಕ್ತಿಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದಲ್ಲಿ ಒಟ್ಟು 39 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ. ಕೊರೊನಾವೈರಸ್‌ನಿಂದಾಗಿ ಪುಣೆಯ ಶನಿವಾರ್ ವಾಡಾ ಕೋಟೆ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ.


ಕರೋನವೈರಸ್‌ನಿಂದ ಕಲ್ಬುರ್ಗಿಯ 76 ವರ್ಷದ ವ್ಯಕ್ತಿ ಮೃತ; ಆರೋಗ್ಯ ಇಲಾಖೆ ಸ್ಪಷ್ಟನೆ


ಕುಡಿದು ವಾಹನ ಚಲಾಯಿಸುವ ಪರೀಕ್ಷೆಯನ್ನು ಮಹಾರಾಷ್ಟ್ರ ಪೊಲೀಸರು ಅಮಾನತುಗೊಳಿಸಿದ್ದಾರೆ.ನಾವೆಲ್ ಕೊರೊನಾವೈರಸ್ ಸೋಂಕಿನಿಂದ ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸುವ ಪ್ರಯತ್ನದಲ್ಲಿ, ಮಹಾರಾಷ್ಟ್ರ ಹೆದ್ದಾರಿ ಪೊಲೀಸರು ಕುಡಿದು ವಾಹನ ಚಲಾಯಿಸುವುದನ್ನು ಪರೀಕ್ಷಿಸಲು ಅಗತ್ಯವಾದ ಉಸಿರಾಟದ ವಿಶ್ಲೇಷಕ ಪರೀಕ್ಷೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಜಾಗತಿಕವಾಗಿ ಕೊರೊನಾವೈರಸ್‌ನಿಂದಾಗಿ ಸಾವಿನ್ನಪ್ಪಿದ್ದವರ ಸಂಖ್ಯೆ 7,138 ಕ್ಕೆ ತಲುಪಿದೆ.