ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಕಾರ್ಯಶೈಲಿಗೆ ತೀವ್ರ ಅಸಮಾಧಾನಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಈ ಕುರಿತಾಗಿ ಸುದೀರ್ಘ ಪತ್ರ ಬರೆದಿರುವ ಗಂಗೂಲಿ ಬಿಸಿಸಿಐ ಸಿಇಓ ರಾಹುಲ್ ಜೋಹ್ರಿ ವಿರುದ್ದ ಬಂದಿರುವ ಲೈಂಗಿಕ ಕಿರುಕುಳದ ಆರೋಪದ ವಿಚಾರವಾಗಿ ಪ್ರಶ್ನಿಸಿದ್ದಾರೆ. ಎಎನ್ಐ ವರದಿ ಪ್ರಕಾರ "ಲೈಂಗಿಕ ಕಿರುಕುಳದ ಪ್ರಕರಣಗಳನ್ನು ನಿರ್ವಹಿಸಿದ ವಿಚಾರವಾಗಿ ಗಂಗೂಲಿ ಬಿಸಿಸಿಐ ವಿರುದ್ದ ಆಕ್ರೋಶಗೊಂಡಿದ್ದಾರೆ ಎಂದು ತಿಳಿದುಬಂದಿದೆ.



ನಾಲ್ಕು ಸದಸ್ಯರಿದ್ದ ಬಿಸಿಸಿಐ ಆಡಳಿತ ಮಂಡಳಿ ಈಗ ಎರಡಕ್ಕೆ ಇಳಿದಿದೆ,ಅವರಲ್ಲಿಯೂ ಸಹಿತ ಒಮ್ಮತವಿಲ್ಲ ಎಂದು ಗಂಗೂಲಿ ಪತ್ರದಲ್ಲಿ ತಿಳಿಸಿದ್ದಾರೆ. ಇನ್ನು ಮುಂದುವರೆದು ಕ್ರಿಕೆಟ್ ಆಡಳಿತದ ನಿಯಮಗಳು ಬದಲಾಗಿವೆ, ಈ ವಿಚಾರವಾಗಿ ಎಂದು ಕೇಳಲ್ಪಟ್ಟಿರಲಿಲ್ಲ, ಸಮಿತಿಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳೆಲ್ಲವು ಸಹಿತ ಅಗೌರವ ಸೂಚಿಸುವಂತವು, ಅದರಲ್ಲಿ ಕೋಚ್ ನ್ನು ಆಯ್ಕೆ ಮಾಡಿದ ರೀತಿಯಂತೂ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ(ಇದರ ಬಗ್ಗೆ ಹೆಚ್ಚಿಗೆ ಹೇಳದೆ ಇದ್ದರೆ ಒಳ್ಳೆಯದು) ಎಂದು ಅವರು ತಿಳಿಸಿದ್ದಾರೆ.


ಪತ್ರದ ಕೊನೆಯಲ್ಲಿ ಭಾರತೀಯ ಕ್ರಿಕೆಟ್ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಕಟ್ಟಲಾಗಿದೆ ಆದರೆ ಸದ್ಯದ ಪರಿಸ್ಥಿತಿಯನ್ನು ನೋಡಿದಾಗ ಅದು ಅಪಾಯದಲ್ಲಿದೆ ಎಂದನಿಸುತ್ತಿದ್ದೆ ಎಂದು ಗಂಗೂಲಿ ತೀರ್ವ ಆತಂಕ ವ್ಯಕ್ತಪಡಿಸಿದ್ದಾರೆ.ಸೌರವ್ ಗಂಗೂಲಿ 2015 ರಲ್ಲಿ ಜಗಮೋಹನ್ ದಾಲ್ಮಿಯಾ ನಿಧನವಾದ ನಂತರ  ಬೆಂಗಾಲ್ ಕ್ರಿಕೆಟ್ ಅಸ್ಸೋಸಿಯಶನ್ ಅಧ್ಯಕ್ಷತೆ ವಹಿಸಿದ್ದಾರೆ.