ನವದೆಹಲಿ: ಭಾರತದ ಇತಿಹಾಸವು ಯಾವಾಗಲೂ ಅಚ್ಚರಿಯ ಕಥನಗಳನ್ನು ಹೊಂದಿದೆ, ಅದರಲ್ಲಿ ಕೆಲವರು ತಮ್ಮ ಆಡಳಿತದಿಂದ ಕೀರ್ತಿಯನ್ನು ಹೊಂದಿದ್ದರೆ ಇನ್ನೂ ಕೆಲವರು ಹಲವು ಕಾರಣಗಳಿಗಾಗಿ ಅಪಖ್ಯಾತಿಯನ್ನು ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಅಂದಹಾಗೆ ಈಗ ನಾವು ಹೇಳ ಹೊರಟಿರುವ ಕಥೆ ಈಗ ಖ್ಯಾತಿಗಿಂತಲೂ ಕುಖ್ಯಾತಿ ಹೊಂದಿರುವ ರಾಜನ ಬಗ್ಗೆ, ಈ ರಾಜನು ತನ್ನ ಜೀವಿತಾವಧಿಯಲ್ಲಿ ಬರೋಬ್ಬರಿ 365 ರಾಣಿಯರನ್ನು ಹೊಂದಿದ್ದನೆಂದರೆ ನೀವು ನಂಬುತ್ತೀರಾ? ಹೌದು ಇದು ನಿಮಗೆ ಅಚ್ಚರಿ ತರಿಸುವ ಸಂಗತಿ ಎನಿಸಬಹುದಾದರೂ ಇದು ನಿಜ ಸಂಗತಿಯಾಗಿದೆ, ಆ ರಾಜ ಬೇರೆ ಯಾರೂ ಅಲ್ಲ ಪಟಿಯಾಲ ಎಸ್ಟೇಟ್‌ನ ಮಹಾರಾಜ ಭೂಪಿಂದರ್ ಸಿಂಗ್, ಅವರನ್ನು ದೇಶದ ಅತ್ಯಂತ ಕುಖ್ಯಾತಿ ಹೊಂದಿದ ರಾಜ ಎಂದು ಕರೆಯಾಲಾಗುತ್ತದೆ.


ಇದನ್ನೂ ಓದಿ : "ದುಡ್ಡಿಗಾಗಿ ಆದಿವಾಸಿ ಸಂಸ್ಕೃತಿ ಹೈಜಾಕ್‌ ಮಾಡೋದು ಸರೀನಾ?" : ನಟ ಚೇತನ್‌


1891 ರ ಅಕ್ಟೋಬರ್ 12 ರಂದು ಪಟಿಯಾಲ ರಾಜವಂಶದಲ್ಲಿ ಜನಿಸಿದ ಮಹಾರಾಜ ಭೂಪಿಂದರ್ ಸಿಂಗ್ ಕೇವಲ 9 ವರ್ಷ ವಯಸ್ಸಿನಲ್ಲೇ ರಾಜನಾದನು. ಆದಾಗ್ಯೂ, 18 ವರ್ಷ ತುಂಬಿದಾಗ ಅಧಿಕಾರವನ್ನು ಸ್ವೀಕರಿಸಿದನು.ಈ ರಾಜನು ಪಟಿಯಾಲವನ್ನು ಬರೋಬ್ಬರಿ 38 ವರ್ಷಗಳ ಕಾಲ ಆಳಿದನು. ಈ ರಾಜನಿಗೆ ಬರೋಬ್ಬರಿ 365 ರಾಣಿಯರಿದ್ದರು, ಅಷ್ಟೇ ಅಲ್ಲದೆ ಅವನಿಗೆ 83 ಮಕ್ಕಳು ಸಹಿತ ಇದ್ದರು ಆದರೆ ಅವರಲ್ಲಿ 20 ಮಂದಿ ಸಾವನ್ನಪ್ಪಿದರು ಎನ್ನಲಾಗುತ್ತದೆ.


 


[[{"fid":"269710","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಚಿತ್ರ ಕೃಪೆ: ವಿಕಿಪೀಡಿಯ


ಈ ರಾಜನು ರಾಣಿಯರನ್ನು ಸಾಕಷ್ಟು ಶೋಷಣೆಗೆ ಒಳಪಡಿಸುತ್ತಿದ್ದನು,ಮತ್ತು ಯಾವಾಗಲೂ ಆನಂದದಲ್ಲಿ ಮುಳುಗಿರುತ್ತಿದ್ದನು, ಇದಕ್ಕಾಗಿಯೇ ಅವನು ಪ್ರತ್ಯೇಕ ಅರಮನೆಯನ್ನು ಸಹ ನಿರ್ಮಿಸಿದ್ದನು ಎನ್ನಲಾಗುತ್ತದೆ.


ಮಹಾರಾಜ ಭೂಪಿಂದರ್ ಸಿಂಗ್ 365 ರಾಣಿಯರನ್ನು ಹೊಂದಿದ್ದರೂ, ಅವರಲ್ಲಿ ಹತ್ತು ಮಂದಿ ಮಾತ್ರ ಹೆಂಡತಿಯ ಸ್ಥಾನಮಾನವನ್ನು ಹೊಂದಿದ್ದರು. ಮಹಾರಾಜನು ಯಾವ ರಾಣಿಯೊಂದಿಗೆ ರಾತ್ರಿ ಕಳೆಯುತ್ತಾನೆ ಎನ್ನುವುದನ್ನು ವಿಶಿಷ್ಟವಾಗಿ ನಿರ್ಧರಿಸಲಾಗುತ್ತಿತ್ತು,ಪ್ರತಿ ರಾತ್ರಿ 365 ಲಾಟೀನುಗಳನ್ನು ಬೆಳಗಿಸಲಾಗುತ್ತಿತ್ತು,ಅದರ ಮೇಲೆ ಎಲ್ಲಾ ರಾಣಿಯರ ಹೆಸರನ್ನು ಬರೆಯಲಾಗುತ್ತಿತ್ತು. ಮೊದಲು ನಂದಿಸಿದ ಲಾಟಿನಿನಲ್ಲೇ ಮಹಾರಾಜನು ರಾತ್ರಿಯನ್ನು ಕಳೆಯುತ್ತಿದ್ದನು ಎನ್ನಲಾಗಿದೆ.


ಸ್ವಂತ ವಿಮಾನವನ್ನು ಇಟ್ಟುಕೊಳ್ಳುತ್ತಿದ್ದ ಭೂಪಿಂದರ್ ಸಿಂಗ್


ಮಹಾರಾಜ ಭೂಪಿಂದರ್ ಸಿಂಗ್ ಆ ದಿನಗಳಲ್ಲಿಯೂ ಅಯ್ಯಾಶಿಯೊಂದಿಗೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದನು. ಅವರ ಒಡವೆಯಲ್ಲಿ ವಿಶ್ವದ 7ನೇ ಅತ್ಯಂತ ದುಬಾರಿ ನೆಕ್ಲೇಸ್ ಕೂಡ ಇದ್ದು, ಕದ್ದೊಯ್ದಿದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲ, ಪಟಿಯಾಲಾ ಪೆಗ್ ಎಂಬ ಹೆಸರನ್ನೂ ಭೂಪಿಂದರ್ ಸಿಂಗ್ ಇಟ್ಟಿದ್ದರು. ಭೂಪಿಂದರ್ ಸಿಂಗ್ ಕೂಡ ತಮ್ಮದೇ ಆದ ಖಾಸಗಿ ವಿಮಾನವನ್ನು ಹೊಂದಿದ್ದರು. ಐಷಾರಾಮಿ ಜೀವನವನ್ನು ಇಷ್ಟಪಡುತ್ತಿದ್ದ ಮಹಾರಾಜರ ಬಳಿ 44 ರೋಲ್ಸ್ ರಾಯ್ಸ್ ಕಾರುಗಳೂ ಇದ್ದವು ಎನ್ನಲಾಗಿದೆ.


ಇದನ್ನೂ ಓದಿ: Vasishta Simha - Haripriya : ಕ್ಯೂಟ್‌ ಆಗಿ ಲವ್‌ ಮ್ಯಾಟರ್‌ ರಿವೀಲ್‌ ಮಾಡಿದ ವಸಿಷ್ಠ ಸಿಂಹ


ಭೋಗದ ಸೌಲಭ್ಯಗಳನ್ನು ಹೊಂದಿದ್ದ ಅರಮನೆ


ಭುಪಿಂದರ್ ಸಿಂಗ್ ಅವರು ಲಂಪಟತನ ಮತ್ತು ಉಲ್ಲಾಸಕ್ಕಾಗಿ ವಿಶೇಷ ಅರಮನೆ ಲೀಲಾವನ್ನು ನಿರ್ಮಿಸಿದ್ದರು. ಲೀಲಾ ಮಹಲ್‌ ಗೆ ಬರಲು ಯಾರಿಗೂ ಅವಕಾಶವಿರಲಿಲ್ಲ ಆದರೆ ಬೆತ್ತಲೆಯಾಗಿ ಬಂದ ಮೇಲೆ ಮಾತ್ರ ಪ್ರವೇಶವನ್ನು ನೀಡಲಾಗುತ್ತಿತ್ತು.ಭೂಪಿಂದರ್ ಸಿಂಗ್ ಅವರು ಈ ಅರಮನೆಯಲ್ಲಿ ವಿಶೇಷ ಕೋಣೆಯನ್ನು ಸಹ ನಿರ್ಮಿಸಿದ್ದರು, ಅದು ಎಲ್ಲಾ ಐಷಾರಾಮಿ ಸೌಕರ್ಯಗಳೆಲ್ಲವನ್ನು ಹೊಂದಿತ್ತು. ಇದರೊಂದಿಗೆ ಅರಮನೆಯಲ್ಲಿ ರಾಣಿಯರಿಗೆ ಒಬ್ಬ ಮಹಿಳಾ ವೈದ್ಯೆಯೂ ಇದ್ದರು. ಇಂದಿಗೂ ಈ ಅರಮನೆಯು ಪಟಿಯಾಲಾದ ಭೂಪೇಂದ್ರನಗರ ರಸ್ತೆ ಬದಿಯಲ್ಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.