ನವದೆಹಲಿ: ಭಾರತದಲ್ಲೇ ತಯಾರಿಸಿದ ಕೋವಿಡ್ 19 ಸೋಂಕಿನ ಲಸಿಕೆಯು ಮುಂದಿನ ವರ್ಷ ಅಂದರೆ 2021 ರ ಫೆಬ್ರುವರಿಯ ಆರಂಭದಲ್ಲಿ ಲಭ್ಯವಾಗುವ ಸಾಧ್ಯತೆಗಳಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನಿರೀಕ್ಷೆಗಿಂತ ಒಂದು ತಿಂಗಳ ಮುನ್ನವೇ ಕೋವಿಡ್ ಲಸಿಕೆ ಲಭಿಸುವ ಸಾಧ್ಯತೆ ಇದೆ.ಅಂತಿಮ ಹಂತದ ಪ್ರಯೋಗದಲ್ಲಿ ಈ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬ ಅಂಶ ಕಂಡುಬಂದಿರುವುದಾಗಿ ಸರ್ಕಾರದ ಹಿರಿಯ ವಿಜ್ಞಾನಿ ರಾಯಿಟರ್ಸ್ ಗೆ ತಿಳಿಸಿದ್ದಾರೆ.


ಶೇ 80 ರಷ್ಟು COVID-19 ರೋಗಿಗಳಲ್ಲಿ ವಿಟಮಿನ್ ಡಿ ಕೊರತೆ-ಅಧ್ಯಯನ


ಕೇಂದ್ರ ಸರ್ಕಾರದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಜತೆಗೂಡಿ ಖಾಸಗಿ ಕಂಪನಿಯಾದ ಭಾರತ್ ಬಯೋಟೆಕ್ (Bharat Biotech) "ಕೋವ್ಯಾಕ್ಸಿನ್" ಲಸಿಕೆಯನ್ನು ಅಭಿವೃದ್ದಿಪಡಿಸಿದ್ದು, ಈ ಲಸಿಕೆ 2021ರ ಏಪ್ರಿಲ್ ನಂತರ ಲಭ್ಯವಾಗುವ ಸಾಧ್ಯತೆ ಇದೆ ಎಂದು ಈ ಮೊದಲು ತಿಳಿಸಿತ್ತು.


ಕೋವಿಡ್ ಗಾಗಿ ಸಿದ್ಧಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗದಲ್ಲಿ ತುಂಬಾ ಪರಿಣಾಮಕಾರಿ ಫಲಿತಾಂಶ ಕಂಡು ಬಂದಿರುವುದಾಗಿ ಐಸಿಎಂಆರ್ ವಿಜ್ಞಾನಿ ರಜನಿಕಾಂತ್ ತಿಳಿಸಿದ್ದಾರೆ. ಈ ನೂತನ ಲಸಿಕೆ ಮುಂದಿನ ವರ್ಷ(2021) ದ ಫೆಬ್ರುವರಿ ಅಥವಾ ಮಾರ್ಚ್ ನಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಆದರೆ ಈ ಬಗ್ಗೆ ಭಾರತ್ ಬಯೋಟೆಕ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.ಒಂದು ವೇಳೆ ಫೆಬ್ರುವರಿಯಲ್ಲಿ ಕೋವ್ಯಾಕ್ಸಿನ್ (vaccine) ಲಸಿಕೆ ಬಿಡುಗಡೆಯಾದರೆ ಮೇಡ್ ಇನ್ ಇಂಡಿಯಾದ ಮೊದಲ ಲಸಿಕೆ ಲಭ್ಯವಾದಂತಾಗಲಿದೆ ಎಂದು ವರದಿ ತಿಳಿಸಿದೆ.