ಶೇ 80 ರಷ್ಟು COVID-19 ರೋಗಿಗಳಲ್ಲಿ ವಿಟಮಿನ್ ಡಿ ಕೊರತೆ-ಅಧ್ಯಯನ

ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ವಿಟಮಿನ್ ಡಿ ಪೋಷಕಾಂಶವು ಎಂದಿಗಿಂತಲೂ ಹೆಚ್ಚು ಸುದ್ದಿಯಲ್ಲಿದೆ. ಜನರು ಮನೆಯಲ್ಲಿಯೇ ಇರುವುದರಿಂದ ಮತ್ತು ನೈಸರ್ಗಿಕ ಸೂರ್ಯನ ಬೆಳಕಿನಿಂದ 'ಸನ್ಶೈನ್ ವಿಟಮಿನ್' ಪಡೆಯಲು ಸಾಧ್ಯವಾಗದ ಕಾರಣ ಸಾಮಾನ್ಯ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ವಿಟಮಿನ್ ಡಿ ಕೊರತೆಯ ಬಗ್ಗೆ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 

Last Updated : Oct 30, 2020, 05:19 PM IST
ಶೇ 80 ರಷ್ಟು COVID-19 ರೋಗಿಗಳಲ್ಲಿ ವಿಟಮಿನ್ ಡಿ ಕೊರತೆ-ಅಧ್ಯಯನ

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ವಿಟಮಿನ್ ಡಿ ಪೋಷಕಾಂಶವು ಎಂದಿಗಿಂತಲೂ ಹೆಚ್ಚು ಸುದ್ದಿಯಲ್ಲಿದೆ. ಜನರು ಮನೆಯಲ್ಲಿಯೇ ಇರುವುದರಿಂದ ಮತ್ತು ನೈಸರ್ಗಿಕ ಸೂರ್ಯನ ಬೆಳಕಿನಿಂದ 'ಸನ್ಶೈನ್ ವಿಟಮಿನ್' ಪಡೆಯಲು ಸಾಧ್ಯವಾಗದ ಕಾರಣ ಸಾಮಾನ್ಯ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ವಿಟಮಿನ್ ಡಿ ಕೊರತೆಯ ಬಗ್ಗೆ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 

ವಾಸ್ತವವಾಗಿ, ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವ ಶೇ  80% ರಷ್ಟು COVID-19 ರೋಗಿಗಳನ್ನು ಹೊಸ ಅಧ್ಯಯನವು ಕಂಡುಹಿಡಿದಿದೆ.ವಿಟಮಿನ್ ಡಿ ಅನೇಕ ದೈಹಿಕ ಕಾರ್ಯಗಳಿಗೆ ಸಹಾಯ ಮಾಡುತ್ತದೆ ಮತ್ತು ಅದರ ಕೊರತೆಯು ದುರ್ಬಲ ಮೂಳೆಗಳು, ಹೃದಯ ಸಂಬಂಧಿತ ಕಾಯಿಲೆಗಳು, ಕಡಿಮೆ ರೋಗನಿರೋಧಕ ಶಕ್ತಿ ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು.

ಅಸ್ಟ್ರಾಜೆನೆಕಾ COVID-19 ಪ್ರಾಯೋಗಿಕ ಲಸಿಕೆ ಸೇವಿಸಿದ ವ್ಯಕ್ತಿ ಸಾವು

'ದಿ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ & ಮೆಟಾಬಾಲಿಸಮ್' ನಲ್ಲಿ ಪ್ರಕಟವಾದ ಅಧ್ಯಯನವು ಸ್ಪೇನ್‌ನ ಆಸ್ಪತ್ರೆಯಲ್ಲಿ ದಾಖಲಾದ 216 ಕೊರೊನಾ ರೋಗಿಗಳಲ್ಲಿ  ಶೇ 80 ರಷ್ಟು ವಿಟಮಿನ್ ಡಿ ಕೊರತೆಯಾಗಿದೆ ಎಂದು ಕಂಡುಹಿಡಿದಿದೆ. ಮಹಿಳೆಯರಿಗಿಂತ ಪುರುಷರು ಕಡಿಮೆ ವಿಟಮಿನ್ ಡಿ ಮಟ್ಟವನ್ನು ಹೊಂದಿರುವುದನ್ನು ಸಂಶೋಧಕರು ಗಮನಿಸಿದ್ದಾರೆ.

ಲಸಿಕೆಯಿಂದಲೂ ಕೊನೆಯಾಗಲ್ಲ ಕರೋನಾ, ಹಲವು ವರ್ಷಗಳವರೆಗೆ ಇರಲಿದೆ ಪ್ರಭಾವ: ತಜ್ಞರ ಎಚ್ಚರಿಕೆ

"ವಿಟಮಿನ್ ಡಿ-ಕೊರತೆಯಿರುವ ಕೊರೊನಾ ರೋಗಿಗಳು ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ಹೊಂದಿದ್ದರು, ಸೀರಮ್ ಫೆರಿಟಿನ್ ಮತ್ತು ಟ್ರೋಪೋನಿನ್ ಮಟ್ಟವು ಅವರಲ್ಲಿ ಹೆಚ್ಚಿನ ಪ್ರಮಾಣದಲ್ಲಿತ್ತು ಎಂದು ಸ್ಪೇನ್‌ನ ಸ್ಯಾಂಟ್ಯಾಂಡರ್‌ನಲ್ಲಿರುವ ಕ್ಯಾಂಟಬ್ರಿಯಾ ವಿಶ್ವವಿದ್ಯಾಲಯದ ಸಹ ಲೇಖಕ ಜೋಸ್ ಎಲ್. ಹೆರ್ನಾಂಡೆಜ್ ತಿಳಿಸಿದ್ದಾರೆ.

'ಪ್ಲೋಸ್ ಒನ್' ಜರ್ನಲ್ನಲ್ಲಿ ಪ್ರಕಟವಾದ ಮತ್ತೊಂದು ಇತ್ತೀಚಿನ ಅಧ್ಯಯನವು, ವಿಟಮಿನ್ ಡಿ ಸಮರ್ಪಕತೆಯು COVID-19 ರೋಗಿಗಳಲ್ಲಿ ಆಮ್ಲಜನಕದ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಚಿಕಿತ್ಸೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಹೇಳಿದೆ.

More Stories

Trending News