Indian Railways News: ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಪಾಲಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಯಾತ್ರಿಗಳಾಗಿದ್ದರೆ, ರೈಲ್ವೆ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದರಿಂದ ಮಹಿಳೆಯರಿಗೆ ಸಾಕಷ್ಟು ಲಾಭ ಸಿಗಲಿದೆ.


COMMERCIAL BREAK
SCROLL TO CONTINUE READING

ಮಾರ್ಗಸೂಚಿಗಳನ್ನು ಹೊರಡಿಸಿದ ಭಾರತೀಯರ ರೇಲ್ವೆ
ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು ರೈಲ್ವೆ ಇಲಾಖೆ ಕಾಲಕಾಲಕ್ಕೆ ಹೊಸ ನಿಯಮಗಳನ್ನು ರೂಪಿಸುತ್ತದೆ. ಭಾರತೀಯ ರೈಲ್ವೇ ಕಳೆದ ವರ್ಷದಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಘಟನೆಗಳ ಡೇಟಾಬೇಸ್ ರಚಿಸಲು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ.


ಮಹಿಳಾ ಕೋಚ್‌ಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು
ಮಹಿಳಾ ಬೋಗಿಗಳ ಮೇಲೆ ತೀವ್ರ ನಿಗಾ ಇರಿಸಲು ರೈಲ್ವೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಇದರೊಂದಿಗೆ ಇತರ ಬೋಗಿಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆಯೂ ಸಂಪೂರ್ಣ ಗಮನ ಹರಿಸಲಾಗುವುದು ಎನ್ನಲಾಗಿದೆ. ಶಂಕಿತರ ಮೇಲೆ ನಿಗಾ ಇಡುವುದು ಮತ್ತು ಇದರೊಂದಿಗೆ ಆಗಾಗ್ಗೆ ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡುವುದು ಕೂಡ ಇವುಗಳಲ್ಲಿ ಶಾಮೀಲಾಗಿವೆ.


ಇದನ್ನೂ ಓದಿ-Wheat Price: ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಅಗ್ಗವಾಗಲಿದೆ ಗೋಧಿ, ಸರ್ಕಾರದ ಮಹತ್ವದ ನಿರ್ಧಾರ ಇಲ್ಲಿದೆ


ಗುರುತಿನ ಚೀಟಿ ಇಲ್ಲದೆ ಅನುಮತಿ ನೀಡಲಾಗುವುದಿಲ್ಲ
ಗುರುತಿನ ಚೀಟಿ ಇಲ್ಲದೆ ಯಾವುದೇ ಉದ್ಯೋಗಿ, ರೈಲುಗಳು ಮತ್ತು ರೈಲ್ವೆ ಆವರಣಗಳನ್ನು ಪ್ರವೇಶಿಸಲು ಅನುಮತಿಸಬಾರದು. ಇದರೊಂದಿಗೆ ಉಚಿತ ವೈಫೈ ಇಂಟರ್‌ನೆಟ್ ಸೇವೆಗಳ ಮೂಲಕ ಪೋರ್ನ್ ನೋಡುವವರ ಮೇಲೆ ತೀವ್ರ ನಿಗಾ ಇರಿಸುವಂತೆ ಆದೇಶ ನೀಡಲಾಗಿದೆ.


ಇದನ್ನೂ ಓದಿ-Online Money Transfer: ಹಣ ಕಳುಹಿಸಲು ನೀವು ಬಳಸುವ ಆಪ್ ಗಳ ಈ ಸತ್ಯಾಸತ್ಯತೆ ನಿಮಗೂ ಗೊತ್ತಿರಲಿ


ಸಿಸಿಟಿವಿ ಫೀಡಿಂಗ್ ಮೇಲೆ ನಿಗಾ ವಹಿಸಲಾಗುವುದು
ಯಾರ್ಡ್‌ಗಳು ಅಥವಾ ನಿಲ್ದಾಣಗಳ ಹೊಂಡಗಳು ಅಥವಾ ಪಕ್ಕದ ರೈಲ್ವೆ ಪ್ರದೇಶವನ್ನು ಅನಗತ್ಯ ಕಸದಿಂದ ಮುಕ್ತಗೊಳಿಸಬೇಕು, ಇವು ಆಂಟಿ ಸೋಸಿಯಲ್ ಎಲಿಮೆಂಟ್ಸ್ ಗಳಿಗೆ ರಕ್ಷಣೆ ನೀಡುತ್ತವೆ. ಇದಲ್ಲದೇ ಕಂಟ್ರೋಲ್ ರೂಂನಲ್ಲಿ ಸಿಸಿಟಿವಿ ಫೀಡಿಂಗ್ ಮೇಲೆ ಸದಾ ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.