Modi Govt: ದಿನದಿಂದ ದಿನಕ್ಕೆ ಏರುತ್ತಿರುವ ಗೋಧಿ ಬೆಲೆಯಿಂದ ನೀವು ಕಂಗಾಲಾಗಿದ್ದಲ್ಲಿ ಈ ಸುದ್ದಿ ಖಂಡಿತಾ ನಿಮಗೆ ಭಾರಿ ನೆಮ್ಮದಿಯನ್ನು ನೀಡಲಿದೆ. ಹೌದು, ಮುಂಬರುವ ದಿನಗಳಲ್ಲಿ ಗೋಧಿ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯನಿಗೆ ಮುಕ್ತಿ ಸಿಗಲಿದೆ. ಗೋಧಿಯ ಚಿಲ್ಲರೆ ಬೆಲೆಯನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ, ಎಫ್‌ಸಿಐ ಗೋಡೌನ್‌ನಿಂದ 15-20 ಲಕ್ಷ ಟನ್ ಗೋಧಿಯನ್ನು ಹೊರತೆಗೆಯಲು ಸರ್ಕಾರ ಪರಿಗಣಿಸುತ್ತಿದೆ. ಎಫ್‌ಸಿಐ ಗೋಡೌನ್‌ನಿಂದ ಹೊರಬರುವ ಈ ಗೋಧಿಯನ್ನು ಹಿಟ್ಟಿನ ಗಿರಣಿ ಇತ್ಯಾದಿಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿಯಲ್ಲಿ ಮಾರಾಟ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಬಗ್ಗೆ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
37.25 ರೂ.ಗೆ ತಲುಪಿದ ಹಿಟ್ಟಿನ ದರ
ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ಡಿಸೆಂಬರ್ 27 ರಂದು ಗೋಧಿಯ ಚಿಲ್ಲರೆ ಬೆಲೆ ಕೆಜಿಗೆ 32.25 ರೂ.ಗಳಷ್ಟು ಇದೆ. ಇದು ಹಿಂದಿನ ವರ್ಷದಲ್ಲಿ ಇದೇ ಅವಧಿಯಲ್ಲಿ ಪ್ರತಿ ಕೆಜಿಗೆ 28.53 ರೂ.ಗಳಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಗೋಧಿ ಹಿಟ್ಟಿನ ಬೆಲೆ ಕೆಜಿಗೆ 37.25 ರೂ.ಗೆ ಏರಿಕೆಯಾಗಿದೆ. ವರ್ಷದ ಹಿಂದೆ ಪ್ರತಿ ಕೆಜಿಗೆ ಇದು 31.74 ರೂ.ರಷ್ಟಿತ್ತು.
ಪೂರೈಕೆಗೆ ಒತ್ತು ನೀಡುವ ಉದ್ದೇಶ
OMSS ಅಡಿಯಲ್ಲಿ, ಭಾರತೀಯ ಆಹಾರ ನಿಗಮವು (FCI) ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಬೃಹತ್ ಗ್ರಾಹಕರು ಮತ್ತು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಲು ಕಾಲಕಾಲಕ್ಕೆ ಸರ್ಕಾರದಿಂದ ಅನುಮತಿಯನ್ನು ನೀಡುತ್ತದೆ. ಕಾಲೋಚಿತ ಬೇಡಿಕೆಗೆ ಅನುಗುಣವಾಗಿ ಪೂರೈಕೆಯನ್ನು ಉತ್ತೇಜಿಸುವುದು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಏರುತ್ತಿರುವ ಬೆಲೆಯನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ. ಗೋಧಿಗೆ ಸಂಬಂಧಿಸಿದಂತೆ ಆಹಾರ ಸಚಿವಾಲಯವು 2023 ರ OMSS ನೀತಿಯನ್ನು ಪ್ರಸ್ತುತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ- RBI ನಿಂದ ಮಹತ್ವದ ಘೋಷಣೆ, ಇಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಬಡ್ಡಿ ಸಿಗುತ್ತದ
15-20 ಲಕ್ಷ ಟನ್ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಲಾಗುವುದು
ಈ ನೀತಿಯ ಅಡಿಯಲ್ಲಿ, ಎಫ್‌ಸಿಐನಿಂದ 15-20 ಲಕ್ಷ ಟನ್ ಆಹಾರ ಧಾನ್ಯಗಳನ್ನು ಬೃಹತ್ ಗ್ರಾಹಕರಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಎಫ್‌ಸಿಐ ನೀಡಿರುವ ಗೋಧಿ ದರ ಎಷ್ಟಿರುತ್ತದೆ, ಆ ದರ ಇನ್ನೂ ನಿರ್ಧಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮತ್ತೊಂದು ಮೂಲವು ಸರ್ಕಾರವು ಸಾಕಷ್ಟು ಗೋಧಿಯನ್ನು ಹೊಂದಿದೆ ಎಂದು ಹೇಳಿದೆ, ಇದರಿಂದಾಗಿ ಗೋಧಿಯನ್ನು OMSS ಅಡಿಯಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-Online Money Transfer: ಹಣ ಕಳುಹಿಸಲು ನೀವು ಬಳಸುವ ಆಪ್ ಗಳ ಈ ಸತ್ಯಾಸತ್ಯತೆ ನಿಮಗೂ ಗೊತ್ತಿರಲಿ
ಮುಂಬರುವ ಋತುವಿನಲ್ಲಿ ಗೋಧಿಯ ಹೊಸ ಬೆಳೆ ಸಾಧ್ಯತೆಯೂ ಉತ್ತಮವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಾಗುವಳಿ ಪ್ರದೇಶ ಹೆಚ್ಚಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಎಫ್ ಸಿಐ ಗೋಧಿ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 5 ರವರೆಗೆ ಕೇಂದ್ರ ಪೂಲ್‌ನಲ್ಲಿ ಸುಮಾರು 180 ಲಕ್ಷ ಟನ್ ಗೋಧಿ ಮತ್ತು 111 ಲಕ್ಷ ಟನ್ ಅಕ್ಕಿ ಲಭ್ಯವಿತ್ತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.