ಐಆರ್ಸಿಟಿಸಿ ವೆಬ್‌ಸೈಟ್‌ನಲ್ಲಿ ಪ್ರಮುಖ ಬದಲಾವಣೆ, ಈ ಟೆಕ್ನಿಕ್ ಬಳಸಿ ಕನ್ಫರ್ಮ್ ಟಿಕೆಟ್ ಪಡೆಯಿರಿ
ಈ ವೆಬ್‌ಸೈಟ್ ಮೂಲಕ ಸುಲಭವಾಗಿ ಆನ್‌ಲೈನ್‌ನಲ್ಲಿ ಮತ್ತು ಶೀಘ್ರದಲ್ಲೇ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.
ನವದೆಹಲಿ: ಭಾರತೀಯ ರೈಲ್ವೆ (Indian Railways) ಐಆರ್‌ಸಿಟಿಸಿಯ ಆನ್‌ಲೈನ್ ಟಿಕೆಟಿಂಗ್ ವೆಬ್‌ಸೈಟ್ irctc.co.in ನಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಿದೆ. ವೆಬ್‌ಸೈಟ್‌ನಲ್ಲಿನ ಬದಲಾವಣೆಗಳು ಪ್ರಯಾಣಿಕರಿಗೆ ಆನ್‌ಲೈನ್‌ನಲ್ಲಿ ದೃಢಪಡಿಸಿದ ಟಿಕೆಟ್‌ಗಳನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ. ಇದಕ್ಕಾಗಿ ರೈಲ್ವೆ ವೆಬ್‌ಸೈಟ್‌ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಿದೆ ಎಂದು ಹೇಳಲಾಗುತ್ತಿದೆ.
ಆಗಸ್ಟ್‌ನಲ್ಲಿ ಹಲವು ಹೊಸ ಬದಲಾವಣೆಗಳೊಂದಿಗೆ ಹೊರಬರಲಿದೆ ಐಆರ್‌ಸಿಟಿಸಿಯ ಟಿಕೆಟಿಂಗ್ ವೆಬ್‌ಸೈಟ್ :
ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಮಾತನಾಡಿ ಐಆರ್‌ಸಿಟಿಸಿಯ (IRCTC) ಟಿಕೆಟಿಂಗ್ ವೆಬ್‌ಸೈಟ್ ಆಗಸ್ಟ್‌ನಲ್ಲಿ ಹೊಸ ಬದಲಾವಣೆಗಳೊಂದಿಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಹೊಸ ವೆಬ್‌ಸೈಟ್ ಮೊದಲಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ವೆಬ್‌ಸೈಟ್ ಮೂಲಕ ಸುಲಭವಾಗಿ ಆನ್‌ಲೈನ್‌ನಲ್ಲಿ ಮತ್ತು ಶೀಘ್ರದಲ್ಲೇ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.
ಭಾರತೀಯ ರೈಲ್ವೆಯಿಂದ ಸಿದ್ದವಾಗ್ತಿದೆ ವಿಶ್ವದ ಮೊದಲ ವಿಶೇಷ ಸುರಂಗ
ಹೊಸ ವೆಬ್‌ಸೈಟ್‌ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ:
ಹೊಸ ವೆಬ್‌ಸೈಟ್‌ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ತಂತ್ರದ ಮೂಲಕ ವೈಟಿಂಗ್ ಟಿಕೆಟ್ ತೆಗೆದುಕೊಳ್ಳುವ ಮೂಲಕ ಟಿಕೆಟ್ ದೃಢೀಕರಿಸುವುದು ಎಷ್ಟು ಸಾಧ್ಯ ಎಂಬುದನ್ನು ಪ್ರಯಾಣಿಕರು ಸುಲಭವಾಗಿ ತಿಳಿಯುತ್ತಾರೆ.
ಇತರ ಆಯ್ಕೆಗಳು ಸಹ ಲಭ್ಯ:
ಪ್ರಯಾಣಿಕರು ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರುವ ರೈಲಿನ ಹೊರತಾಗಿ ಆ ದಿನಾಂಕದಂದು ಯಾವುದೇ ರೈಲಿನಲ್ಲಿ ದೃಢಪಡಿಸಿದ ಟಿಕೆಟ್ ಜೊತೆಗೆ ಅದರ ಮಾಹಿತಿಯು ಪ್ರಯಾಣಿಕರಿಗೆ ಸುಲಭವಾಗಿ ಲಭ್ಯವಾಗುತ್ತದೆ.
ರೈಲ್ವೆ ನಿಲ್ದಾಣದಲ್ಲಿ ಕರೋನಾವೈರಸ್ ಹರಡುವುದಿಲ್ಲವೇ? ಇಲ್ಲಿದೆ ವಿಶೇಷ ಮಾಹಿತಿ
ಟಿಕೆಟ್ ಕಾಯ್ದಿರಿಸುವಾಗ ಪ್ರಯಾಣಿಕರಿಗೆ ಹತ್ತರಲ್ಲಿ ಸೀಟು ಪಡೆಯುವ ಸಾಧ್ಯತೆ ಎಷ್ಟಿದೆ ಎಂದು ತಿಳಿಸಲಾಗುತ್ತದೆ. ಯಾವ ರೈಲು ಕಾಯುವಿಕೆಯನ್ನು ದೃಢೀಕರಿಸುವ ಸಾಧ್ಯತೆಯಿದೆ, ಅದು ಸಹ ತಿಳಿಯುತ್ತದೆ. ಹೊಸ ವೆಬ್‌ಸೈಟ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಫಿಲ್ಟರ್‌ಗಳನ್ನು ಸಹ ಒದಗಿಸಲಾಗಿದೆ.
ಟಿಕೆಟ್ ಕಾಯ್ದಿರಿಸುವಾಗ ಕ್ಯೂಆರ್ ಕೋಡ್ ಲಭ್ಯವಿರುತ್ತದೆ:
ಹೊಸ ಪೋರ್ಟಲ್ ಮೂಲಕ ಟಿಕೆಟ್ ತೆಗೆದುಕೊಳ್ಳುವಾಗ ಪ್ರಯಾಣಿಕರ ಟಿಕೆಟ್‌ನ ಸಂದೇಶವು ಕ್ಯೂಆರ್ ಕೋಡ್‌ನ ಸಂದೇಶದೊಂದಿಗೆ ಬರುತ್ತದೆ, ಅದರ ಮೂಲಕ ಪ್ರಯಾಣಿಕರು ನಿಲ್ದಾಣಕ್ಕೆ ಹೋದಾಗ ಒಂದೆಡೆ ಸಂಪರ್ಕ ಕಡಿಮೆಯಾಗುತ್ತದೆ. ಜೊತೆಗೆ ಕಾಂಟಾಕ್ಟ್ ಲೆಸ್ ಟಿಕಟ್ ಚೆಕಿಂಗ್ ಗೆ ಅನುಕೂಲವಾಗಲಿದೆ.