Indian Railways: ರೈಲು ಯಾತ್ರಿಗಳಿಗೊಂದು ಮಹತ್ವದ ಮಾಹಿತಿ, ಇನ್ಮುಂದೆ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ
Indian Railway News: ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಕಾರ್ಯಾಚರಣಾ ವ್ಯವಸ್ಥೆಯನ್ನು (Train Operating System) ಹೆಚ್ಚಿಸುವ ಮತ್ತು ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು (Advanced Traffic Management System) ಜಾರಿಗೊಳಿಸುವ ದಿಕ್ಕಿನಲ್ಲಿ ಭಾರತೀಯ ರೈಲ್ವೇ (Indian Railways) ಒಂದು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.
ನವದೆಹಲಿ: Indian Railway News: ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಕಾರ್ಯಾಚರಣಾ ವ್ಯವಸ್ಥೆಯನ್ನು (Train Operating System) ಹೆಚ್ಚಿಸುವ ಮತ್ತು ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು (Advanced Traffic Management System) ಜಾರಿಗೊಳಿಸುವ ದಿಕ್ಕಿನಲ್ಲಿ ಭಾರತೀಯ ರೈಲ್ವೇ (Indian Railways) ಒಂದು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಅಂದರೆ ಇದೀಗ ಭಾರತೀಯ ರೈಲ್ವೆ ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ಕಾರ್ಯಾಚರಣಾ ವ್ಯವಸ್ಥೆಯನ್ನು ಮತ್ತಷ್ಟು ಅಡ್ವಾನ್ಸ್ ಮಾಡಿದೆ.
ರೈಲ್ವೇ ಸಚಿವಾಲಯದ (Railway Ministry) ಉಪಕ್ರಮದ ಅಡಿಯಲ್ಲಿ ಐಐಟಿ ದೆಹಲಿಯು (IIT Delhi)ರೈಲಿನ ರನ್ ಟ್ರೈನ್ ಸಾಫ್ಟ್ವೆಯರ್ (Run Train Software) ಅನ್ನು ನವೀಕರಿಸಿದೆ. ಅಂದರೆ, ಈಗ ರೈಲ್ವೆ ಉದ್ಯೋಗಿಗಳು ರೈಲುಗಳ ಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ. ಇದಲ್ಲದೇ, ಇಸ್ರೋ (ISRO) ಜೊತೆಗೆ ಕೈಜೋಡಿಸಿರುವ ರೈಲ್ವೇ ಇದೀಗ ರೈಲುಗಳ ಎಂಜಿನ್ ಅನ್ನು ಅಡ್ವಾನ್ಸ್ ಅನ್ನು ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಯಾತ್ರಿಗಳಿಗೆ ಈ ಸೌಲಭ್ಯಗಳು ಸಿಗಲಿವೆ
1. ಇನ್ಮುಂದೆ ರೈಲ್ವೆ ಪ್ರಯಾಣಿಕರು ರೈಲು ಹೊರಡುವ ಮುನ್ನ ಗಂಟೆ ಮೊದಲು ನಿಲ್ದಾಣಕ್ಕೆ ತೆರಳಬೇಕಾಗಿಲ್ಲ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ರೈಲುಗಾಗಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ.
2. ಈಗ ರೈಲ್ವೇ ಉದ್ಯೋಗಿಗಳು ತಮ್ಮ ಕಂಪ್ಯೂಟರ್ ಪರದೆಯಲ್ಲಿ ರೈಲುಗಳ ಎಲ್ಲಾ ಬೋಗಿಗಳ ಮಾಹಿತಿಯನ್ನು ಒಂದೇ ಕ್ಲಿಕ್ ನಲ್ಲಿ ನೋಡಲು ಸಾಧ್ಯವಾಗಲಿದೆ.
3. ಈ ತಂತ್ರಾಂಶವು ಸೆಕೆಂಡಿಗೆ ರೈಲಿನ ವೇಗವನ್ನು ಲೆಕ್ಕಹಾಕಲು ಮತ್ತು ರೈಲು ಎಲ್ಲಿಗೆ ತಲುಪಿದೆ ಮತ್ತು ಯಾವ ನಿಲ್ದಾಣದಲ್ಲಿ ಎಷ್ಟು ಹೊತ್ತು ನಿಂತಿದೆ ಎಂಬುದನ್ನು ಹೇಳಿಕೊಡಲಿದೆ.
ಬದಲಾಗಿದೆ 31 ವರ್ಷಗಳ ಹಳೆ ಸಾಫ್ಟ್ ವೆಯರ್ (IIT Delhi Develop New Software)
ಭಾರತೀಯ ರೈಲ್ವೆಯ ಪ್ರಕಾರ, ಪ್ರಸ್ತುತ ರೇಲ್ವೆ ಇಲಾಖೆಯಲ್ಲಿ ಬಳಸಲಾಗುತ್ತಿರುವ ಸಾಫ್ಟ್‌ವೇರ್ ಅನ್ನು 1990 ರಿಂದ ಬಳಸಲಾಗುತ್ತಿದೆ. ಅಂದಿನಿಂದ ಈಗಿನವರೆಗೆ , ರೈಲುಗಳ ವೇಗವು ಹೆಚ್ಚಾಗಿದೆ ಹಾಗೂ ರೈಲುಗಳ ಸಂಖ್ಯೆಯು ಹಲವು ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಬಳಸುತ್ತಿರುವ ತಂತ್ರಾಂಶವು ಡಿಎಎಸ್ ಅಂದರೆ ಡಿಸ್ಕ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ, ರೈಲುಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಟ್ಟಾಗಿ ಸಂಗ್ರಹಿಸುವುದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ರೈಲುಗಳಲ್ಲಿ ಹೊಸ ಸಾಫ್ಟ್ ವೇರ್ ವ್ಯವಸ್ಥೆಯ ಅವಶ್ಯಕತೆ ಇತ್ತು.
ಇದನ್ನೂ ಓದಿ-Big initiative: ರೈಲು ಆಧಾರಿತ ಪ್ರವಾಸೋದ್ಯಮ ವಿಸ್ತರಿಸಲು ಭಾರತೀಯ ರೈಲ್ವೆ ಇಲಾಖೆ ಯೋಚನೆ
ರಿಯಲ್ ಟೈಮ್ ಮಾಹಿತಿ ವ್ಯವಸ್ಥೆಗೆ ಬಲ ಸಿಗಲಿದೆ (Good News For Rail Passengers)
ಎರಡು ವರ್ಷಗಳ ಹಿಂದೆ, ರೈಲ್ವೇ ಸಚಿವಾಲಯ ರೈಲು ಇಂಜಿನ್ಗಳನ್ನು ಸುಧಾರಿಸಲು ಇಸ್ರೋ ಸಹಯೋಗದೊಂದಿಗೆ ರಿಯಲ್-ಟೈಮ್ ರೈಲು ಮಾಹಿತಿ (Real Time Train Information) ವ್ಯವಸ್ಥೆಯ ಅಡಿಯಲ್ಲಿ ಡಿವೈಸ್ ಸ್ಥಾಪಿಸುವ ಕೆಲಸವನ್ನು ಆರಂಭಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ ಮತ್ತು ಇದರ ಅಡಿಯಲ್ಲಿ, ಈ ತಂತ್ರಜ್ಞಾನವನ್ನು ಇದುವರೆಗೆ ಶೇ.90 ರಷ್ಟು ಇಂಜಿನ್‌ಗಳಲ್ಲಿ ಸ್ಥಾಪಿಸಲಾಗಿದೆ. ಅಂದರೆ, ಈಗ ಎಲ್ಲಾ ದಿಕ್ಕುಗಳಲ್ಲಿ ಓಡುವ ರೈಲುಗಳಲ್ಲಿ ನೈಜ ಸಮಯದ ವರದಿ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ, ಇದೀಗ ಪ್ರಯಾಣಿಕರು ವಿವಿಧ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಅತ್ಯಂತ ಮುಖ್ಯವಾದ ವಿಷಯವೆಂದರೆ, ಈ ಕಾರಣದಿಂದಾಗಿ, ಡಿಸೆಂಬರ್ ನಿಂದ ಫೆಬ್ರವರಿ ತಿಂಗಳಲ್ಲಿ ಮಂಜು ಕವಿದ ಕಾಲದಲ್ಲಿಯೂ ಕೂಡ ನಿಧಾನಗತಿಯಲ್ಲಿ ಚಲಿಸುವ ರೈಲುಗಳ ಮಾಹಿತಿಯನ್ನು ಸಹ ಪ್ರಯಾಣಿಕರಿಗೆ ಸರಿಯಾದ ಸಮಯದಲ್ಲಿ ನೀಡಲಾಗುವುದು. ವಿಶೇಷವಾಗಿ ರಾಜಧಾನಿ ಮತ್ತು ತೇಜಸ್‌ನಂತಹ ರೈಲುಗಳಲ್ಲಿ, ಇದು ಬಹಳಷ್ಟು ಸಹಕಾರಿ ಸಾಬೀತಾಗಲಿದೆ.
ಇದನ್ನೂ ಓದಿ-Indian Railways: ರೈಲು ಪ್ರಯಾಣಿಕರಿಗೊಂದು ಸಿಹಿ ಸುದ್ದಿ , ಈಗ ಟಿಕೆಟ್ ರಿಸರ್ವ್ ಮಾಡದೇ ಪ್ರಯಾಣ ಸಾಧ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.