Indian Railways: ರೈಲು ಪ್ರಯಾಣಿಕರಿಗೊಂದು ಸಿಹಿ ಸುದ್ದಿ , ಈಗ ಟಿಕೆಟ್ ರಿಸರ್ವ್ ಮಾಡದೇ ಪ್ರಯಾಣ ಸಾಧ್ಯ

ಈ  ರಿಸರ್ವೇಶನ್ ರಹಿತ ಪ್ರಯಾಣವನ್ನು 6 ಜೋಡಿ ವಿಶೇಷ ರೈಲುಗಳಲ್ಲಿ ಪೂರ್ವ ಕರಾವಳಿ ರೈಲ್ವೆ ಅನುಮೋದಿಸಿದೆ. ಪೂರ್ವ ಕರಾವಳಿ ರೈಲ್ವೆ  ಕೆಲವು ವಿಶೇಷ ರೈಲುಗಳಲ್ಲಿ ಕಾಯ್ದಿರಿಸದ ಟಿಕೆಟ್ ಳೊಂದಿಗೆ ಪ್ರಯಾಣಿಸಲು ಅನುಮತಿ ನೀಡಲಾಗುತ್ತಿದೆ. 

Written by - Ranjitha R K | Last Updated : Sep 8, 2021, 05:42 PM IST
  • ವಿಶೇಷ ರೈಲುಗಳಲ್ಲಿ ರಿಸರ್ವೇಶನ್ ಇಲ್ಲದೆ ಪ್ರಯಾಣಿಸಬಹುದು
  • ಈ ರೈಲುಗಳಲ್ಲಿ ಅನ್ ರಿಸರ್ವಡ್ ಟಿಕೆಟ್‌ಗಳಲ್ಲಿ ಪ್ರಯಾಣಿಸುವುದು ಸಾಧ್ಯ
  • ಅನ್ ರಿಸರ್ವಡ್ ರೈಲು ಸೇವೆ ಏಪ್ರಿಲ್‌ನಲ್ಲಿ ಆರಂಭ
Indian Railways: ರೈಲು ಪ್ರಯಾಣಿಕರಿಗೊಂದು ಸಿಹಿ ಸುದ್ದಿ , ಈಗ ಟಿಕೆಟ್ ರಿಸರ್ವ್ ಮಾಡದೇ ಪ್ರಯಾಣ ಸಾಧ್ಯ   title=
ವಿಶೇಷ ರೈಲುಗಳಲ್ಲಿ ರಿಸರ್ವೇಶನ್ ಇಲ್ಲದೆ ಪ್ರಯಾಣಿಸಬಹುದು (photo zee news)

ನವದೆಹಲಿ : ರೈಲ್ವೆ ಪ್ರಯಾಣಿಕರು ಈಗ ಮೀಸಲಾತಿ ಇಲ್ಲದೆ ಕೆಲವು ವಿಶೇಷ ಮಾರ್ಗಗಳಲ್ಲಿ ಪ್ರಯಾಣಿಸಬಹುದಾಗಿದೆ. ಕರೋನಾ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ (Indian Railway) ವಿಶೇಷ ರೈಲುಗಳನ್ನು ಮಾತ್ರ ನಿರ್ವಹಿಸುತ್ತಿದೆ. ಕರೋನಾದಿಂದ ಹಳಿ ತಪ್ಪಿದ್ದ ಜನ ಜೀವನ ಮತ್ತೆ ನಿಧಾನಕ್ಕೆ ಹಳಿಗೆ ಬರುತ್ತಿದೆ. ಕ್ರಮೇಣ ರೈಲುಗಳ ಸಂಚಾರ ಕೂಡಾ ಹೆಚ್ಚುತ್ತಿದೆ. ಆದರೆ, ಹೆಚ್ಚಿನ ರೈಲುಗಳಲ್ಲಿ ಪ್ರಯಾಣಿಸಲು,ಈಗ ಟಿಕೆಟ್ ಬುಕ್ (Rail ticket booking) ಮಾಡುವ ಅಗತ್ಯವಿಲ್ಲ.  

ರಿಸರ್ವೇಶನ್ ಇಲ್ಲದೆ ಪ್ರಯಾಣ :  
ಈ  ರಿಸರ್ವೇಶನ್ ರಹಿತ ಪ್ರಯಾಣವನ್ನು 6 ಜೋಡಿ ವಿಶೇಷ ರೈಲುಗಳಲ್ಲಿ ಪೂರ್ವ ಕರಾವಳಿ ರೈಲ್ವೆ ಅನುಮೋದಿಸಿದೆ. ಪೂರ್ವ ಕರಾವಳಿ ರೈಲ್ವೆ (East Coast Railway) ಕೆಲವು ವಿಶೇಷ ರೈಲುಗಳಲ್ಲಿ ಕಾಯ್ದಿರಿಸದ ಟಿಕೆಟ್ ಳೊಂದಿಗೆ (Unreserved ticket) ಪ್ರಯಾಣಿಸಲು ಅನುಮತಿ ನೀಡಲಾಗುತ್ತಿದೆ. 

ಇದನ್ನೂ ಓದಿ : ತಪ್ಪಿ ಬೇರೆಯವರ ಖಾತೆಗೆ ಹಣ ಟ್ರಾನ್ಸ್ಫರ್ ಆದರೆ ತಕ್ಷಣ ಈ ಕೆಲಸ ಮಾಡಿ, ದುಡ್ಡು ವಾಪಸ್ ಸಿಗಲಿದೆ

ರೈಲ್ವೆ ಅನುಮೋದನೆ : 
ರೈಲ್ವೆ ಯ ಕೆಲವು ರೈಲುಗಳಲ್ಲಿ, ಪ್ರಯಾಣಿಸಲು ಟಿಕೆಟ್  ಕಾಯ್ದಿರಿಸುವ ಅಗತ್ಯ ಇಲ್ಲ ಎಂದು, ಈಸ್ಟ್ ಕೋಸ್ಟ್ ರೈಲ್ವೆ (Railways Ministry) ಅಧಿಕೃತ ಹೇಳಿಕೆ ನೀಡಿದೆ. ಅಂದರೆ, ಈಗ ಈ ಮಾರ್ಗಗಳಲ್ಲಿ ಮೀಸಲಾತಿ ಇಲ್ಲದೆ ಪ್ರಯಾಣಿಸಬಹುದು.

ಈ ರೈಲುಗಳಲ್ಲಿ ಪ್ರಯಾಣ ಮಾಡಲು ಟಿಕೆಟ್‌ ರಿಸರ್ವೇಶನ್ ಮಾಡಿಸುವ ಅಗತ್ಯವಿಲ್ಲ :
1. ಪುರಿ-ಅಂಗುಲ್-ಪುರಿ ಸ್ಪೆಷಲ್ ಟ್ರೈನ್ 
2. ಖುರ್ದಾ ರಸ್ತೆ-ಕೆಂದುಜಾರ್ ಘರ್- ಖುರ್ದಾ ರಸ್ತೆ ಸ್ಪೆಷಲ್ ಟ್ರೈನ್ 
3. ಕಾಕಿನಾಡ ಬಂದರು- ವಿಶಾಖಪಟ್ಟಣಂ-ಕಾಕಿನಾಡ ಬಂದರು ಸ್ಪೆಷಲ್ ಟ್ರೈನ್ 
4. ತಿತಿಲಘರ್- ಬಿಲಾಸ್ಪೂರ್- ತಿತಿಲಘರ್ ಸ್ಪೆಷಲ್ ಟ್ರೈನ್ 
5. ಗುಣುಪುರ- ವಿಶಾಖಪಟ್ಟಣಂ-ಗುಣುಪುರ ಸ್ಪೆಷಲ್ ಟ್ರೈನ್ 
6 .ರೈಪುರ - ವಿಶಾಖಪಟ್ಟಣಂ - ರಾಯಪುರ ಸ್ಪೆಷಲ್ ಟ್ರೈನ್ 

ಇದನ್ನೂ ಓದಿ : SBI Platinum Deposits : ಸೆಪ್ಟೆಂಬರ್ 14 ರೊಳಗೆ ಎಸ್ ಬಿಐ ಯಲ್ಲಿ ಈ ವಿಶೇಷ ಡಿಪಾಸಿಟ್ ಮಾಡಿಸಿದರೆ ಸಿಗಲಿದೆ ಅಧಿಕ ಬಡ್ಡಿ

ಅನ್ ರಿಸರ್ವಡ್  ರೈಲು ಸೇವೆ ಏಪ್ರಿಲ್‌ನಲ್ಲಿ ಆರಂಭ : 
ಕೊರೊನಾ (Coronavirus) ಹಾವಳಿಯಿಂದ ದೀರ್ಘಕಾಲದಿಂದ ರೈಲ್ವೆ ಪ್ರಯಾಣಿಕರು  ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಪ್ರಯಾಣಿಕರ ಅನುಕೂಲಕ್ಕಾಗಿ, ಭಾರತೀಯ ರೈಲ್ವೇ (Indian Railway) ಈ ವರ್ಷದ ಏಪ್ರಿಲ್‌ನಲ್ಲಿ ಅನ್ ರಿಸರ್ವಡ್  ರೈಲು ಸೇವೆಗಳನ್ನು ಆರಂಭಿಸಿತು. 2021 ರ ಏಪ್ರಿಲ್ 5 ರಿಂದ ರೈಲ್ವೆ 71 ಅನ್ ರಿಸರ್ವಡ್  ರೈಲು (71 Unreserve Train) ಸೇವೆಗಳನ್ನು ಆರಂಭಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News