Big initiative: ರೈಲು ಆಧಾರಿತ ಪ್ರವಾಸೋದ್ಯಮ ವಿಸ್ತರಿಸಲು ಭಾರತೀಯ ರೈಲ್ವೆ ಇಲಾಖೆ ಯೋಚನೆ

ಅರ್ಹತಾ ಮಾನದಂಡಗಳ ಆಧಾರದ ಮೇಲೆ ಆಸಕ್ತರಿಗೆ ಸರಳ ನೋಂದಣಿ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಸಚಿವಾಲಯವು ತಿಳಿಸಿದೆ.

Written by - Zee Kannada News Desk | Last Updated : Sep 12, 2021, 11:15 AM IST
  • ರೈಲು ಆಧಾರಿತ ಪ್ರವಾಸೋಧ್ಯಮವನ್ನು ವಿಸ್ತರಿಸಲು ಭಾರತೀಯ ರೈಲ್ವೆ ಇಲಾಖೆಯಿಂದ ಯೋಜನೆ
  • ಪ್ರವಾಸೋದ್ಯಮ ಕ್ಷೇತ್ರದ ಸಾಮರ್ಥ್ಯ ಮತ್ತು ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನಿರ್ಧಾರ
  • ಅರ್ಹತಾ ಮಾನದಂಡಗಳ ಆಧಾರದ ಮೇಲೆ ಆಸಕ್ತರಿಗೆ ಸರಳ ನೋಂದಣಿ ಪ್ರಕ್ರಿಯೆ ನಡೆಸಲಾಗುವುದು ಎಂದ ಸಚಿವಾಲಯ
Big initiative: ರೈಲು ಆಧಾರಿತ ಪ್ರವಾಸೋದ್ಯಮ ವಿಸ್ತರಿಸಲು ಭಾರತೀಯ ರೈಲ್ವೆ ಇಲಾಖೆ ಯೋಚನೆ title=
ರೈಲು ಆಧಾರಿತ ಪ್ರವಾಸೋದ್ಯಮಕ್ಕೆ ಯೋಜನೆ

ನವದೆಹಲಿ: ರೈಲು ಆಧಾರಿತ ಪ್ರವಾಸೋದ್ಯಮ(Rail Based Tourism)ವನ್ನು ವಿಸ್ತರಿಸಲು ಭಾರತೀಯ ರೈಲ್ವೆ ಇಲಾಖೆ ಶನಿವಾರ (ಸೆ.11) ಮಹತ್ವದ ನಿರ್ಧಾರ ಮಾಡಿದೆ. ಜನಸಾಮಾನ್ಯರ ನಡುವೆ ಕೋಚಿಂಗ್ ಸ್ಟಾಕ್ ಅನ್ನು ಗುತ್ತಿಗೆ ನೀಡುವ ಮೂಲಕ ಆಸಕ್ತರಿಗೆ ಥೀಮ್ ಆಧಾರಿತ ಸಾಂಸ್ಕೃತಿಕ, ಧಾರ್ಮಿಕ ಮತ್ತು ಇತರ ಪ್ರವಾಸಿ ಸರ್ಕ್ಯೂಟ್ ರೈಲುಗಳನ್ನು ನಡೆಸಲು ಪ್ಲಾನ್ ಮಾಡಲಾಗಿದೆ.

ಪ್ರವಾಸೋದ್ಯಮ(Tourism) ಕ್ಷೇತ್ರದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಾದ ಮಾರ್ಕೆಟಿಂಗ್, ಆತಿಥ್ಯ ಮುಂತಾದವುಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ವೃತ್ತಿಪರರ ಪ್ರಮುಖ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ಈ ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ನೀವು ಬಳಸುವ ಅಡುಗೆ ಎಣ್ಣೆ ಶುದ್ದ ತೈಲವೋ ಕಲಬೆರಕೆಯೋ ಮನೆಯಲ್ಲಿಯೇ ಸುಲಭವಾಗಿ ಪರೀಕ್ಷಿಸಿಕೊಳ್ಳಿ

ರೈಲು ಆಧಾರಿತ ಪ್ರವಾಸೋದ್ಯಮ(Rail Based Tourism)ದ ವಿಸ್ತರಣೆಗೆ ನೀತಿ, ನಿಯಮಗಳು ಮತ್ತು ಷರತ್ತುಗಳನ್ನು ರೂಪಿಸಲು ಕೇಂದ್ರ ರೈಲ್ವೆ ಸಚಿವಾಲಯದಿಂದ ಕಾರ್ಯನಿರ್ವಾಹಕ ನಿರ್ದೇಶಕರ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ರೈಲ್ವೆ ಸಚಿವಾಲಯದ ಪ್ರಕಾರ, ಪ್ರಸ್ತಾವಿತ ಮಾದರಿಯು ಆಸಕ್ತರಿಗೆ(ಕಂಪನಿ ಅಥವಾ ಉದ್ಯಮಿಗಳು)ಅಪೇಕ್ಷಿತ ಸಂರಚನೆಯ ಪ್ರಕಾರ ಕೋಚ್‌ಗಳ ಗುತ್ತಿಗೆ ಪಡೆದುಕೊಳ್ಳಬಹುದು. ಕೋಚ್‌ಗಳ ಸಂಪೂರ್ಣ ಖರೀದಿಯನ್ನು ಸಹ ಮಾಡಬಹುದು.

ಈ ಗುತ್ತಿಗೆಯನ್ನು ಕನಿಷ್ಠ 5 ವರ್ಷಗಳವರೆಗೆ ಮಾಡಲಾಗುವುದು ಮತ್ತು ಕೋಡಲ್ ಕೋಚ್‌ಗಳನ್ನು ಜೀವಿತಾವಧಿಯವರೆಗೂ ವಿಸ್ತರಿಸಬಹುದು ಎಂದು ಸಚಿವಾಲಯ(Ministry of Railways) ಹೇಳಿದೆ. ಪ್ರಸ್ತಾವಿತ ಮಾದರಿಯು ನೀತಿ ಮಾರ್ಗಸೂಚಿಗಳ ಪ್ರಕಾರ ಗುತ್ತಿಗೆ ಉದ್ದೇಶಗಳಿಗಾಗಿ ಕನಿಷ್ಠ ರೈಲು ಸಂಯೋಜನೆಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Patiala: ಮನೆಯಲ್ಲಿನ ಸ್ಪೋಟದಿಂದ 12 ವರ್ಷದ ಬಾಲಕಿ ಸಾವು, 3 ಮಕ್ಕಳಿಗೆ ಗಾಯ

ಅರ್ಹತಾ ಮಾನದಂಡಗಳ ಆಧಾರದ ಮೇಲೆ ಆಸಕ್ತರಿಗೆ ಸರಳ ನೋಂದಣಿ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಸಚಿವಾಲಯವು ತಿಳಿಸಿದೆ. ಭಾರತೀಯ ರೈಲ್ವೆಗಳು(Indian Railways) ಸಾಗಾಣಿಕೆ ಶುಲ್ಕಗಳು, ನಾಮಮಾತ್ರದ ಸ್ಥಿರತೆ ಶುಲ್ಕಗಳು ಮತ್ತು ಗುತ್ತಿಗೆ ಶುಲ್ಕಗಳನ್ನು ವಿಧಿಸುತ್ತವೆ.

ಸಚಿವಾಲಯದ ಪ್ರಕಾರ, ಪ್ರಸ್ತಾವಿತ ಮಾದರಿಯ ಕೆಲವು ಪ್ರಮುಖ ಲಕ್ಷಣಗಳೆಂದರೆ ಸಮಯಪ್ರಜ್ಞೆ ಅದರ ಮುಖ್ಯ ಆದ್ಯತೆಯಾಗಿರುತ್ತದೆ. ಕೋಚ್‌ಗಳ ನವೀಕರಣ ಮತ್ತು ಪ್ರವಾಸಗಳಿಗೆ ಸಕಾಲಿಕ ಅನುಮೋದನೆಗಳನ್ನು ನೀಡಲಾಗುವುದು. ಪ್ರಸ್ತಾವಿತ ಮಾದರಿಯು ರೈಲಿನೊಳಗೆ ಥರ್ಡ್ ಪಾರ್ಟಿ ಜಾಹೀರಾತನ್ನು ಸಹ ಅನುಮತಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News