ಭಾರತದ ಮಹಾ ಲಸಿಕೆ ಅಭಿಯಾನಕ್ಕೆ ಮಹಾ ವಿಘ್ನ.! ಪರಿಹಾರ ಏನು..?
ನಮ್ಮಲ್ಲಿ ತಕ್ಕ ಪ್ರಮಾಣದ ವ್ಯಾಕ್ಸಿನ್ ಲಭ್ಯ ಇಲ್ಲ ಎಂದು ಹೇಳಿ ದೆಹಲಿ, ರಾಜಾಸ್ತಾನ, ಛತ್ತೀಸ್ ಘಡ, ಮಧ್ಯಪ್ರದೇಶ, ಪಂಜಾಬ್, ಒಡಿಶಾ, ಜಮ್ಮು ಕಾಶ್ಮೀರ ಮತ್ತು ಬಿಹಾರ ರಾಜ್ಯಗಳು ಕೈಚೆಲ್ಲಿ ಕುಳಿತಿವೆ. ಮೇ 1 ರಿಂದಲೇ ಲಸಿಕೆ ಅಭಿಯಾನ ಶುರುವಾಗಲಿದೆ ಎನ್ನುವದರ ಬಗ್ಗೆ ರಾಜ್ಯಗಳು ಖಚಿತವಾಗಿ ಏನನ್ನೂ ಹೇಳುತ್ತಿಲ್ಲ.
ನವದೆಹಲಿ: ಕರೋನಾ (Coronavirus) ವಿರುದ್ಧ ಮಹಾ ಅಸ್ತ್ರ ಪ್ರಯೋಗಿಸಿರುವ ಕೇಂದ್ರ ಸರ್ಕಾರ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸುವ ಘೋಷಣೆ ಮಾಡಿದೆ. ಕೊವಿನ್ ಆಪ್ ನಲ್ಲಿ (CoWin) ಲಸಿಕೆಯ ರಿಜೆಸ್ಟ್ರೇಶನ್ ಕೂಡಾ ಭರದಿಂದ ಸಾಗಿದೆ. 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡುವುದೆಂದರೆ ಸುಮಾರು 59 ಕೋಟಿ ಜನರಿಗೆ ಲಸಿಕೆ ಚುಚ್ಚುವ ಮಹಾ ಅಭಿಯಾನ ಅದು. ಈಗ ಎದುರಾಗಿರುವ ಮಹಾ ಪ್ರಶ್ನೆ ಎಂದರೆ, ಅಷ್ಟೊಂದು ದೊಡ್ಡ ಪ್ರಮಾಣದ ಲಸಿಕೆ (Vaccine) ಸರ್ಕಾರದ ಬಳಿ ಇದೆಯಾ ಎನ್ನುವುದು. 59 ಕೋಟಿ ಜನರಿಗೆ ಎರಡು ಡೋಸ್ ಲಸಿಕೆ ಅಂದರೆ, 118 ಕೋಟಿ ಡೋಸ್ ಲಸಿಕೆ, ಸಿರಿಂಜ್ ಬೇಕಾಗುತ್ತದೆ. ಅಷ್ಟೊಂದು ದೊಡ್ಡ ಪ್ರಮಾಣದ ಸಿದ್ದತೆ ಸರ್ಕಾರ ನಡೆಸಿದೆಯಾ ಅನ್ನೋದು ಈಗಿನ ಪ್ರಶ್ನೆ.
ಕೈಚೆಲ್ಲಿದ ಹಲವು ರಾಜ್ಯಗಳು :
ನಮ್ಮಲ್ಲಿ ತಕ್ಕ ಪ್ರಮಾಣದ ವ್ಯಾಕ್ಸಿನ್ (Vaccine) ಲಭ್ಯ ಇಲ್ಲ ಎಂದು ಹೇಳಿ ದೆಹಲಿ, ರಾಜಾಸ್ತಾನ, ಛತ್ತೀಸ್ ಘಡ, ಮಧ್ಯಪ್ರದೇಶ, ಪಂಜಾಬ್, ಒಡಿಶಾ, ಜಮ್ಮು ಕಾಶ್ಮೀರ ಮತ್ತು ಬಿಹಾರ ರಾಜ್ಯಗಳು ಕೈಚೆಲ್ಲಿ ಕುಳಿತಿವೆ. ಮೇ 1 ರಿಂದಲೇ ಲಸಿಕೆ ಅಭಿಯಾನ ಶುರುವಾಗಲಿದೆ ಎನ್ನುವದರ ಬಗ್ಗೆ ರಾಜ್ಯಗಳು ಖಚಿತವಾಗಿ ಏನನ್ನೂ ಹೇಳುತ್ತಿಲ್ಲ. ಲಸಿಕೆಗಾಗಿ ಬಂಪರ್ ರೆಜಿಸ್ಟ್ರೇಶನ್ ಆಗಿದೆ. ಆದರೆ ಲಸಿಕೆ ಲಭ್ಯ ಇಲ್ಲ. ಹೀಗಾಗಿ, ಮಧ್ಯಪ್ರದೇಶ ಸರ್ಕಾರ ಮೇ 3 ರಿಂದ ಲಸಿಕೆ ಅಭಿಯಾನ ಶುರುಮಾಡುವ ಮಾತು ಹೇಳಿದೆ. ಲಸಿಕೆ ಎಲ್ಲರಿಗೂ ಫ್ರೀಯಾಗಿ ನೀಡಲಾಗುತ್ತಿದೆ.
ಇದನ್ನೂ ಓದಿ : ಕರೋನಾ ಮೂರನೇ ಅಲೆಯ ಭಯ.! ಮಹಾರಾಷ್ಟ್ರ ಸರ್ಕಾರ ಮಾಡುತ್ತಿರುವುದೇನು ಗೊತ್ತಾ..?
ಬಿಹಾರದಲ್ಲೂ (Bihar) ಇದೆ ಸ್ಥಿತಿ. ಜಾರ್ಖಂಡ್ ಸರ್ಕಾರ ಕೂಡಾ ಕೈ ಚೆಲ್ಲಿ ಕುಳಿತಿದೆ. ಮೇ 1 ರಿಂದ ಲಸಿಕೆ ಅಭಿಯಾನ ಆರಂಭಿಸುವ ಪ್ರಯತ್ನ ಮಾಡುತ್ತೇವೆ, ಆದರೆ ನಮ್ಮಲ್ಲಿ ಬೇಕಾದಷ್ಟು ವ್ಯಾಕ್ಸಿನ್ ಲಭ್ಯತೆ ಇಲ್ಲ ಎಂದಿದೆ ಗುಜರಾತ್ (Gujrat) ಸರ್ಕಾರ.
ದೆಹಲಿ ಸ್ಥಿತಿ ಅಸ್ಪಷ್ಟ :
ಮೂರು ತಿಂಗಳಿನೊಳಗೆ ದೆಹಲಿಯ (Delhi) ಎಲ್ಲಾ ನಾಗರಿಕರಿಗೂ ಲಸಿಕೆ ಚುಚ್ಚುವ ಪ್ಲಾನ್ ಮಾಡಿಕೊಂಡಿದೆ ದೆಹಲಿ ಸರ್ಕಾರ. ಆದರೆ ಬೇಕಾದಷ್ಟು ವ್ಯಾಕ್ಸಿನ್ ಇನ್ನೂ ದೆಹಲಿಯಲ್ಲಿ ಲಭ್ಯ ಇಲ್ಲ. ಆದರೆ, ಲಭ್ಯ ಮಾಹಿತಿಗಳ ಪ್ರಕಾರ ದೆಹಲಿಯಲ್ಲಿ ಯುವಕರಿಗೆ ಲಸಿಕೆ ಚುಚ್ಚುವ ಅಭಿಯಾನವನ್ನು ದೆಹಲಿ ಸರ್ಕಾರ ಮುಂದೂಡುವ ಸಾಧ್ಯತೆಗಳಿವೆ. ಮಹಾರಾಷ್ಟ್ರ (Maharastra) ಸರ್ಕಾರ ಕೂಡಾ ಲಸಿಕೆಯ ಕೊರತೆಯ ವಿಚಾರ ಎತ್ತಿದೆ. ಲಸಿಕೆ ಚುಚ್ಚುವ ಅಭಿಯಾನ ಮೇ 5 ರ ಬಳಿಕ ಆರಂಭಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ : ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಶರೀರದಲ್ಲಿ ವ್ಯಾಕ್ಸಿನ್ ಕೆಲಸ ಮಾಡುತ್ತಿದೆ ಎಂದರ್ಥ
ಕರ್ನಾಟಕದಲ್ಲಿ ಏನು..?
ಕರ್ನಾಟಕ ಸರ್ಕಾರ ಕೂಡಾ ಮೇ 1 ರಿಂದ ಮಹಾ ಲಸಿಕೆ ಅಭಿಯಾನಕ್ಕೆ ಸಿದ್ದತೆ ಮಾಡಿಕೊಂಡಿದೆ. ಇಲ್ಲೂ ಕೂಡಾ ಬೇಕಾದಷ್ಟು ಪ್ರಮಾಣ ಲಸಿಕೆ ಲಭ್ಯ ಇಲ್ಲ. ಬೆಂಗಳೂರಿನ (Bengaluru) ಬಗ್ಗೆ ಮಾತಾಡಿದರೆ, 18 ರಿಂದ 45ರ ವಯೋಮಾನದ 45 ಲಕ್ಷ ಜನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದಾರೆ. 45ರ ಮೇಲ್ಪಟ್ಟವರ ಸಂಖ್ಯೆ 21 ಲಕ್ಷ ಇದೆ. ಬೆಂಗಳೂರು ನಗರ ಒಂದರಲ್ಲೇ 66 ಲಕ್ಷ ಜನರಿಗೆ ವ್ಯಾಕ್ಸಿನ್ ಹಾಕಬೇಕಿದೆ. ಅಷ್ಟೊಂದು ಪ್ರಮಾಣದ ಲಸಿಕೆ ರಾಜಧಾನಿಯಲ್ಲೂ ಇಲ್ಲ ಎನ್ನಲಾಗಿದೆ. ಲಸಿಕೆ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಡಾ ಕೆ ಸುಧಾಕರ್,(Dr K Sudhakar) ಸೆರಮ್ ಕಂಪನಿಯಿಂದ ಇನ್ನೂ ರಾಜ್ಯಕ್ಕೆ ಲಸಿಕೆ ಪೂರೈಕೆಯಾಗಿಲ್ಲ ಎಂದು ಹೇಳಿದ್ದಾರೆ. ಇವನ್ನೆಲ್ಲಾ ನೋಡಿದರೆ ಕರ್ನಾಟಕದಲ್ಲೂ ಲಸಿಕೆ ಅಭಿಯಾನ ವಿಳಂಬವಾಗುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.