8ನೇ ತರಗತಿ ಪಾಸ್ ಆಯಿತು ಮೂರು ದಿನದ ಹಸುಗೂಸು ..!

 ಪ್ರಿನ್ಸ್ ಕುಮಾರ್ ಎಂಬ ಬಾಲಕ ಮಾರ್ಚ್ 23, 2007 ರಂದು ಮುಜಾಫರ್ಪುರದ ಗೋಸೈದಾಸ್ ತೆಂಗರಿ ಸರ್ಕಾರಿ ಶಾಲೆಯಲ್ಲಿ  8 ನೇ ತರಗತಿಯನ್ನು ಪಾಸು ಮಾಡಿದ್ದಾನೆ. ನಂತರ ಮುಂದಿನ ತರಗತಿಗೆ ಬೇರೆ ಶಾಲೆಗೆ ಹೋಗಬೇಕೆಂದು, ಶಾಲೆಯಲ್ಲಿ ಟಿಸಿ ಕೇಳಿದ್ದಾನೆ.

Written by - Ranjitha R K | Last Updated : Apr 9, 2021, 02:45 PM IST
  • 3 ದಿನಗಳ ಹಸುಗೂಸು ೮ನೇ ತರಗತಿ ಪಾಸ್
  • ಟ್ರಾನ್ಸ್ಫರ್ ಸರ್ಟಿಫಿಕೇಟ್ ನಲ್ಲಿ ಉಲ್ಲೇಖವಾಗಿರುವ ದಿನಾಂಕ ಇದು
  • ಶಾಲೆಯ ವಿರುದ್ಧ ಜಿಲ್ಲಾ ಶಿಕ್ಷಣಾಧಿಕಾರಿ ಕ್ರಮ
8ನೇ ತರಗತಿ ಪಾಸ್ ಆಯಿತು ಮೂರು ದಿನದ ಹಸುಗೂಸು ..! title=
3 ದಿನಗಳ ಹಸುಗೂಸು ೮ನೇ ತರಗತಿ ಪಾಸ್ (photo reuters)

ಪಾಟ್ನಾ : ಬಿಹಾರದಲ್ಲಿ ಎಲ್ಲರೂ ಹುಬ್ಬೇರಿಸುವಂಥಹ ಘಟನೆ ನಡೆದಿದೆ. ಇಲ್ಲಿ 3 ದಿನಗಳ ಹಸುಗೂಸು ೮ನೇ ತರಗತಿ ಪಾಸ್ ಮಾಡಿರುವ ಆಶ್ಚರ್ಯಕರ ಘಟನೆ ಬೆಳೆಕಿಗೆ ಬಂದಿದೆ.  ಇಷ್ಟಕ್ಕೂ  ಈ ಎಡವಟ್ಟಿಗೆ ಕಾರಣವಾಗಿದ್ದು, ಶಿಕ್ಷಣ ಸಂಸ್ಥೆಯೊಂದು ನೀಡಿದ ಟ್ರಾನ್ಸ್ಫರ್ ಸರ್ಟಿಫಿಕೇಟ್ (Transfer Certificate). ಅದರ ಪ್ರಕಾರ 3 ದಿನಗಳ ಮಗು 8 ನೇ ತರಗತಿಯಲ್ಲಿ ಉತ್ತೀರ್ಣವಾಗಿದೆ ಎಂದು ದಾಖಲಾಗಿದೆ.  ಈ ವರ್ಗಾವಣೆ ಪ್ರಮಾಣಪತ್ರದ ಪ್ರಕಾರ, ವಿದ್ಯಾರ್ಥಿಯು ಮಾರ್ಚ್ 20, 2007 ರಂದು ಜನಿಸಿದ್ದು, ಮಾರ್ಚ್ 23, 2007 ರಂದು 8 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ನಮೂದಿಸಲಾಗಿದೆ. 

ವರ್ಗಾವಣೆ ಪ್ರಮಾಣಪತ್ರದಲ್ಲಿ ದೊಡ್ಡ ಪ್ರಮಾದ : 
 ಪ್ರಿನ್ಸ್ ಕುಮಾರ್ ಎಂಬ ಬಾಲಕ ಮಾರ್ಚ್ 23, 2007 ರಂದು ಮುಜಾಫರ್ಪುರದ ಗೋಸೈದಾಸ್ ತೆಂಗರಿ ಸರ್ಕಾರಿ ಶಾಲೆಯಲ್ಲಿ  8 ನೇ ತರಗತಿಯನ್ನು ಪಾಸು ಮಾಡಿದ್ದಾನೆ. ನಂತರ ಮುಂದಿನ ತರಗತಿಗೆ ಬೇರೆ ಶಾಲೆಗೆ ಹೋಗಬೇಕೆಂದು, ಶಾಲೆಯಲ್ಲಿ (School) ಟಿಸಿ ಕೇಳಿದ್ದಾನೆ. ಶಾಲೆಯಲ್ಲಿ ಬಾಲಕನ ಟಿಸಿ (TC) ನೀಡುವಾಗ ಸರ್ಟಿಫಿಕೇಟ್ ನಲ್ಲಿ (certificate) ಆತನ ಜನ್ಮ ದಿನಾಂಕವನ್ನು ಮಾರ್ಚ್ 20, 2007 ರಂದು ಬರೆಯಲಾಗಿದೆ. 

ಇದನ್ನೂ ಓದಿ : Indian Railways: ಈ 6 ನಿಲ್ದಾಣಗಳಲ್ಲಿ ಸಿಗಲ್ಲ ಪ್ಲಾಟ್‌ಫಾರ್ಮ್ ಟಿಕೆಟ್‌

ಶಾಲೆಯ ವಿರುದ್ಧ ಜಿಲ್ಲಾ ಶಿಕ್ಷಣಾಧಿಕಾರಿ ಕ್ರಮ :
ವಿಶೇಷವೆಂದರೆ, ಈ ಸರ್ಟಿಫಿಕೇಟ್ ಗೆ ಶಾಲೆಯ ಪ್ರಾಂಶುಪಾಲರು  ಕೂಡಾ ಸಹಿ ಹಾಕಿದ್ದಾರೆ. ಇದನ್ನು ಕೇಳಲು ಹೋದ ಬಾಲಕನನ್ನು ಶಾಲೆಯಿಂದ ಹೊರ ಹಾಕಿದ್ದಾರೆ.  ಇದಾದ ನಂತರ ಬಾಲಕನ ತಂದೆ ಜಿಲ್ಲಾ ಶಿಕ್ಷಣಾಧಿಕಾರಿಯನ್ನು (DEO) ಸಂಪರ್ಕಿಸಿದ್ದಾರೆ. ಅಲ್ಲಿ ಈ ತಪ್ಪು ಹಲ ಸಿಬ್ಬಂದಿಯಿಂದ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಅದನ್ನು ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ. ಶಾಲೆಯ ವಿರುದ್ಧ  ಇಲಾಖಾ ಕ್ರಮವನ್ನೂ ಪ್ರಾರಂಭಿರುವುದಾಗಿ ತಿಳಿಸಿದ್ದಾರೆ. 

ಇದನ್ನೂ ಓದಿ : Viral Video: ಮನುಷ್ಯನ ಮುಖ ಹೋಲುವ ಮೇಕೆ ಮರಿ ಜನನ 'ದೇವರ ಅವತಾರ' ಎಂದು ಪೂಜಿಸುತ್ತಿರುವ ಜನ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News