ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 61,871 ಹೊಸ ಪ್ರಕರಣಗಳು ಮತ್ತು 1,033 ಸಾವುಗಳು ದಾಖಲಾದ ನಂತರ ಭಾರತದ ಕೊರೊನಾವೈರಸ್ ಪ್ರಕರಣಗಳ (ಕೋವಿಡ್ -19) ಸಂಖ್ಯೆ 7,494,551 ಕ್ಕೆ ಏರಿದೆ.


COMMERCIAL BREAK
SCROLL TO CONTINUE READING

ಕಳೆದ ವಾರದಲ್ಲಿ ವರದಿಯಾದ ಹೊಸ ಸೋಂಕುಗಳ ಸಂಖ್ಯೆ 70,000 ಕ್ಕಿಂತ ಕಡಿಮೆ ಇದೆ, ಅಕ್ಟೋಬರ್ 13 ರಂದು ಇದು 55,342 ರಷ್ಟಿದೆ ಎಂದು ಡೇಟಾ ತೋರಿಸುತ್ತದೆ.


ಕೇವಲ ಒಬ್ಬ ಪ್ರವಾಸಿಗನಿಗಾಗಿ ತೆರದ ಈ ವಿಶ್ವವಿಖ್ಯಾತ ತಾಣ..! ಕಾರಣವೇನು ಗೊತ್ತೇ ?


ಸೋಂಕಿನ ಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿರುವ ಭಾರತದಲ್ಲಿ ಕಳೆದ ವಾರದಲ್ಲಿ 374,013 ಕೋವಿಡ್ -19 ಪ್ರಕರಣ ದಾಖಲಾಗಿವೆ. ಆದಾಗ್ಯೂ,ಭಾನುವಾರದಂದು ಸಾವುಗಳ ಸಂಖ್ಯೆ 1000ಕ್ಕೂ ಅಧಿಕ ಇದ್ದರೂ ಉಳಿದ ದಿನಗಳಾದ ಸೋಮವಾರ ಮತ್ತು ಶನಿವಾರದ ನಡುವೆ 900 ಕ್ಕಿಂತ ಕಡಿಮೆ ದಾಖಲಾಗಿವೆ.


ಭಾರತದ ಅರ್ಧದಷ್ಟು ಕೊರೊನಾ ಚೇತರಿಕೆ ಪ್ರಕರಣಗಳು 5 ರಾಜ್ಯಗಳಿಂದ ಬಂದಿವೆ: ಕೇಂದ್ರ ಆರೋಗ್ಯ ಸಚಿವಾಲಯ


ಅಕ್ಟೋಬರ್ 15 ರಂದು, ದೇಶಾದ್ಯಂತ 680 ಕೋವಿಡ್ -19 ರೋಗಿಗಳು ಬಲಿಯಾಗಿದ್ದಾರೆ ಇದು ವಾರದಲ್ಲಿ ಇದು ಅತ್ಯಂತ ಕಡಿಮೆ ಎನ್ನಬಹುದು. ಭಾರತದ ಸಾವಿನ ಸಂಖ್ಯೆ ಈಗ 114,031 ರಷ್ಟಿದೆ, ಎಂದು ಆರೋಗ್ಯ ಸಚಿವಾಲಯದ ಉಲ್ಲೇಖಿಸಿದೆ.ಕಳೆದ 24 ಗಂಟೆಗಳಲ್ಲಿ 72,614 ಜನರು ಕೊರೊನಾದಿಂದ ಗುಣಮುಖರಾಗಿದ್ದರಿಂದ ಚೇತರಿಕೆಯ ಸಂಖ್ಯೆಯೂ 6,597,209 ಕ್ಕೆ ಏರಿದೆ,. ವಾರದಲ್ಲಿ 447,674 ಚೇತರಿಕೆಗಳಾಗಿವೆ.