ನವದೆಹಲಿ: ಇನ್ಫೋಸಿಸ್ ಷೇರುಗಳು ಮಂಗಳವಾರದಂದು ಶೇಕಡಾ 16ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ, ಇದರಿಂದಾಗಿ ಹೂಡಿಕೆದಾರರ 53,000 ಕೋಟಿ ರೂ. ನಷ್ಟವಾಗಿದೆ.


COMMERCIAL BREAK
SCROLL TO CONTINUE READING

ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾಗಿರುವ ಇನ್ಫೋಸಿಸ್ ಸೆನ್ಸೆಕ್ಸ್ ನಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದ್ದು, ಸಂಸ್ಥೆಯ ನೌಕರರು ಎಂದು ಹೇಳಿಕೊಳ್ಳುತ್ತಿರುವ ಅನಾಮಧೇಯ ಗುಂಪೊಂದು ಸೋಮವಾರ ಕಂಪನಿಯ ಮಂಡಳಿಗೆ ವಿಸ್ಲ್ ಬ್ಲೋವರ್ ದೂರು ನೀಡಿದ ನಂತರ ಇನ್ಫೋಸಿಸ್ ಶೇರುಗಳಲ್ಲಿ ತೀವ್ರ ಕುಸಿತ ಕಂಡು ಬಂದಿದೆ.ದೂರುದಾರರ ಪ್ರಕಾರ ಕಂಪನಿ ಸಿಇಒ ಸಲೀಲ್ ಪರೇಖ್ ಮತ್ತು ಸಿಎಫ್‌ಒ ನೀಲಾಂಜನ್ ರಾಯ್ ಅವರು ಅಲ್ಪಾವಧಿಯ ಆದಾಯ ಮತ್ತು ಲಾಭವನ್ನು ಹೆಚ್ಚಿಸಲು ಅನೈತಿಕ ಅಭ್ಯಾಸಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.


ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಇನ್ಪೋಸಿಸ್ 'ದೂರುಗಳನ್ನು ಕಂಪನಿಯ ಅಭ್ಯಾಸದ ಪ್ರಕಾರ ಲೆಕ್ಕಪರಿಶೋಧನಾ ಸಮಿತಿಯ ಮುಂದೆ ಇಡಲಾಗಿದೆ ಮತ್ತು ಕಂಪನಿಯ ವಿಸ್ಲ್ ಬ್ಲೋವರ್ ನೀತಿಗೆ ಅನುಗುಣವಾಗಿ ಅವುಗಳನ್ನು ಪರಿಗಣಿಸಲಾಗುವುದು' ಎಂದು ಸೋಮವಾರ ನಿಯಂತ್ರಕ ಸಲ್ಲಿಕೆಯೊಂದರಲ್ಲಿ ತಿಳಿಸಿದೆ.


ಇನ್ಫೋಸಿಸ್ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ರೂ. ಮಂಗಳವಾರ 2.74 ಲಕ್ಷ ಕೋಟಿ ರೂ. ತಲುಪಿದೆ. ಅದು ಈ ಹಿಂದೆ 3.27 ಲಕ್ಷ ಕೋಟಿ ರೂ.ರಷ್ಟು ಇತ್ತು ಎನ್ನಲಾಗಿದೆ. ಇನ್ಫೊಸಿಸ್ ಷೇರುಗಳು ಮಂಗಳವಾರದಾಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ 16.86 ರಷ್ಟು 643.30 ರೂ.ಗೆ ಕೊನೆಗೊಂಡಿವೆ, ಹಿಂದಿನ ಕ್ಲೋಸ್‌ಗೆ ಹೋಲಿಸಿದರೆ 16.21 ರಷ್ಟು ಕಡಿಮೆಯಾಗಿದೆ. ಇನ್ಫೋಸಿಸ್ ಶೇರುಗಳು ನಿಫ್ಟಿಯಲ್ಲಿ 640 ರೂಪಾಯಿಯಂತೆ ಶೇಕಡಾ 16.65ಕ್ಕೆ ಕೊನೆಗೊಂಡಿವೆ.