ನವದೆಹಲಿ:  ಮಧ್ಯಂತರ ಬಜೆಟ್ ಭಾಷಣದ ವೇಳೆ ಕೈಗಾರಿಕೆಯಲ್ಲಿನ ಸ್ಥಿರ ಬೆಳವಣಿಗೆಯಿಂದಾಗಿ ಉದ್ಯೋಗದ ಪ್ರಮಾಣ ಹೆಚ್ಚಳವಾಗಿದೆ.ಇಪಿಎಫ್ಒ ಸದಸ್ಯತ್ವದ ಪ್ರಕಾರ ಎರಡು ಕೋಟಿ ಹೆಚ್ಚಳವಾಗಿದೆ.ಆ ಮೂಲಕ ಅರ್ಥಿಕ ಅಭಿವೃದ್ದಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ ಎಂದು ಹಣಕಾಸು ಸಚಿವರು ತಿಳಿಸಿದರು.


COMMERCIAL BREAK
SCROLL TO CONTINUE READING

-ಕೇಂದ್ರ 7ನೇ ವೇತನ ಆಯೋಗದ ವರದಿ ಮಾಡಿದ ಶಿಫಾರಸ್ಸುಗಳ್ಳನ್ನು ಬೇಗನೆ ಒಪ್ಪಿಕೊಳ್ಳಲಾಗಿದೆ.ನೂತನ ಪೆನ್ಸೇನ್ ಯೋಜನೆಯನ್ನು ಸರಳಿಕರಿಸಲಾಗಿದೆ.ಸದ್ಯ ಕಾರ್ಮಿಕರ ಶೇ 10 ರಷ್ಟು ಕೊಡುಗೆಯ ಜೊತೆಗೆ ಸರ್ಕಾರ ಶೇ 4 ರಷ್ಟು ಕೊಡುಗೆಯನ್ನು ನೀಡಲಿದೆ.ಇದರಿಂದ ಒಟ್ಟು ಶೇ 14 ರಷ್ಟು ಏನ್ಪಿಎಸ್ ಆಗಲಿದೆ.


-ಇನ್ನು ಗ್ಯಾಚೂಟಿಯನ್ನು ಸಹ 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಲಾಗಿದೆ.


-ಕಾರ್ಮಿಕರಿಗೆ ನೀಡುವ ಗರಿಷ್ಟ ದರ ಬೋನಸ್ ದರ ರೂಪಾಯಿ 3500 ರಿಂದ 7000 ಕ್ಕೆ ಏರಿಕೆಯಾಗಲಿದೆ.


-ಕನಿಷ್ಠ ನಿವೃತ್ತಿ ಮಾಸಾಶನ ಇನ್ನು ಮುಂದೆ ಪ್ರತಿ ತಿಂಗಳಿಗೆ 1 ಸಾವಿರ ರೂ ಆಗಲಿದೆ.ಕೆಲಸದ ವೇಳೆಯಲ್ಲಿ ಕಾರ್ಮಿಕನು ಮೃತಪಟ್ಟಿದ್ದೆ ಆದಲ್ಲಿ ಇಪಿಎಫ್ಓದಿಂದ ಮೃತ ಕುಟುಂಬಕ್ಕೆ ನೀಡುವ ಹಣ 2.5 ಲಕ್ಷದಿಂದ 6 ಲಕ್ಷಕ್ಕೆ ಏರಿಕೆಯಾಗಲಿದೆ.


-ಇನ್ನು ಅಂಗನವಾಡಿ ಮತ್ತು ಆಶಾ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕಾರ್ಮಿಕರಿಗೆ ಗೌರವ ಧನ ಇನ್ನು ಮುಂದೆ ಶೇ 50 ರಷ್ಟು ಏರಿಕೆಯಾಗಲಿದೆ ಎಂದು ಹಣಕಾಸು ಸಚಿವರು ಘೋಷಿಸಿದರು. 


-ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಒಟ್ಟು 42 ಕೋಟಿ ಕಾರ್ಮಿಕರನ್ನು ಆಯುಷ್ಮಾನ್ ಭಾರತ, ಪ್ರಧಾನ್ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನಾ,ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಜೊತೆಗೆ ಅವರನ್ನು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂದನ್ ಎನ್ನುವ ಯೋಜನೆ ಅಡಿಯಲ್ಲಿ ತರುವ ಮೂಲಕ ಅವರೆಲ್ಲರು 60ನೇ ವಯಸ್ಸಿನಲ್ಲಿ 3 ಸಾವಿರ ಮಾಸಿಕ ಮಾಸಾಶನವನ್ನು ಪಡೆಯುವ ಯೋಜನೆಯನ್ನು ಘೋಷಿಸಲಾಯಿತು.ಆದರೆ, ಇದಕ್ಕೆ ಕಾರ್ಮಿಕ ಪ್ರತಿ ತಿಂಗಳು 100 ರೂಗಳನ್ನು ಉಳಿತಾಯವನ್ನು ಮಾಡಬೇಕು.ಆಗ ಅಸಂಘಟಿತ ಕಾರ್ಮಿಕರಿಗೆ 60 ವರ್ಷದ ನಂತರ ಪ್ರತಿ ತಿಂಗಳು 3000 ಸಾವಿರ ರೂ ದೊರೆಯಲಿದೆ.