ನವದೆಹಲಿ: ಯಾರೇ ಆದರೂ ಹಣ ಹೂಡಿಕೆ ಮಾಡುವಾಗ ಯಾವ ಯೋಜನೆಯಲ್ಲಿ ಹೆಚ್ಚಿನ ಆದಾಯ ಸಿಗಲಿದೆ ಎಂಬುದನ್ನು ಯೋಚಿಸುತ್ತಾರೆ. ಹೆಚ್ಚು ಆದಾಯ ನೀಡುವಂತಹ ಹಲವು ಹೂಡಿಕೆಯ ಆಯ್ಕೆಗಳಿವೆ. ಅಂತಹದರಲ್ಲೇ ಒಂದು ಸಣ್ಣ ಉಳಿತಾಯ ಯೋಜನೆ, ಇದರಲ್ಲಿ ನೀವು ಹಣವನ್ನು ಹೂಡಿಕೆ ಮಾಡಿ ಪ್ರತಿ ತಿಂಗಳು ಗಳಿಸುವ ಅವಕಾಶವನ್ನು ಪಡೆಯುತ್ತೀರಿ. 


COMMERCIAL BREAK
SCROLL TO CONTINUE READING

ಅಂಚೆ ಕಚೇರಿ (Post Office) ಯ ಮಾಸಿಕ ಆದಾಯ ಯೋಜನೆ (MIS) ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಗಳಿಸಬಹುದು. ಎಂಐಎಸ್ ಖಾತೆಯ ಮೆಚ್ಯುರಿಟಿ ಅವಧಿ ಐದು ವರ್ಷ. ಇದರಲ್ಲಿ ಖಾತೆದಾರನು ಠೇವಣಿ ಮಾಡಿದ ಒಟ್ಟು ಮೊತ್ತಕ್ಕೆ ಪ್ರತಿ ತಿಂಗಳು ಬಡ್ಡಿ ಪಡೆಯುತ್ತಾನೆ. ಇಂಡಿಯಾ ಪೋಸ್ಟ್ ಪ್ರಕಾರ ಈ ಯೋಜನೆಯು 01.04 .2020 ರಿಂದ ವಾರ್ಷಿಕವಾಗಿ 6.6 ಶೇಕಡಾ ಬಡ್ಡಿಯನ್ನು ಪಡೆಯುತ್ತಿದೆ. ಇದನ್ನು ಪ್ರತಿ ತಿಂಗಳು ಪಾವತಿಸಲಾಗುತ್ತದೆ.


ಎಂಐಎಸ್ ಯೋಜನೆ ಎಂದರೇನು?
ಎಂಐಎಸ್ ಯೋಜನೆಯಲ್ಲಿ ವ್ಯಕ್ತಿಯು ಬಯಸಿದರೆ ವೈಯಕ್ತಿಕ ಅಥವಾ ಜಂಟಿ ಖಾತೆಯನ್ನೂ ತೆರೆಯಬಹುದು. ವೈಯಕ್ತಿಕ ಖಾತೆ ತೆರೆಯುವಾಗ ನೀವು ಈ ಯೋಜನೆಯಲ್ಲಿ ಕನಿಷ್ಠ 1,000 ರೂ. ಮತ್ತು ಗರಿಷ್ಠ 4.5 ಲಕ್ಷ ರೂ. ಠೇವಣಿ ಮಾಡಬಹುದು. ಆದರೆ ಜಂಟಿ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿಗಳವರೆಗೆ ಜಮಾ ಮಾಡಬಹುದು. ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರಿಗೆ ಈ ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ.


ಪ್ರಯೋಜನಗಳು ಯಾವುವು?
ಎಂಐಎಸ್ ಖಾತೆಯ ಮತ್ತೊಂದು ವಿಶೇಷ ಸೌಲಭ್ಯ ಎಂದರೆ ಈ ಖಾತೆಯಲ್ಲಿ ಎರಡರಿಂದ ಮೂರು ಮಂದಿ ಜಂಟಿ ಖಾತೆಯನ್ನು ಸಹ ತೆರೆಯಬಹುದು. ಈ ಖಾತೆಗೆ ಬದಲಾಗಿ ಪಡೆದ ಆದಾಯವನ್ನು ಪ್ರತಿಯೊಬ್ಬ ಸದಸ್ಯರಿಗೆ ಸಮಾನವಾಗಿ ನೀಡಲಾಗುತ್ತದೆ. ಜಂಟಿ ಖಾತೆಗಳನ್ನು ಯಾವುದೇ ಸಮಯದಲ್ಲಿ ಒಂದೇ ಖಾತೆಯಾಗಿ ಪರಿವರ್ತಿಸಬಹುದು. ಏಕ ಖಾತೆಯನ್ನು ಜಂಟಿ ಖಾತೆಯಾಗಿ ಪರಿವರ್ತಿಸಬಹುದು. ಖಾತೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲು ಎಲ್ಲಾ ಸದಸ್ಯರ ಜಂಟಿ ಅರ್ಜಿಯನ್ನು ನೀಡಬೇಕಾಗುತ್ತದೆ.


ಹಣವನ್ನು ಹಿಂತೆಗೆದುಕೊಳ್ಳುವ ಇರುವ ಷರತ್ತು ಏನು?
ವಿಶೇಷ ಸಂದರ್ಭದಲ್ಲಿ ಈ ಯೋಜನೆಯಲ್ಲಿ ಠೇವಣಿ ಇರಿಸಿದ ಹಣವನ್ನು ಮುಕ್ತಾಯಕ್ಕೆ ಮುಂಚೆಯೇ ಹಿಂಪಡೆಯಬಹುದು, ಆದರೆ ಹಾಗೆ ಮಾಡಿದ ನಂತರ ನೀವು ಸ್ವಲ್ಪ ಹಣವನ್ನು ಮರಳಿ ಪಡೆಯುತ್ತೀರಿ. ಖಾತೆ ಪ್ರಾರಂಭದಿಂದ ಒಂದು ವರ್ಷದವರೆಗೆ ನೀವು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ. ನೀವು ಒಂದು ವರ್ಷ ಮತ್ತು ಮೂರು ವರ್ಷಗಳ ನಡುವೆ ಹಣವನ್ನು ಹಿಂತೆಗೆದುಕೊಂಡರೆ, ನಂತರ ಠೇವಣಿಯ 2% ಕಡಿತಗೊಳಿಸಿ ಹಿಂದಿರುಗಿಸಲಾಗುತ್ತದೆ. ಖಾತೆಯನ್ನು ತೆರೆದ 3 ವರ್ಷಗಳ ನಂತರ ನೀವು ಮುಕ್ತಾಯಗೊಳ್ಳುವ ಮೊದಲು ಯಾವಾಗ ಬೇಕಾದರೂ ಹಣವನ್ನು ಹಿಂತೆಗೆದುಕೊಂಡರೆ, ನಿಮ್ಮ ಠೇವಣಿಯ 1% ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ.


ಈ ಯೋಜನೆ ಏಕೆ ವಿಶೇಷವಾಗಿದೆ?
ಈ ಯೋಜನೆಯಡಿಯಲ್ಲಿ ನೀವು ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದು. ಈ ಹೂಡಿಕೆಯ ಹಣದ ಮುಕ್ತಾಯವು ಐದು ವರ್ಷಗಳು ಪೂರ್ಣಗೊಂಡಾಗ ನೀವು ಅದನ್ನು ಮತ್ತೆ ಹೂಡಿಕೆ ಮಾಡಬಹುದು. ಖಾತೆದಾರನು ಅದರಲ್ಲಿ ನಾಮಿನಿಯನ್ನು ಸಹ ನೇಮಿಸಬಹುದು. ಯಾವುದೇ ಅಹಿತಕರ ಕಾರಣ ಖಾತೆದಾರರು ಮರಣ ಹೊಂದಿದರೆ ನಂತರ ನಾಮಿನಿ ಠೇವಣಿಗೆ ಅರ್ಹನಾಗಿರುತ್ತಾನೆ. ಈ ಯೋಜನೆಯಲ್ಲಿ ಒಂದು ವಿಶೇಷ ವಿಷಯವೆಂದರೆ ಅದು ಟಿಡಿಎಸ್ಗೆ ಒಳಗಾಗುವುದಿಲ್ಲ, ಆದರೆ ಈ ಹೂಡಿಕೆಯ ಬದಲಾಗಿ ಪಡೆದ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ.