ನವದೆಹಲಿ: ಆದಾಯ ತೆರೆಗೆ ಅಧಿಕಾರಿಗಳು ಕನಿಮೋಳಿ ಮನೆಯ ಮೇಲೆ ದಾಳಿ ಮಾಡಿದ ನಂತರ ಪ್ರತಿಕ್ರಿಯಿಸಿರುವ ಡಿಎಂಕೆ ಕನಿಮೋಳಿ ಕೇಂದ್ರದ ಎಲ್ಲ ಸಂಸ್ಥೆಗಳು ಬಿಜೆಪಿ ಪಕ್ಷದ ಭಾಗವಾಗಿವೆ ಎಂದು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು "ಕಳೆದ ಐದು ವರ್ಷಗಳಲ್ಲಿ ಪ್ರಾಯೋಗಿಕವಾಗಿ ಪ್ರತಿ ಸರ್ಕಾರಿ ಏಜೆನ್ಸಿಯನ್ನು ಬಿಜೆಪಿ ಬಳಸಿಕೊಂಡಿದೆ.ಅವೆಲ್ಲವೂ ಕೂಡ ಬಿಜೆಪಿಯ ಉದ್ದೇಶ ಮತ್ತು ಭಾವಾತಿರೇಕದ ಭಾಗವಾಗಿವೆ.ಸಿಬಿಐ, ಇಡಿ, ಚುನಾವಣಾ ಆಯೋಗ ಹೀಗೆ ಎಲ್ಲವೂ ರಾಜಿಯಾಗಿ ವಿರೋಧ ನಾಯಕರನ್ನು ಮಾತ್ರ ಗುರಿ ಮಾಡಲಾಗಿದೆ"ಎಂದರು. 


ಮಂಗಳವಾರದಂದು ತಮ್ಮ ಮನೆಯ ಆದಾಯ ತೆರಿಗೆ ಇಲಾಖೆ ದಾಳಿ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ನಡೆದಿದೆ.ಇದರಲ್ಲಿ ಪ್ರಮುಖವಾಗಿ ಪ್ರತಿಪಕ್ಷದ ನಾಯಕರು ಹಾಗೂ ಅಭ್ಯರ್ಥಿಗಳ ಮೇಲೆ ಮಾತ್ರ ದಾಳಿ ಮಾಡಲಾಗುತ್ತಿದೆ.ಇದು ನನಗೆ ಅನುಮಾನವನ್ನು ಸೃಷ್ಟಿಸಿದೆ ಎಂದು ಕನಿಮೋಳಿ ಹೇಳಿದರು.


ಇದೇ ವೇಳೆ ವೆಲ್ಲೂರು ಚುನಾವಣೆಯನ್ನು ಆಯೋಗವು ರದ್ದುಗೊಳಿಸಿರುವುದಕ್ಕೆ ಕನಿಮೋಳಿ ಕಿಡಿ ಕಾರಿದ್ದಾರೆ.ಅವರು ಯಾವ ಆಧಾರದ ಮೇಲೆ ಚುನಾವಣೆಯನ್ನು ರದ್ದುಗೊಳಿಸಿದ್ದಾರೆ ಎನ್ನುವುದು ನನಗೆ ಆರ್ಥವಾಗಿಲ್ಲ.ಏಕೆಂದರೆ ಚುನಾವಣಾ ಆಯೋಗ ರಾಷ್ಟ್ರಪತಿಗೆ ಚುನಾವಣೆಯನ್ನು ರದ್ದುಗೊಳಿಸಲು ಯಾವುದೇ ಪತ್ರವನ್ನು ಬರೆದಿಲ್ಲವೆಂದು ಹೇಳಿದೆ.ಚುನಾವಣಾ ಪ್ರಚಾರ ಮುಗಿದ ತಕ್ಷಣ ವೆಲ್ಲೂರ್ ಚುನಾವಣೆಯನ್ನು ರದ್ದುಪಡಿಸಲಾಗಿದೆ.ಈ ಕ್ರಮ ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿದ್ದು ಎಂದು ಹೇಳಿದರು.