Pornography Punishment in India: ಅಶ್ಲೀಲ ವಿಡಿಯೋ ನೋಡುವುದು ಸಾಮಾಜಿಕ ಪಿಡುಗೇ? ಅದು ಕಾನೂನು ಅಪರಾಧವೇ? ಇದರಿಂದ ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆಯಾಗುತ್ತಿದೆಯೇ? ಒಬ್ಬ ವ್ಯಕ್ತಿ ಅಶ್ಲೀಲ ವಿಡಿಯೋಗಳನ್ನು ನೋಡಿದರೆ ಏನಾಗುತ್ತದೆ? ಸಾರ್ವಜನಿಕ ಸ್ಥಳದಲ್ಲಿ ಅಂತಹ ವಿಡಿಯೋ ವೀಕ್ಷಿಸಿದರೆ ಆಗುವ ಸಮಸ್ಯೆಗಳೇನು? ಅವುಗಳ ಕುರಿತಾಗಿರುವ ಕಾನೂನು ನಿಬಂಧನೆಗಳೇನು? ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಕಾನೂನು ಕ್ರಮಗಳ ಬಗ್ಗೆ ಈ ವರದಿಯಲ್ಲಿ ವಿವರಣೆ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಮಾಡಿದೆ ಎಂದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟ ಶೋಯೆಬ್


ಒಬ್ಬ ವ್ಯಕ್ತಿ ಏಕಾಂಗಿಯಾಗಿ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರೆ, ಅದು ಅಪರಾಧವೇ? ಎಂಬ ವಿಷಯದ ಬಗ್ಗೆ ಕೇರಳ ಹೈಕೋರ್ಟ್‌ ನಿರ್ಧಾರ ಪ್ರಕಟಿಸಬೇಕಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್, “ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292 ರ ಅಡಿಯಲ್ಲಿ (ಐಪಿಸಿ 292 ಪೋರೋನೋಗ್ರಫಿ ವಿಷಯದ ಮೇಲೆ), ಒಬ್ಬ ವ್ಯಕ್ತಿಯು ಖಾಸಗಿಯಾಗಿ ಪೋರ್ನ್ ವೀಕ್ಷಿಸಿದರೆ ಅದು ಅಪರಾಧವಲ್ಲ, ಆದರೆ ಸಾರ್ವಜನಿಕವಾಗಿ ನೋಡುತ್ತಿದ್ದರೆ ಅದು ಅಪರಾಧವಾಗುತ್ತದೆ” ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರ ಪೀಠವು ಸ್ಪಷ್ಟವಾಗಿ ಹೇಳಿದೆ.


ಭಾರತದಲ್ಲಿ ಅಶ್ಲೀಲತೆಗೆ ಸಂಬಂಧಿಸಿದಂತೆ ಇರುವ ಕಾನೂನುಗಳು:


  • ಸಾರ್ವಜನಿಕವಾಗಿ ಅಶ್ಲೀಲ ವಿಡಿಯೋ ವೀಕ್ಷಿಸಿದರೆ ಅಥವಾ ತೋರಿಸಿದರೆ, ಐಟಿ ಕಾಯ್ದೆಯ ಸೆಕ್ಷನ್ 67, 67 ಎ, 67 ಬಿ ಅಡಿಯಲ್ಲಿ ಜೈಲು ಮತ್ತು ದಂಡವನ್ನು ವಿಧಿಸುವ ಅವಕಾಶವಿದೆ.

  • ಸೆಕ್ಷನ್ 67 ರ ಅಡಿಯಲ್ಲಿ, ನೀವು ಸಾರ್ವಜನಿಕವಾಗಿ ಪೋರ್ನ್ ವೀಕ್ಷಿಸಿದರೆ, ಡೌನ್‌ಲೋಡ್ ಮಾಡಿದರೆ ಅಥವಾ ವೈರಲ್ ಮಾಡಿದರೆ, ಮೊದಲ ಅಪರಾಧಕ್ಕೆ 3 ವರ್ಷ ಜೈಲು ಮತ್ತು 5 ಲಕ್ಷ ರೂಪಾಯಿ ದಂಡ, ಎರಡನೇ ಅಪರಾಧಕ್ಕೆ 5 ವರ್ಷ ಜೈಲು ಮತ್ತು 10 ಲಕ್ಷ ರೂ.ದಂಡ ವಿಧಿಸಲಾಗುತ್ತದೆ.

  • ಸೆಕ್ಷನ್ 67A ಅಡಿಯಲ್ಲಿ, ಮೊಬೈಲ್‌ನಲ್ಲಿ ಪೋರ್ನ್ ವಿಷಯವನ್ನು ಇಟ್ಟುಕೊಂಡು ಅದನ್ನು ವೈರಲ್ ಮಾಡಿದರೆ, ಮೊದಲ ಪ್ರಕರಣದಲ್ಲಿ ಐದು ವರ್ಷ ಜೈಲು ಮತ್ತು 10 ಲಕ್ಷ ರೂ. ದಂಡ, ಎರಡನೇ ಅಪರಾಧಕ್ಕೆ ಏಳು ವರ್ಷ ಜೈಲು ಹಾಗೂ 10 ಲಕ್ಷ ರೂ ವಿಧಿಸಲಾಗುತ್ತದೆ.

  • ಸೆಕ್ಷನ್ 67 ಬಿ ಅಡಿಯಲ್ಲಿ, ಮೊಬೈಲ್‌’ನಲ್ಲಿ ಮಕ್ಕಳ ಪೋರ್ನ್ ವಿಡಿಯೋ ಅಥವಾ ಫೋಟೋ ಕಂಡುಬಂದರೆ ಮೊದಲ ಬಾರಿಗೆ 5 ವರ್ಷ ಜೈಲು ಮತ್ತು 10 ಲಕ್ಷ ರೂ. ದಂಡ, ಎರಡನೇ ಅಪರಾಧಕ್ಕೆ ಏಳು ವರ್ಷ ಜೈಲು ಹಾಗೂ 10 ಲಕ್ಷ ರೂ ವಿಧಿಸಲಾಗುತ್ತದೆ.

  • ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡಿದರೆ, ವಿತರಿಸಿದರೆ ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸಿದರೆ, IPC ಯ ಸೆಕ್ಷನ್ 292 ಮತ್ತು 293ರ ಅಡಿಯಲ್ಲಿ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2,000 ರೂ. ದಂಡ ವಿಧಿಸಲಾಗುತ್ತದೆ. ಇಂತಹದ್ದೇ ಪ್ರಕರಣದಲ್ಲಿ  ಎರಡನೇ ಬಾರಿ ಸಿಕ್ಕಿಬಿದ್ದರೆ ಐದು ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

  • ಸೆಕ್ಷನ್ 293ರ ಅಡಿಯಲ್ಲಿ, 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಶ್ಲೀಲ ವಸ್ತುಗಳನ್ನು ಹಂಚಿಕೊಂಡು, ಮೊದಲ ಬಾರಿಗೆ ತಪ್ಪಿತಸ್ಥರೆಂದು ಕಂಡುಬಂದರೆ, 3 ವರ್ಷಗಳವರೆಗೆ ಜೈಲು ಮತ್ತು 2,000 ರೂ. ದಂಡ ಇರುತ್ತದೆ. ಎರಡನೇ ಬಾರಿ ತಪ್ಪು ಮಾಡಿದರೆ ಏಳು ವರ್ಷಗಳವರೆಗೆ ಜೈಲು ಮತ್ತು 5,000 ರೂ. ದಂಡ ಖಚಿತವಾಗಿರುತ್ತದೆ.

  • POCSO ಅಡಿಯಲ್ಲಿ ಶಿಕ್ಷೆಗೆ ಕಟ್ಟುನಿಟ್ಟಾದ ನಿಬಂಧನೆಗಳಿವೆ. ಸೆಕ್ಷನ್ 14ರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಅಶ್ಲೀಲ ವಿಷಯಕ್ಕೆ ಮಕ್ಕಳನ್ನು ಬಳಸಿದರೆ, ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ಸಹ ಪಾವತಿಸಬೇಕಾಗುತ್ತದೆ.

  • POCSO ಕಾಯಿದೆ 15ರ ಅಡಿಯಲ್ಲಿ, ಯಾರಾದರೂ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಷಯವನ್ನು ಹೊಂದಿದ್ದರೆ, ಅವರು ಮೂರು ವರ್ಷಗಳವರೆಗೆ ಜೈಲು, ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ.


ಕೇರಳ ಹೈಕೋರ್ಟ್ ಹೇಳಿಕೆಯಲ್ಲಿ ಏನಿದೆ?


ಅಶ್ಲೀಲ ವಿಡಿಯೋಗಳು ಇತ್ತೀಚಿಗೆಯ ಸಂಗತಿಯಲ್ಲ… ಶತಮಾನಗಳಷ್ಟು ಹಳೆಯ ವಿಚಾರವಾಗಿದೆ. ಆದರೆ ಬದಲಾಗುತ್ತಿರುವ ಕಾಲದಲ್ಲಿ ಪ್ರತಿಯೊಬ್ಬರೂ ಇಂಟರ್ನೆಟ್ ಆಕ್ಸೆಸ್ ಹೊಂದಿದ್ದರಿಂದ ಪೋರ್ನ್ ನೋಡುವುದು ಸುಲಭವಾಗಿದೆ ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಹೇಳಿದ್ದಾರೆ. “ಪೋರ್ನ್ ನೋಡುವುದು ಅಥವಾ ನೋಡದಿರುವುದು ಪ್ರತಿಯೊಬ್ಬ ವ್ಯಕ್ತಿಯ ಆಯ್ಕೆಯಾಗಿದೆ. ಒಂದು ವೇಳೆ ನಿರ್ಬಂಧಿಸಿದರೆ ಅದು ಅವರ ವೈಯಕ್ತಿಕ ಜೀವನದ ಮೇಲೆ ಹಸ್ತಕ್ಷೇಪ ಮಾಡಿದಂತೆ. ಇದೊಂದು ರೀತಿಯಲ್ಲಿ ಹೇರಿಕೆಯಂತೆ” ಎಂದಿದ್ದಾರೆ. ಇದೇ ಸಂದರ್ಭದಲ್ಲಿ 2015 ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ, “ಖಾಸಗಿಯಾಗಿ ಪೋರ್ನ್ ನೋಡುವುದು ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುತ್ತದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: 2024ರ ವರ್ಷ ಈ ರಾಶಿಯವರಿಗೆ ಸುವರ್ಣ ಕಾಲ!  ಹಿಡಿದ ಕೆಲಸದಲ್ಲಿ ಸೋಲಿಲ್ಲ! ಮಣ್ಣು ಕೂಡಾ ಹೊನ್ನಾಗುವ ಸಮಯ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ